BS Yadiyurappa: ದಸರಾ ಹಬ್ಬದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇವೆ: ಬಿ.ಎಸ್.ಯಡಿಯೂರಪ್ಪ!
ಬೆಂಗಳೂರು: ಈಗಾಗಲೇ ರಾಜ್ಯ ಪ್ರವಾಸ ಆರಂಭಿಸಬೇಕಿತ್ತು. ಹಬ್ಬ ಎಲ್ಲ ಮುಗಿಯಲಿ ಅಂತ ಸುಮ್ಮನಿದ್ದೇನೆ. ದಸರಾ ಹಬ್ಬ ಮುಗಿದ ಬಳಿಕ ಎಲ್ಲೂರು ಒಟ್ಟಿಗೆ ಪ್ರವಾಸ ಮಾಡ್ತೀವಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್ ಯಡಿಯೂರಪ್ಪ ಹೇಳಿದರು.
ಬಿಜೆಪಿ ತೊರೆದು ಯಾರೂ ಕಾಂಗ್ರೆಸ್ಗೆ ಹೋಗ್ತಿಲ್ಲ: MLC ರವಿಕುಮಾರ್
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಸ್ಇಪಿ ಶಿಕ್ಷಣ ತಜ್ಞರ ನೇಮಕ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದರು.
ಬೆಳಗಾವಿಯಲ್ಲಿ ದೊಡ್ಡ ಸೌಧ ಕಟ್ಟಿದ್ದೇವೆ. ಅಷ್ಟೆಲ್ಲಾ ಖರ್ಚು ಮಾಡಿ ಸೌಧ ಕಟ್ಟಿದ್ದೇವೆ. ಅಲ್ಲಿ ಅಧಿವೇಶನ ನಡೆಯಲಿಲ್ಲ ಅಂದ್ರೆ ಏನು ಪ್ರಯೋಜನ? ಅಂತಿಮವಾಗಿ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೆ ಅದು ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರವಾಗಿ ಮಾತನಾಡಿ, ಈಗಾಗಲೇ ಲೋಡ್ ಶೆಡ್ಡಿಂಗ್ ಶುರು ಆಗಿದೆ. ವಿದ್ಯುತ್ ಶಾಖ್ ಎಲ್ಲರಿಗೂ ಆಗಿದೆ. ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಯಡಿಯೂರಪ್ಪ ಹೇಳಿದರು.
The post BS Yadiyurappa: ದಸರಾ ಹಬ್ಬದ ಬಳಿಕ ರಾಜ್ಯ ಪ್ರವಾಸ ಮಾಡುತ್ತೇವೆ: ಬಿ.ಎಸ್.ಯಡಿಯೂರಪ್ಪ! appeared first on Ain Live News.