Home ಬೆಂಗಳೂರು ನಗರ ಮಲ್ಲೇಶ್ವರಂ: ಜಲಮಂಡಳಿ ಕೊಳವೆ ಮಾರ್ಗ ಕಾಮಗಾರಿಗೆ ಚಾಲನೆ

ಮಲ್ಲೇಶ್ವರಂ: ಜಲಮಂಡಳಿ ಕೊಳವೆ ಮಾರ್ಗ ಕಾಮಗಾರಿಗೆ ಚಾಲನೆ

31
0
BWSSB's new Waterline works begins in Malleshwaram Constituency
Advertisement
bengaluru

ಬೆಂಗಳೂರು:

ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಡಿಸೆಂಬರ್ ವೇಳೆಗೆ 15 ಸಾವಿರ ಮನೆಗಳಿಗೆ ಹೊಸದಾಗಿ ನಲ್ಲಿ ಸಂಪರ್ಕ ಕೊಡುವ ಜತೆಗೆ ಶಿಥಿಲವಾಗಿರುವ ಒಂದೂವರೆ ಸಾವಿರ ಮ್ಯಾನ್ ಹೋಲ್ ಗಳನ್ನು ಬದಲಿಸಲಾಗುವುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ತಮ್ಮ ಕ್ಷೇತ್ರದ ವ್ಯಾಪ್ತಿಯ ನಾಲ್ಕು ಕಡೆಗಳಲ್ಲಿ ಅವರು ಮಂಗಳವಾರ ನೀರಿನ ಕೊಳವೆ ಮಾರ್ಗ ಬದಲಾವಣೆ ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದರು.

BWSSB's new Waterline works begins in Malleshwaram Constituency

ಕ್ಷೇತ್ರದಲ್ಲಿ ಈ ಯೋಜನೆಯಡಿಯಲ್ಲಿ 30 ಕೋಟಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಇದರಡಿಯಲ್ಲಿ ಎಚ್ಎಂಟಿ ರಸ್ತೆ, ಸುಬೇದಾರ್ ಪಾಳ್ಯ, ಗಾಯತ್ರಿ ನಗರ ಮತ್ತು ಭುವನೇಶ್ವರಿ ನಗರಗಳ ವ್ಯಾಪ್ತಿಯಲ್ಲಿ ನೀರಿನ ಕೊಳವೆ ಬದಲಾವಣೆ, ಮ್ಯಾನ್ ಹೋಲುಗಳ ಬದಲಾವಣೆ, ಹಳೆಯ ಕೊಳಾಯಿ ಸಂಪರ್ಕದ ಜಾಗದಲ್ಲಿ ಹೊಸ ಸಂಪರ್ಕಗಳನ್ನು ಪೂರೈಸಲಾಗುವುದು ಎಂದು ಅವರು ಹೇಳಿದರು.

bengaluru bengaluru

ಜನರಿಗೆ ಸಂಪೂರ್ಣ ಪರಿಶುದ್ಧವಾದ, ಕಲುಷಿತವಲ್ಲದ ಕುಡಿಯುವ ನೀರನ್ನು ಪೂರೈಸುವ ಗುರಿಯಿಂದ ಈ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಜೊತೆಗೆ, ಈಗ ಶೇ.25ರಷ್ಟು ನೀರು ಪೋಲಾಗುತ್ತಿದ್ದು, ಇದನ್ನು ಶೇ.10ಕ್ಕೆ ಇಳಿಸಲಾಗುವುದು. ಇದಕ್ಕಾಗಿ ಕಾಮಗಾರಿಯನ್ನು ವೈಜ್ಞಾನಿಕವಾಗಿ ವಿನ್ಯಾಸ ಮಾಡಲಾಗಿದೆ.  ಕ್ಷೇತ್ರದ ವ್ಯಾಪ್ತಿಯಲ್ಲಿ ಈಗಾಗಲೇ ಶೇ.60ರಷ್ಟು ಕೊಳವೆ ಮಾರ್ಗವನ್ನು ಬದಲಿಸಲಾಗಿದೆ ಎಂದು ಅವರು ನುಡಿದರು.

ಬಾಕಿ ಉಳಿದಿರುವ ಕೆಲಸಗಳಿಗೆ ಸಂಬಂಧಿಸಿದಂತೆ ಇನ್ನೊಂದು ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಇದಕ್ಕೆ ಕೂಡ ಸದ್ಯದಲ್ಲೇ ಅನುಮೋದನೆ ಸಿಗಲಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಮಲ್ಲೇಶ್ವರಂ ಘಟಕದ ಹಲವು ನಾಯಕರು ಉಪಸ್ಥಿತರಿದ್ದರು.


bengaluru

LEAVE A REPLY

Please enter your comment!
Please enter your name here