ಹಾವೇರಿ: ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ (Byadagi chilli) ಮಾರುಕಟ್ಟೆಯಲ್ಲಿ ದರ ಕುಸಿತದಿಂದ ರೊಚ್ಚಿಗೆದ್ದ ರೈತರು, ಎಪಿಎಂಸಿ ಕಚೇರಿಗೆ ಕಲ್ಲುತೂರಿ, ಕಾರಿಗೆ ಬೆಂಕಿ ಹಚ್ಚಿದ್ದಾರೆ.
ದರ ದಿಢೀರ್ ಇಳಿಕೆಯಿಂದ ಆಕ್ರೋಶಗೊಂಡಿರುವ ರೈತರು ರೊಚ್ಚಿಗೆದ್ದು ಮೆಣಸಿನಕಾಯಿಗೆ ಬೆಂಕಿ ಹಚ್ಚಿ ಗಲಾಟೆ ಮಾಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಮಾರುಕಟ್ಟೆಯನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.
ಕಳೆದ ವಾರ ಪ್ರತಿ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 20 ಸಾವಿರ ರೂ. ವಿತ್ತು. ಈಗ ಕ್ವಿಂಟಾಲ್ ಮೆಣಸಿನಕಾಯಿ ಬೆಲೆ 12 ಸಾವಿರ ರೂ. ಕುಸಿತ ಹಿನ್ನೆಲೆ ಬ್ಯಾಡಗಿ ಎಪಿಎಂಸಿ ಕಚೇರಿಯಲ್ಲಿದ್ದ ಪೀಠೋಪಕರಣ ಧ್ವಂಸ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಪ್ರತಿಕ್ರಿಯೆ ನೀಡಿ ಮೆಣಸಿಕಾಯಿ ರೆಟ್ ಬಗ್ಗೆ ಗಲಾಟೆ ಆಗಿ ಮೂವರು ಸಿಬ್ಬಂದಿಗೆ ಗಾಯ ಆಗಿದೆ. ಓರ್ವ ವ್ಯಕ್ತಿಗೂ ಗಾಯ ಆಗಿದೆ. ಇದರಲ್ಲಿ ಯಾರಾರು ಇನ್ವಾಲ್ವ್ ಆಗಿದಾರೆ. ತನಿಖೆ ಮಾಡ್ತಾ ಇದೆವಿ ಸಂಪೂರ್ಣ ಮಾಹಿತಿ ಶೀಘ್ರವೇ ಕೊಡುತ್ತೇವೆ ಎಂದರು.