Home ರಾಜಕೀಯ ‘ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಪರಮಾಧಿಕಾರ’

‘ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಪರಮಾಧಿಕಾರ’

54
0

ವರಿಷ್ಠರು ತೀರ್ಮಾನ ಮಾಡುತ್ತಾರೆ: ಸಚಿವ ಆರ್. ಅಶೋಕ್

ಬೆಂಗಳೂರು:

ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳಿಗೆ ಸಂವಿಧಾನದತ್ತ ಪರಮಾಧಿ ಕಾರವಾಗಿದ್ದರೂ ನಮ್ಮದು ರಾಷ್ಟ್ರೀಯ ಪಕ್ಷವಾಗಿರುವ ಕಾರಣ ವರಿಷ್ಠರ ಜತೆ ಚರ್ಚಿಸಿದ ನಂತರವೇ ಎಲ್ಲ ನಿರ್ಧಾರ ಕೈಗೊಳ್ಳಲಾಗುತ್ತದೆ ಸಂಪುಟ ವಿಸ್ತರಣೆ ವಿಷಯದಲ್ಲೂ ವರಿಷ್ಠರೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಗೋವಿಂದರಾಜ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸಂಪುಟ ವಿಸ್ತರಣೆ ಕುರಿತು ಇಲ್ಲಿ ಯಾ ವುದೇ ಚರ್ಚೆಯಿಲ್ಲ.ಅದನ್ನು ಕೇಂದ್ರದ ವರಿಷ್ಠರ ಚರ್ಚೆಗೆ ಬಿಟ್ಟಿದ್ದೇವೆ.ಕೇಂದ್ರದ ನಾಯಕರ ಸೂಚನೆ ನೀಡುವ ರೀತಿ ಸಂಪುಟ ವಿಸ್ತರಣೆ ವಿಚಾರದಲ್ಲಿ ಮುಂದುವರೆಯಲಾಗುತ್ತದೆ.ನಮ್ಮದು ರಾಷ್ಟ್ರೀ ಯ ಪಕ್ಷ. ಸಂವಿಧಾನದತ್ತ ಅಧಿಕಾರ ಮುಖ್ಯಮಂತ್ರಿಗಳಿಗೆ ಇದ್ದರೂ ಕೂಡ ಮುಖ್ಯಮಂತ್ರಿಗಳಾದ ಚರ್ಚೆ ಮಾಡಿ ಕೇಂದ್ರದ ನಾಯಕರು‌ ಸಚಿವರ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ.ಅಂತಿಮವಾಗಿ ವರಿಷ್ಠರೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

ಇಂದು ಸಂಪುಟ ವಿಸ್ತರಣೆ ಸಂಬಂಧ ಯಾವುದೇ ಚರ್ಚೆ ನಡೆಯುವುದಿಲ್ಲ.ರಾಜ್ಯ ಉಸ್ತುವಾರಿಗಳು ನನ್ನನ್ನು ಸೇರಿದಂತೆ ಕೆಲ ಮುಖಂಡರನ್ನು ಕರೆಸಿಕೊಳ್ಳುತ್ತಿದ್ದಾರೆ ಮಾತುಕತೆ ನಡೆಸಲಿದ್ದಾರೆ.ಆದರೆ ಅದು ಸಂಪುಟ ವಿಸ್ತ ರಣೆಗೆ ಸಂಬಂಧಪಟ್ಟಿದ್ದಲ್ಲ ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಚರ್ಚೆಗಳು ನಡೆಯುತ್ತಿವೆಯೇ ಹೊರತು ಬೇರೆ ದೃಷ್ಟಿಯಿಂದ ಚರ್ಚೆ ಅಲ್ಲ.ನಾವು ಹೋಗುತ್ತಿರುವುದು ಮಂತ್ರಿಮಂಡಲದ ಚರ್ಚೆಗೆ ಅಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಅಧಿವೇಶನದ ನಂತರ ಸಂಪುಟ ವಿಸ್ತರಣೆ ಆಗುತ್ತೋ ಈಗಲೇ ಆಗುತ್ತದೆಯೋ ಏನೋ ಗೊತ್ತಿಲ್ಲ ಯಡಿಯೂರ ಪ್ಪನವರು ಮತ್ತು ವರಿಷ್ಠರ ನಿರ್ಧಾರವೇ ಅಂತಿಮವಾಗಲಿದೆ.ಯಾವಾಗ ವಿಸ್ತರಣೆ ಮಾಡಬೇಕು ಯಾವಾಗ ಸಂ ದರ್ಭ ಒಳ್ಳೆಯದು ಎನ್ನುವುದನ್ನು ಮುಖ್ಯಮಂತ್ರಿ ಮತ್ತು ಕೇಂದ್ರದ ನಾಯಕರು ಮಾಡಲಿದ್ದಾರೆ ಅದರಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ಬಿಬಿಎಂಪಿ ಚುನಾವಣೆ ಸಂಬಂಧ ನಡೆದ ಸಭೆಯಲ್ಲಿ ಯಾವುದೇ ಒಡಕು ಸೃಷ್ಟಿಯಾಗಿಲ್ಲ.ಕೋರ್ ಕಮಿಟಿ ಸದಸ್ಯರಾದ ಕಾರಣ ನಾನು ಬೆಳಗಾವಿಯಲ್ಲಿ ಇದ್ದೆ.ಹಾಗಾಗಿ ನಾನು ಸಭೆಯಲ್ಲಿ ಭಾಗಿಯಾಗಿರಲಿಲ್ಲ ಚುನಾವಣೆ ಮಾಡುವ ದೃಷ್ಟಿಯಿಂದ ಈಗಾಗಲೇ ಹಲವಾರು ಸಭೆಗಳನ್ನು ಮಾಡಲಾಗಿದೆ.ಯಾವ ರೀತಿಯ ಗೊಂದಲಗಳು ಇಲ್ಲ.ಕಾರಣಾಂತರಗಳಿಂದ ಸೋಮಣ್ಣ ಸಭೆಗೆ ಹೋಗಿರಲಿಲ್ಲ.ಬಿಜೆಪಿ ಬಿಬಿಎಂಪಿಯಲ್ಲಿ ಗೆಲ್ಲಬೇಕು ಎನ್ನುವು ದಷ್ಟೇ ನಮ್ಮ ಮುಂದಿರುವ ವಿಷಯ.ನಮ್ಮಲ್ಲಿ ಯಾವುದೇ ಒಡಕಿಲ್ಲ ಎಂದರು.

ಕುಮಾರಸ್ವಾಮಿ ನಿನ್ನೆ ಮನದಾಳದ ಮಾತುಗಳನ್ನು ಆಡಿದ್ದಾರೆ ಕಾಂಗ್ರೆಸ್ ಯಾವತ್ತಿದ್ದರೂ ಒಂದು ರೀತಿಯ ವಿಷ.ವಿಷವನ್ನ ಸ್ವಲ್ಪ ಕುಡಿದರು ನಿಧಾನವಾಗಿ ಏರುತ್ತದೆ ಜಾಸ್ತಿ ಕುಡಿದರೆ ಬೇಗ ಸಾಯುತ್ತಾರೆ.ಆ ರೀತಿ ಜೆಡಿಎಸ್ ಕಾಂಗ್ರೆಸ್ ನ ಸಹವಾಸ ಮಾಡಿ ಒಂದು ವರ್ಷಕ್ಕೆ ಪತನಗೊಂಡಿದೆ.ಕಾಂಗ್ರೆಸ್ ನವರ ವಿಷ ಸ್ವಲ್ಪ ಜಾಸ್ತಿಯಾಗಿತ್ತು ಅದಕ್ಕಾಗಿ ಬೇಗ ಸರ್ಕಾರ ಬಿದ್ದುಹೋಯಿತು.ಇದರಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ ಆಪರೇಷನ್ ಕಮಲ ನಡೆದಿ ದ್ದಲ್ಲ.ಕಾಂಗ್ರೆಸ್ಸಿನ ಆಪರೇಷನ್ ನಡೆಸಿದ್ದು.ಕಾಂಗ್ರೆಸ್ಸಿನ ಆಪರೇಷನ್,ಸರ್ಜಿಕಲ್ ಸ್ಟ್ರೈಕ್ ಗೆ ಬಲಿಪಶುವಾಗಿ ಕುಮಾರಸ್ವಾಮಿ ಸರ್ಕಾರ ಬಿದ್ದುಹೋಯಿತು.ಇದರಿಂದ ಬಿಜೆಪಿ ಸರ್ಕಾರ ವನ್ನು ಬೀಳಿಸಿಲ್ಲ ಎನ್ನುವ ಸ್ಪಷ್ಟತೆ ರಾಜ್ಯದ ಜನತೆಗೆ ಸಿಕ್ಕಿದೆ ಎಂದರು.

ಯಾವ ಪಕ್ಷ ಸರ್ಕಾರವನ್ನು ಬೀಳಿಸಿತು.ಯಾವ ಪಕ್ಷ ಕುಮಾರಸ್ವಾಮಿಗೆ ದ್ರೋಹ ಬಗೆಯಿತು.ಜೊತೆ ಜೊತೆಯಲ್ಲಿ ಇದ್ದು ಜೊತೆ ಜೊತೆಯಲ್ಲಿ ಮಾತನಾಡುತ್ತಲೇ ವಿಷದ ಇಂಜೆಕ್ಷನ್ನು ನೀಡಿದ್ದು ಕಾಂಗ್ರೆಸ್ ಪಕ್ಷ ಎಂದು ಈಗ ಅವ ರಿಗೆ ಜ್ಞಾನೋದಯವಾಗಿದೆ.ಹಿಂದೆ ಮೈತ್ರಿ ಸರ್ಕಾರ ಬಿಜೆಪಿ ಜೊತೆಯಲ್ಲಿ ಇದ್ದಾಗ ಕುಮಾರಸ್ವಾಮಿಗೆ ವರ್ಚಸ್ಸು ಸಿಕ್ಕಿತ್ತು ಪಾಪ್ಯುಲರ್ ಮುಖ್ಯಮಂತ್ರಿ ಆಗಿದ್ದರು.ಅವರ ಗ್ರಾಮ ವಾಸ್ತವ್ಯದಿಂದ ಇಡೀ ದೇಶದಲ್ಲಿ ಖ್ಯಾತಿ ಪಡೆದಿ ದ್ದರು.ನಾವೆಲ್ಲಾ ಅಂದು ಸಹಕಾರ ಕೊಟ್ಡಿದ್ದೆವು ಆದರೆ ಕಾಂಗ್ರೆಸ್ ದಿನನಿತ್ಯ ಕಿರುಕುಳ ನೀಡಿತು ಮಾನಸಿಕ ಹಿಂಸೆ ಎಲ್ಲವನ್ನು ಕೊಟ್ಟು ವಿಷವನ್ನು ಹಾಕಿ ಸರ್ಕಾರವನ್ನೇ ಪತನಗೊ ಳಿಸಿತು. ಹಾಗಾಗಿ ಸರ್ಕಾರ ಬಿದ್ದಿದ್ದು ಕಾಂಗ್ರೆಸ್ ನಿಂದ ಎಂದು ಜಗಜ್ಜಾಹೀರಾಗಿದೆ.ಯಾರು ಇನ್ನು ಮುಂದೆ ಕಾಂಗ್ರೆಸನ್ನು ನಂಬಬೇಡಿ ಎಂದು ಪ್ರತಿ ಪಕ್ಷದವರು ಹೇಳುತ್ತಿದ್ದಾರೆ.ಕಾಂಗ್ರೆಸ್ಸನ್ನು ನಂಬಬೇಡಿ ಕಾಂಗ್ರೆಸನ್ನು ನಂಬಿದರೆ ನಿಮಗೆ ವಿಷ ಹಾಕುತ್ತಾರೆ ಎಂದು ಪ್ರತಿ ಪಕ್ಷ ದವರು ಹೇಳಿದ್ದಾರೆ.ಹಾಗಾಗಿ ಕಾಂಗ್ರೆಸ್ಸಿನ ಕಥೆ ಗೋವಿಂದ ಗೋವಿಂದ ಗೋವಿಂದ ಎಂದು ವ್ಯಂಗ್ಯವಾಡಿದರು.

LEAVE A REPLY

Please enter your comment!
Please enter your name here