Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • 140+ ಶಾಸಕರ ಬೆಂಬಲದ ಈ ಸರ್ಕಾರವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಕಿತ್ತುಹಾಕುವುದುಸಾಧ್ಯವೇ? ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್
  • ರಾಜಕೀಯ
  • ಕರ್ನಾಟಕ
  • ಬಳ್ಳಾರಿ

140+ ಶಾಸಕರ ಬೆಂಬಲದ ಈ ಸರ್ಕಾರವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಕಿತ್ತುಹಾಕುವುದುಸಾಧ್ಯವೇ? ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್

The Bengaluru Live December 8, 2024 6:00 PM 1 minute read
140+ ಶಾಸಕರ ಬೆಂಬಲದ ಈ ಸರ್ಕಾರವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಕಿತ್ತುಹಾಕುವುದುಸಾಧ್ಯವೇ? ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್

140+ ಶಾಸಕರ ಬೆಂಬಲದ ಈ ಸರ್ಕಾರವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಕಿತ್ತುಹಾಕುವುದುಸಾಧ್ಯವೇ? ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬಳ್ಳಾರಿ, ಡಿ.08: 140+ ಶಾಸಕರ ಬೆಂಬಲದ ಈ ಸರ್ಕಾರವನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಬಿಜೆಪಿ ಜತೆ ಸೇರಿ ಆರು ತಿಂಗಳಲ್ಲಿ ಕಿತ್ತುಹಾಕುವುದಾಗಿ ಹೇಳುತ್ತಾರೆ. ಇದು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.

ಸಂಡೂರು ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಮ್ ಅವರನ್ನು ಗೆಲ್ಲಿಸಿದ್ದ ಹಿನ್ನೆಲೆಯಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಶಿವಕುಮಾರ್ ಅವರು ಭಾನುವಾರ ಮಾತನಾಡಿದರು.

ಸಂಡೂರು ಕ್ಷೇತ್ರದ ಜನ ನಿರಂತರವಾಗಿ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ನೀಡುತ್ತಾ ಬಂದಿದ್ದೀರಿ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 136 ಸೀಟು ಗೆಲ್ಲುತ್ತೇವೆ ಎಂದು ಹೇಳಿದಾಗ ಅನೇಕರು ನಕ್ಕರು. ಉಪಚುನಾವಣೆ ಪ್ರಚಾರಕ್ಕೆ ಬಂದಾಗಲೂ ನಮ್ಮ ಸಂಖ್ಯಾಬಲ 138ಕ್ಕೆ ಏರಿಕೆಯಾಗಲಿದೆ ಎಂದು ಹೇಳಿದ್ದೆ. ಅದರಂತೆ ಅನ್ನಪೂರ್ಣ ಅವರ ಗೆಲುವಿನಿಂದ 138 ಸ್ಥಾನ ಬಂದಿದೆ.

ನಮ್ಮ ಪಕ್ಷದಿಂದ ಬಂಡಾಯ ಅಭ್ಯರ್ಥಿಯಾಗಿ ಗೆದ್ದ ಎಂ.ಪಿ ಪ್ರಕಾಶ್ ಅವರ ಪುತ್ರಿ ಹಾಗೂ ಗೌರಿಬಿದನೂರಿನ ಪುಟ್ಟಸ್ವಾಮಿ ಗೌಡರು ಸೇರಿದರೆ ನಮ್ಮ ಸಂಖ್ಯೆ 140 ಆಗುತ್ತದೆ. ಇದರ ಜತೆಗೆ ನಮ್ಮ ಬಿಜೆಪಿ ಸ್ನೇಹಿತರೂ ಇದ್ದಾರೆ.

“ಅನ್ನಪೂರ್ಣ ಅವರನ್ನು ಗೆಲ್ಲಿಸುವ ಮೂಲಕ ಜನರು 2028ರ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆದಿದ್ದಾರೆ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಶಕ್ತಿ ತುಂಬಿ ರಾಜ್ಯಕ್ಕೆ ಸಂದೇಶ ರವಾನಿಸಿರುವ ಸಂಡೂರು ಮಹಾಜನತೆಗೆ ಕೃತಜ್ಞತೆ ಸಲ್ಲಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಾವೆಲ್ಲರೂ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ. ಅಧಿಕಾರ ನಶ್ವರ, ಕಾಂಗ್ರೆಸ್ ಸರ್ಕಾರದ ಸಾಧನೆಗಳು ಅಜರಾಮರ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಈಶ್ವರ ಎಂದು ಭಾವಿಸಿ ನಿಮಗೆ ನಮನ ಸಲ್ಲಿಸಲು ನಾನು, ಮುಖ್ಯಮಂತ್ರಿಗಳು ಹಾಗೂ ನಮ್ಮ ನಾಯಕರೆಲ್ಲರೂ ಬಹಳ ಸಂತೋಷದಿಂದ ಆಗಮಿಸಿದ್ದೇವೆ,” ” ಎಂದು ಶಿವಕುಮಾರ್ ತಿಳಿಸಿದರು.

ಮಹಾತ್ಮಾ ಗಾಂಧೀಜಿ ಅವರು ಸಂಡೂರನ್ನು ಕರ್ನಾಟಕದ ಕಾಶ್ಮೀರ ಎಂದು ಕರೆದಿದ್ದರು. ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನಡೆಸಿದ ಬೆಳಗಾವಿ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ.

ಗಾಂಧೀಜಿ ಅವರು ನೂರು ವರ್ಷಗಳ ಹಿಂದೆ ಸ್ವೀಕಾರ ಮಾಡಿದ ಸ್ಥಾನದಲ್ಲಿ ಇಂದು ಈ ಕಲ್ಯಾಣ ಕರ್ನಾಟಕ ಭಾಗದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಇದ್ದಾರೆ. ಅವರ ಮಾರ್ಗದರ್ಶನದಂತೆ ನಾನು ಹಾಗೂ ಸಿದ್ದರಾಮಯ್ಯ ಅವರು ಶತಮಾನೋತ್ಸವ ಸಂಭ್ರಮವನ್ನು ಇಡೀ ವರ್ಷ ಆಚರಣೆ ಮಾಡಲು ಮುಂದಾಗಿದ್ದೇವೆ. ಅದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ.

ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ: ತುಂಗಭದ್ರಾ ಅಣೆಕಟ್ಟಿನ ಕ್ರೇಸ್ಟ್ ಗೇಟ್ ಒಡೆದಾಗ ವಿರೋಧ ಪಕ್ಷಗಳ ನಾಯಕರಿಂದ ಟೀಕೆಗಳ ಸುರಿಮಳೆ ಬಂದವು. ಅಶೋಕ್, ಜನಾರ್ಧನ ರೆಡ್ಡಿ ಸೇರಿದಂತೆ ಬಿಜೆಪಿ ನಾಯಕರು ಟೀಕೆ ಮಾಡಿದರು. ಆಗ ನಾನು ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿದೆ.

ಈ ಕ್ಷೇತ್ರದಲ್ಲಿ ಇನ್ನು ಹೆಚ್ಚಿನ ಮತಗಳ ನಿರೀಕ್ಷೆ ಇತ್ತು. ಬಿಜೆಪಿಯವರು ಇಲ್ಲಿ ಜಾತಿ ರಾಜಕಾರಣ ಮಾಡಿದ್ದರ ಬಗ್ಗೆ ನಮಗೆ ಅರಿವಿದೆ. ಮತ್ತೊಂದು ಕ್ಷೇತ್ರ ಶಿಗ್ಗಾವಿ ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ. ಆ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಿಂದ ಬಸವರಾಜ ಬೊಮ್ಮಾಯಿ ಅವರು ಗೆದ್ದುಕೊಂಡು ಬಂದಿದ್ದ ಕ್ಷೇತ್ರ. ಇನ್ನು ಕುಮಾರಸ್ವಾಮಿ ಅವರು ಸ್ಪರ್ಧಿಸಿ ಗೆದ್ದಿದ್ದ ಚನ್ನಪಟ್ಟಣದಲ್ಲೂ ಕಾಂಗ್ರೆಸ್ 25 ವರ್ಷಗಳಿಂದ ಗೆದ್ದಿರಲಿಲ್ಲ. ದೇವೇಗೌಡರು ಒಂದು ವಾರಕ್ಕೂ ಹೆಚ್ಚು ಕಾಲ ಚುನಾವಣಾ ಪ್ರಚಾರ ಮಾಡಿದ್ದರು.

ಆದರೆ ಈ ಮೂರು ಕ್ಷೇತ್ರಗಳ ಜನ ಅಭ್ಯರ್ಥಿಗಳಿಗಿಂತ ಗ್ಯಾರಂಟಿ ಯೋಜನೆಗಳಿಗೆ ಮತ ಹಾಕಿದ್ದೇವೆ ಎಂದು ಸಂದೇಶ ರವಾನಿಸಿದ್ದಾರೆ.

ಮಾಧ್ಯಮಗಳು ಕೂಡ ಉಪ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ಒಂದೊಂದು ಕ್ಷೇತ್ರ ಸಿಗಲಿದೆ ಎಂದು ಸಮೀಕ್ಷೆ ಹೇಳುತ್ತಿವೆ ಎಂದು ಬರೆದರು.

ಆದರೆ ನಾವು ಮೂರಕ್ಕೆ ಮೂರು ಕ್ಷೇತ್ರ ಗೆಲ್ಲುತ್ತೇವೆ ಎಂದು ಹೇಳಿದ್ದೆ. ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಅಧಿಕಾರಕ್ಕೆ ಬಂದ ಕಾರಣ ಸಿದ್ದರಾಮಯ್ಯ ಅವರ ಸರ್ಕಾರ ಎಲ್ಲಾ ವರ್ಗದ ಜನರಿಗೆ ನೆರವು ನೀಡಲಾಗಿದೆ. ಗ್ಯಾರಂಟಿ ಯೋಜನೆಗಳಿಂದ 200 ಯೂನಿಟ್ ವರೆಗೂ ಉಚಿತ ವಿದ್ಯುತ್, ಮಹಿಳೆಯರಿಗೆ 2 ಸಾವಿರ ಪ್ರೋತ್ಸಾಹ ಧನ, ಉಚಿತ ಬಸ್ ಪ್ರಯಾಣ, ಅನ್ನಭಾಗ್ಯ ಹಾಗೂ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಎಲ್ಲಾ ವರ್ಗಗಳು ಅಧಿಕಾರದಲ್ಲಿ ಇದ್ದಂತೆ.

ಅನ್ನಪೂರ್ಣ ಒಬ್ಬರೇ ನಿಮ್ಮ ಶಾಸಕರಲ್ಲ. ಅವರ ಜತೆ ತುಕಾರಾಮ್ ಹಾಗೂ ಸಂತೋಷ್ ಲಾಡ್ ಅವರೂ ಕೂಡ ನಿಮ್ಮ ಋಣ ತೀರಿಸುವ ಕೆಲಸ ಮಾಡಲಿದ್ದಾರೆ. ಜಿಲ್ಲಾ ಸಚಿವರು ಸೇರಿದಂತೆ ಇಡೀ ಸರ್ಕಾರ ಅನ್ನಪೂರ್ಣ ಅವರ ಜತೆಗೆ ನಿಲ್ಲಲಿದೆ.”

About the Author

The Bengaluru Live

Administrator

Visit Website View All Posts

Post navigation

Previous: ಬಿವಿಕೆ ಅಯ್ಯಂಗರ್ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ: ತುಷಾರ್ ಗಿರಿ ನಾಥ್
Next: ಕಾಡಾನೆ ದಾಳಿ ತಡೆಗೆ ಕ್ರಮ: ಆನೆ ಕಾರ್ಯ ಪಡೆ ಹಾಗೂ ಕ್ಷಿಪ್ರ ಸ್ಪಂದನ ತಂಡಗಳ ರಚನೆ-ಸಚಿವ ಈಶ್ವರ ಬಿ.ಖಂಡ್ರೆ

Related Stories

ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್

The Bengaluru Live November 23, 2026 7:14 PM
ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

The Bengaluru Live November 23, 2026 5:59 PM
ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

The Bengaluru Live November 23, 2026 5:37 PM

Latest Post

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೂವಿನ ಹಾರ ಹಾಕಿದ ನೀಲಿ-ಬೆಳ್ಳಿ ಬಣ್ಣದ ಮೆಟ್ರೋ ರೈಲಿನ ಪಕ್ಕ ಸುರಕ್ಷತಾ ಕವಚ, ಹೆಲ್ಮೆಟ್ ಧರಿಸಿ ನಿಂತಿರುವ ಯೋಜನಾ ಸಿಬ್ಬಂದಿ
  • ಬೆಂಗಳೂರು ನಗರ

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು

November 23, 2026 7:26 PM
‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್ ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್

November 23, 2026 7:14 PM
ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

November 23, 2026 5:59 PM
ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

November 23, 2026 5:37 PM
ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ ಮೋಡ ಕವಿದ ಆಕಾಶ ಮತ್ತು ಗ್ರಾಮೀಣ ಭೂದೃಶ್ಯದ ಎಐ ನಿರ್ಮಿತ ಪ್ರಾತಿನಿಧಿಕ ಚಿತ್ರ.
  • ಕರ್ನಾಟಕ

ನವೆಂಬರ್ 24 ಮತ್ತು 25ರಂದು ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು ಸಾಧ್ಯತೆ: ಐಎಂಡಿ

November 23, 2026 5:34 PM
ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ್ ಕಚೇರಿಯ ಫೈಲ್ ಚಿತ್ರ
  • ಬೆಂಗಳೂರು ನಗರ

ನವೆಂಬರ್ 25ರಂದು ಹೆಣ್ಣೂರು, ಹೊರಮಾವು, ಹೊಯ್ಸಳ ನಗರ ಸುತ್ತಮುತ್ತ ವಿದ್ಯುತ್ ವ್ಯತ್ಯಯ

November 23, 2026 5:28 PM

ನೀವು ತಪ್ಪಿಸಿಕೊಂಡಿರಬಹುದು

ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಹೂವಿನ ಹಾರ ಹಾಕಿದ ನೀಲಿ-ಬೆಳ್ಳಿ ಬಣ್ಣದ ಮೆಟ್ರೋ ರೈಲಿನ ಪಕ್ಕ ಸುರಕ್ಷತಾ ಕವಚ, ಹೆಲ್ಮೆಟ್ ಧರಿಸಿ ನಿಂತಿರುವ ಯೋಜನಾ ಸಿಬ್ಬಂದಿ
  • ಬೆಂಗಳೂರು ನಗರ

ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು

The Bengaluru Live November 23, 2026 7:26 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್

The Bengaluru Live November 23, 2026 7:14 PM
ರಸ್ತೆ ಸುರಕ್ಷತಾ ಪ್ರಾಧಿಕಾರದ ಸಭೆಯಲ್ಲಿ ಮೈಕ್‌ಗಳಿರುವ ಮೇಜಿನ ಬಳಿ ಕುಳಿತಿರುವ ಹಿರಿಯ ಅಧಿಕಾರಿಗಳು
  • ಕರ್ನಾಟಕ

ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ

The Bengaluru Live November 23, 2026 5:59 PM
ವಿಧಾನಸೌಧದ ಸಂವಾದ ಸಭೆಯಲ್ಲಿ ಸಭಾ ಮೇಜಿನ ಬಳಿ ಕುಳಿತಿರುವ ಅಧಿಕಾರಿಗಳು ಮತ್ತು ಭೇಟಿ ನೀಡಿದ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ
  • ಕರ್ನಾಟಕ

ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ

The Bengaluru Live November 23, 2026 5:37 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬ್ಲೂ ಲೈನ್ ಫೇಸ್ 2ಎ ಮೆಟ್ರೋ ಪರೀಕ್ಷಾರ್ಥ ಸಂಚಾರ: ನವೆಂಬರ್ 24ರಂದು ಕೆ.ಆರ್. ಪುರಂನಿಂದ ದೊಡ್ಡನೆಕ್ಕುಂದಿಗೆ ರೈಲು
  • ‘ಬಿಗ್ ಬುಲೆಟಿನ್’ ಹೇಳಿಕೆ: ಪಬ್ಲಿಕ್ ಟಿವಿಯ ಎಚ್.ಆರ್. ರಂಗನಾಥ್, ಅರುಣ್ ಬಡಿಗೇರ್‌ಗೆ ಲೋಕಾಯುಕ್ತ ನೋಟಿಸ್
  • ರಸ್ತೆ ಅಪಘಾತ ತಗ್ಗಿಸಲು ಎಐ ಕ್ಯಾಮೆರಾ; ತುರ್ತು ಚಿಕಿತ್ಸೆಗೆ ₹2.5 ಲಕ್ಷದವರೆಗೆ ನಗದುರಹಿತ ನೆರವು, ₹322 ಕೋಟಿ ಕ್ರಿಯಾ ಯೋಜನೆ
  • ವಿಧಾನಸೌಧದಲ್ಲಿ ವಿಶ್ವಸಂಸ್ಥೆ ವಿಶೇಷ ವರದಿಗಾರ್ತಿ ಹೆಬಾ ಹಗ್ರಾಸ್ ಅವರಿಗೆ ಕರ್ನಾಟಕದ ವಿಕಲಚೇತನ ಸಬಲೀಕರಣ ಮಾದರಿ ಪ್ರಸ್ತುತ
©Copyright 2025 The Bengaluru Live All rights reserved. | MoreNews by AF themes.