ಬೆಂಗಳೂರು: ಸವಾರಿಗೆ ಮುನ್ನವೇ ಪಾವತಿ ಮಾಡುವಂತೆ ಗ್ರಾಹಕರನ್ನು ದಾರಿ ತಪ್ಪಿಸುವ ಸೂಚನೆಗಳನ್ನು ನೀಡಿದ್ದಕ್ಕಾಗಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಓಲಾ ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಿದ್ದು, ಈ ವ್ಯವಸ್ಥೆಯನ್ನು ನಿಲ್ಲಿಸುವಂತೆ ಆದೇಶಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗುರುವಾರ ತಿಳಿಸಿದರು.
ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಜೋಶಿ ಅವರು, ಇದು ‘ಡಾರ್ಕ್ ಪ್ಯಾಟರ್ನ್’ಗಳು, ಅನ್ಯಾಯದ ಪದ್ಧತಿಗಳು ಮತ್ತು ದಾರಿ ತಪ್ಪಿಸುವ ಕ್ರಮಗಳ ವಿರುದ್ಧದ ಕಠಿಣ ಹೆಜ್ಜೆ ಎಂದು ಬಣ್ಣಿಸಿದ್ದು, ಗ್ರಾಹಕರ ಹಕ್ಕುಗಳ ರಕ್ಷಣೆ ಮತ್ತು ಪಾರದರ್ಶಕತೆಯ ಬದ್ಧತೆಯನ್ನು ಇದು ಪುನರುಚ್ಚರಿಸುತ್ತದೆ ಎಂದಿದ್ದಾರೆ. ಆದೇಶದ ಹೆಚ್ಚಿನ ವಿವರಗಳನ್ನು ಪೋಸ್ಟ್ನಲ್ಲಿ ನೀಡಿಲ್ಲ.
