ಬೆಂಗಳೂರು: ರಾಜಾಜಿನಗರ ವಿಭಾಗದ ಶ್ರೀರಾಮ ಮಂದಿರ ಉಪವಿಭಾಗದ ವ್ಯಾಪ್ತಿಯಲ್ಲಿ ಬೆಂಗಳೂರು ಪಶ್ಚಿಮ ನಗರ ಪಾಲಿಕೆ ಗುರುವಾರ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ತಿಳಿಸಿದೆ.
ಭಾಷ್ಯಂ ಸರ್ಕಲ್ನಲ್ಲಿ ನಡೆದ ಈ ಕಾರ್ಯಾಚರಣೆಯ ಉದ್ದೇಶ ಸಾರ್ವಜನಿಕ ಸ್ಥಳಗಳನ್ನು ಕಾಪಾಡುವುದು, ಸ್ವಚ್ಛ ನಗರ ಪರಿಸರ ಖಾತರಿಪಡಿಸುವುದು ಮತ್ತು ಅನಧಿಕೃತ ಜಾಹೀರಾತು ಪ್ರದರ್ಶನ ತಡೆಯುವುದು ಎಂದು ಜಿಬಿಎ ಹೇಳಿದೆ. ಎಷ್ಟು ಫ್ಲೆಕ್ಸ್, ಬ್ಯಾನರ್ಗಳನ್ನು ತೆರವುಗೊಳಿಸಲಾಯಿತು ಎಂಬುದನ್ನು ತಿಳಿಸಿಲ್ಲ.
