Home ಬೆಂಗಳೂರು ನಗರ ಕಾಳಸಂತೆಯಲ್ಲಿ ಬ್ಯ್ಲಾಕ್ ಫಂಗಸ್‌ ಔಷಧಿ ಮಾರಾಟ ಯತ್ನ: ಓರ್ವನ ಬಂಧನ

ಕಾಳಸಂತೆಯಲ್ಲಿ ಬ್ಯ್ಲಾಕ್ ಫಂಗಸ್‌ ಔಷಧಿ ಮಾರಾಟ ಯತ್ನ: ಓರ್ವನ ಬಂಧನ

56
0

ಬೆಂಗಳೂರು:

ಕಾಳಸಂತೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧಿ ಮಾರಾಟಕ್ಕೆ ಯತ್ನಿಸಿದ ಆರೋಪಿ ಓರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ರಾಮ್ ಮೋಹನ್‌ ಬಂಧಿತ ಆರೋಪಿ.

ಬಂಧಿತನಿಂದ ಬ್ಲ್ಯಾಕ್ ಫಂಗಸ್​​‌‌ ಚಿಕಿತ್ಸೆ ಗೆ ನೀಡಲಾಗುತ್ತಿದ್ದ 80 ಮಾತ್ರೆ ಮತ್ತು 17 ಇಂಜೆಕ್ಷನ್​​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಆರೋಪಿ ನಿಗದಿತ ದರಕ್ಕಿಂತ ಎರಡು ಪಟ್ಟು ಹೆಚ್ಚು ದರದಲ್ಲಿ ಮಾರಾಟ ಮಾಡುತ್ತಿದ್ದ ಎಂದು ಮಾಹಿತಿ ನೀಡಿದರು.

ವಶಪಡಿಸಿಕೊಂಡ ಚುಚ್ಚುಮದ್ದು ಹಾಗೂ ಮಾತ್ರೆಗಳ ಮೌಲ್ಯ ನಾಲ್ಕೂವರೆ ಲಕ್ಷ ರೂ‌. ಇರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.

ಕೆ.ಆರ್.ಪುರಂ ಕುಂದಲಹಳ್ಳಿ ಐಟಿಐ ಗೇಟ್ ಬಳಿ ಔಷಧಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.

ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ಪುರಂ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

LEAVE A REPLY

Please enter your comment!
Please enter your name here