Home ಬೆಂಗಳೂರು ನಗರ ಚಾಲೆಂಜಿಂಗ್ ಸ್ಟಾರ್ ಈಗ ಕೃಷಿ ಇಲಾಖೆಯ ರಾಯಭಾರಿ

ಚಾಲೆಂಜಿಂಗ್ ಸ್ಟಾರ್ ಈಗ ಕೃಷಿ ಇಲಾಖೆಯ ರಾಯಭಾರಿ

77
0
ಫೈಲ್ ಚಿತ್ರ

ಬೆಂಗಳೂರು:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ಸರ್ಕಾರ ನೇಮಿಸಿದೆ.

ಕೃಷಿ ಇಲಾಖೆ ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚುರಪಡಿಸಲು ಹಾಗೂ ಕೃಷಿಕರಲ್ಲಿ ಸ್ಫೂರ್ತಿ ತುಂಬಲು ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.

ಕೃಷಿ ಇಲಾಖೆಯ ರಾಯಭಾರಿಯಾಗಿ ಕೆಲಸ ನಿರ್ವಹಿಸಲು ಯಾವುದೇ ಸಂಭಾವನೆ ಇಲ್ಲದೇ ದುಡಿಯುವುದಾಗಿ ದರ್ಶನ್ ಒಪ್ಪಿಕೊಂಡಿದ್ದರು. ಅಲ್ಲದೇ ಈ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ರೈತರೊಂದಿಗೊಂದು ದಿನ ಕಾರ್ಯಕ್ರಮವನ್ನು ಸಹ ಮೆಚ್ಚಿದ್ದರು. ಸ್ವತಃ ಕೃಷಿಕರೂ ಆಗಿರುವ ದರ್ಶನ್ ಬಿ.ಸಿ.ಪಾಟೀಲ್ ಅವರೊಂದಿಗೆ ಚರ್ಚಿಸಿ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದರು.ಈ ಹಿನ್ನಲೆಯಲ್ಲಿ ಸರ್ಕಾರ ಇದೀಗ ಕೃಷಿ ಇಲಾಖೆಯ ರಾಯಭಾರಿಯನ್ನಾಗಿ ದರ್ಶನ್ ಅವರನ್ನು ನೇಮಿಸಿ ಆದೇಶಿಸಿದೆ.

Darshan with BC Patil1
ಫೈಲ್ ಚಿತ್ರ
WhatsApp Image 2021 02 15 at 14.16.31
WhatsApp Image 2021 02 15 at 14.16.31 1

LEAVE A REPLY

Please enter your comment!
Please enter your name here