ಬೆಂಗಳೂರು:
ಬೆಂಗಳೂರು ನಗರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಇಂದು ಜೆ. ಮಂಜುನಾಥ್ ಅವರು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿಗಳಾದ ಜಿ ಎನ್ ಶಿವಮೂರ್ತಿ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಅನಿತಾ ಲಕ್ಷ್ಮೀ ಅವರು ಉಪಸ್ಥಿತರಿದ್ದರು.

ನೂತನ ಜಿಲ್ಲಾಧಿಕಾರಿಗಳಾಗಿ ಇಂದು ಪ್ರಭಾರ ವಹಿಸಿಕೊಂಡ ಜೆ ಮಂಜುನಾಥ್ ಅವರು ತಮ್ಮ ಕಚೇರಿಯಲ್ಲಿ ಸೇವಾಲಾಲ್ ಜಯಂತಿ ಪ್ರಯುಕ್ತ ಸಂತ ಶ್ರೇಷ್ಠರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು.