ಬೆಂಗಳೂರು:
ಅಪರೂಪದ ವಿಶೇಷ ಕಾರ್ಯಕ್ರಮವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಡಿದ್ದಾರೆ.ಚಲನಚಿತ್ರ ರಂಗದಲ್ಲಿ ಎತ್ತರಕ್ಕೆ ರಬೆಳೆದಿರುವ ದರ್ಶನ್ ನಟನೆಯ ಜೊತೆಗೆ ಕೃಷಿಕ ರೈತಾಪಿ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು,ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ.ರೈತರ ಪರವಾಗಿ ದರ್ಶನ್‌ಗೆ ಅಭಿನಂದನೆಗಳು.ಕೃಷಿ ಇಲಾಖೆಗೆ ಕೃಷಿ ರಂಗಕ್ಕೆ ದರ್ಶನ್ ಯಾವುದೇ ಸಂಭಾವನೆಯಿಲ್ಲದೇ ಕೃಷಿ ಇಲಾಖೆಯ ರಾಯಭಾರಿಯಾಗಿರುವುದು ಮೆಚ್ಚುಗೆಯ ಸಂಗತಿ ಎಂದು ಮುಖ್ಯಮಂತ್ರಿ ಬಿ.
ಎಸ್. ಯಡಿಯೂರಪ್ಪ ಹೇಳಿದರು.
“ಕೃಷಿ ಕಾಯಕದ ರಾಯಭಾರಿ” ಸ್ವೀಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ನಾನು ಸಹ ದರ್ಶನ್ ಅವರ “ರಾಬರ್ಟ್” ಚಿತ್ರವನ್ನು ನೋಡುತ್ತೇನೆ ಎಂದರು. ಕೃಷಿ ಸಚಿವ ಬಿ.ಸಿ.ಪಾಟೀಲ್,ಇದು ಕೃಷಿ ಇಲಾಖೆಯ ಅಭೂತಪೂರ್ವ ಕಾರ್ಯಕ್ರಮವಾಗಿದೆ.ಚಾಲೆಂಜಿಂಗ್ ಸ್ಟಾರ್ ಚಿತ್ರರಂಗದಲ್ಲಿ ನಟನೆಯ ಜೊತೆಗೆ ಕೃಷಿ ಪಶುಸಂಗೋಪನೆ ಚಟುವಟಿಕೆಗಳನ್ನೂ ನಡೆಸುತ್ತಿರುವ ದರ್ಶನ್ ಕೃಷಿ ಕಾಯಕದ ರಾಯಭಾರಿಯಾಗಿರುವುದು ಹೆಮ್ಮೆಯ ವಿಚಾರ.ರೈತ ನಾಯಕರಾಗಿ ರೈತಪರ ಹೋರಾಟ ಮಾಡಿ ರಾಜ್ಯದಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿಗಳಾಗಿರುವ ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲಿ ಈ ಕಾರ್ಯಕ್ರಮ ನಡೆಯುತ್ತಿರುವುದು ಬಹಳ ಸಂತಸದ ವಿಚಾರ.ದರ್ಶನ್ ಎತ್ತರವಿರುವಷ್ಟು ಅವರ ಹೃದಯವೂ ಅಷ್ಟೇ ವಿಶಾಲವಾಗಿದೆ.ದರ್ಶನ್‌ಗೆ ರೈತರ ಪರ ಕಳಕಳಿ ಇರುವುಸ್ಟಾರ್:್ಮೆಯ ವಿಚಾರ.ದರ್ಶನ್ ಫಾರ್ಮ್ ಎನ್ನುವುದು ಸಣ್ಣ ಝೂ ಇದ್ದಂತಿದೆ.ದರ್ಶನ್ ಸ್ವತಃ ಕೃಷಿ ಚಟುವಟಿಕೆಯನ್ನೂ ಮಾಡುತ್ತಾರೆ.ದರ್ಶನ್ ಸ್ವತಃ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ ಎಂದಿರುವುದು ಖುಷಿಯ ವಿಚಾರ.ದೊಡ್ಡದೊಡ್ಡ ಕೆಲ ಸೂಪರ್ ಸ್ಟಾರ್‌ಗಳು ಸಂಭಾವನೆ ಪಡೆದು ದೊಡ್ಡದೊಡ್ಡ ಕಂಪೆನಿ ಕಾರ್ಯಕ್ರಮಗಳಿಗೆ ರಾಯಭಾರಿಯಾಗುತ್ತಾರೆ.ಆದರೆ ದರ್ಶನ್ ಕೃಷಿ ಇಲಾಖೆಗೆ ಯಾವುದೇ ಸಂಭಾವನೆ ಪಡೆಯದೇ ರಾಯಭಾರಿಯಾಗಿರುವುದು ದರ್ಶನ್ ಅವರಲ್ಲಿರುವ ಕೃಷಿ ಉತ್ಸಾಹ ರೈತ ಪರ ಕಾಳಜಿಯನ್ನು ತೋರಿಸುತ್ತದೆ ಎಂದರು.
ಕೃಷಿ ಇಲಾಖೆಯ ಯೋಜನೆಗಳನ್ನು, ಕೃಷಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸಲು, ರೈತರಿಗೆ ಹಾಗೂ ವಿಶೇಷವಾಗಿ ಯುವಜನತೆಗೆ ಪ್ರೇರಣೆ ನೀಡುವ ನಿಟ್ಟಿನಲ್ಲಿ ಕೃಷಿ ಕಾಯಕದ ರಾಯಭಾರಿಯಾಗಿ ಪದಗ್ರಹಣ ಮಾಡಿದ ಜನಪ್ರಿಯ ಕಲಾವಿದ ದರ್ಶನ್ ಅವರನ್ನು ಇಂದು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಕೃಷಿ ಸಚಿವರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. pic.twitter.com/qh9p7kQGZq
— B.S. Yediyurappa (@BSYBJP) March 5, 2021
ದರ್ಶನ್ ನಟನೆಯ “ರಾಬರ್ಟ್” ಚಿತ್ರ ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಸ್ವತಃ ಸ್ಫೂರ್ತಿಯಿಂದ ಅಭಿಮಾನಿಗಳು ಜನರು ಸೇರಿರುವುದು ನೋಡಿದರೆ ಅವರಿಗೆ ಜನರ ಅಭಿಮಾನ ಎಷ್ಟಿದೆ ಎಂದು ಎದ್ದು ತೋರಿಸುತ್ತದೆ.ಸಂಗೋಳ್ಳಿ ರಾಯಣ್ಣ ಪಾತ್ರಕ್ಕೂ ಸೈ, ಇತರೆ ಎಲ್ಲಾ ಪಾತ್ರಗಳೊ
ನಾನು ಅಧುನಿಕ ಕೌರವನಾಗಿ ನಟನೆ ಮಾಡಿದ್ದೆ.ಆದರೆ ಪೌರಾಣಿಕವಾಗಿ ನಟನೆಯಲ್ಲಿ ದರ್ಶನ್ ಕೌರವನಾಗಿ ನಟಿಸಿದ್ದಾರೆ.ಮಾರ್ಚ್ 11 ರಂದು “ರಾಬರ್ಟ್” ಚಿತ್ರ ರಿಲೀಸ್ ಆಗಲಿದ್ದು ಚಿತ್ರ ಸೂಪರ್ ಸೂಪರ್ ಹಿಟ್ ಆಗಲಿ ಎಂದು ಬಿ.ಸಿ.ಪಾಟೀಲ್ ಹಾರೈಸಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾರ್ಚ್ 5,2021 ರಿಂದ ಅಧಿಕೃತವಾಗಿ ಕೃಷಿ ಕಾಯಕದ ರಾಯಭಾರಿಯಾಗಿದ್ದಾರೆ ಎಂದರು.
ಚಾಲೆಂಜಿಂಗ್ ಸ್ಟಾರ್ ಕೃಷಿ ಇಲಾಖೆ ರಾಯಭಾರಿ ದರ್ಶನ್ ಮಾತನಾಡಿ, ಪೊಲೀಸ್ ಇಲಾಖೆಯಿಂದ ಸಿನಿಮಾರಂಗದಿಂದ ಈಗ ಬಿ.ಸಿ.ಪಾಟೀಲ್ ಕೃಷಿ ಸಚಿವರಾಗಿದ್ದಾರೆ.ನಾನು ಸರ್ಕಾರದ ಕೃಷಿ ಇಲಾಖೆಯ ಕಾರ್ಯಕ್ರಮಗಳನ್ನು ಪ್ರಚುರ ಪಡಿಸುತ್ತೇನೆ.ರೈತರಿಗೂ ಜನರಿಗೂ ಇರುವುದು ರಕ್ತ ಸಂಬಂಧ.ಇದಕ್ಕೆ ನಾನು ಶ್ರಮಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ” ಕೃಷಿ ಕೈಪಿಡಿ-2021″ಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಇಲಾಖೆಯ ನಿರ್ದೇಶಕ ಶ್ರೀನಿವಾಸ್, ಮೇಲ್ಮನೆ ಸದಸ್ಯ ಸಂದೇಶ್ ನಾಗರಾಜ್, ಸೇರಿದಂತೆ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.