Home ಅಪರಾಧ 4 ಗಂಟೆಗಳ ಕಾಲ ದಿನೇಶ್ ಕಲ್ಲಹಳ್ಳಿ ವಿಚಾರಣೆ

4 ಗಂಟೆಗಳ ಕಾಲ ದಿನೇಶ್ ಕಲ್ಲಹಳ್ಳಿ ವಿಚಾರಣೆ

45
0

ವಿಡಿಯೋದಲ್ಲಿದ್ದ ಯುವತಿ ಸಂಪರ್ಕದಲ್ಲಿ ಇಲ್ಲ ಎಂದ ಕಲ್ಲಹಳ್ಳಿ

ಬೆಂಗಳೂರು:

ಮಾಜಿ ಸಚಿವ ರಮೇಶ್​ ಜಾರಕಿಹೊಳಿ‌ ಇದ್ದರೆನ್ನಲಾಗದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಅವರನ್ನು ತನಿಖಾಧಿಕಾರಿಗಳು ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸಿ ಹೊರಗೆ ಬಂದ ನಂತರ ದಿನೇಶ್​ ಕಲ್ಲಹಳ್ಳಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ತನಿಖೆಗೆ ಪೂರಕವಾದ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಇದನ್ನು ಆಧರಿಸಿ ಪೊಲೀಸರು ಎಫ್​ಐಆರ್ ದಾಖಲಿಸುವ ವಿಶ್ವಾಸವಿದೆ ಎಂದರು.

ಸದ್ಯ ಪ್ರಕರಣ ತನಿಖೆಯಲ್ಲಿರುವುದರಿಂದ ಬಹಿರಂಗವಾಗಿ ಮಾಧ್ಯಮದ ಎದುರು ನಾನು ಯಾವುದೇ ಮಾಹಿತಿಯನ್ನು ಬಿಚ್ಚಿಡಲು ಸಾಧ್ಯವಿಲ್ಲ. ಅಂದು ಕೊಟ್ಟಿದ್ದ ದೂರಿಗೆ ಇಂದು ಕೂಡ ನಾನು ಬದ್ಧನಾಗಿದ್ದೇನೆ ಎಂದರು.

ಮುಚ್ಚಿದ ಲಕೋಟೆಯಲ್ಲಿ ನನಗೆ ಕೊಟ್ಟ ಸಿಡಿಯನ್ನೇ ಪೊಲೀಸರಿಗೆ ಕೊಟ್ಟಿದ್ದೇನೆ. ನಾನು ಕೊಟ್ಟ ದೂರಿಗೆ ಈಗಲೂ ಬದ್ಧನಾಗಿದ್ದೇನೆ. ವಿಡಿಯೋದಲ್ಲಿರುವ ಮಹಿಳೆ ನನ್ನ ಸಂಪರ್ಕದಲಿಲ್ಲ. ನನಗೆ ಅವರ ಪರಿಯಚವೂ ಇಲ್ಲ. ಆಕೆಯ ಕುಟುಂಬಸ್ಥರು ನನ್ನನ್ನು ಭೇಟಿ ಮಾಡಿದ್ದರು. ಪೊಲೀಸರು ಸಂಪೂರ್ಣ ತನಿಖೆಯ ನಂತರ ದೂರು ದಾಖಲಿಸುವುದಾಗಿ ಹೇಳಿದ್ದಾರೆ ಎಂದು ದಿನೇಶ್ ಕಲ್ಲಹಳ್ಳಿ ತಿಳಿಸಿದರು.

ಇದೇ ವೇಳೆ, ರಾಜಕಾರಣಿಗಳ ಸಿಡಿ ಇದೆ ಎಂದು ಹೇಳಿ ಬ್ಲಾಕ್ ಮೇಲ್ ಮಾಡುತ್ತಿರುವವರನ್ನು ಬಂಧಿಸಬೇಕು ಎಂಬ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ದಿನೇಶ್ ಕಲ್ಲಹಳ್ಳಿ, ಅವರ ಹೇಳಿಕೆಗೆ ನನ್ನ ಸಹಮತ ಇದೆ. ಬ್ಲಾಕ್ ಮೇಲ್ ಮಾಡುತ್ತಿದ್ದರೆ ತನಿಖೆ ಆಗಲಿ ಎಂದು ಸ್ಪಷ್ಟಪಡಿಸಿದರು.

LEAVE A REPLY

Please enter your comment!
Please enter your name here