Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಡಿಕೆಶಿ ಸೊಕ್ಕು ಮುರಿಯಲು ಚನ್ನಪಟ್ಟಣದ ಮಹಾಜನತೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಬೇಕು: ದೇವೇಗೌಡ
  • ರಾಜಕೀಯ
  • ಕರ್ನಾಟಕ
  • ರಾಮನಗರ

ಡಿಕೆಶಿ ಸೊಕ್ಕು ಮುರಿಯಲು ಚನ್ನಪಟ್ಟಣದ ಮಹಾಜನತೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಬೇಕು: ದೇವೇಗೌಡ

The Bengaluru Live November 11, 2024 4:45 PM
ಡಿಕೆಶಿ ಸೊಕ್ಕು ಮುರಿಯಲು ಚನ್ನಪಟ್ಟಣದ ಮಹಾಜನತೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಬೇಕು: ದೇವೇಗೌಡ

ಡಿಕೆಶಿ ಸೊಕ್ಕು ಮುರಿಯಲು ಚನ್ನಪಟ್ಟಣದ ಮಹಾಜನತೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಬೇಕು: ದೇವೇಗೌಡ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಜನವರಿ ಒಳಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಇರಲ್ಲ; ಸಚಿವ ವಿ.ಸೋಮಣ್ಣ ಹೇಳಿದ್ದು ಭವಿಷ್ಯ ಅಲ್ಲ, ಸತ್ಯ ಎಂದ ದೇವೇಗೌಡರು

ಚನ್ನಪಟ್ಟಣ/ರಾಮನಗರ: ಜನವರಿಯೊಳಗೆ ರಾಜ್ಯ ಕಾಂಗ್ರೆಸ್ ಸರಕಾರ ಬೀಳಲಿದೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಅವರು ಭವಿಷ್ಯ ಹೇಳಿಲ್ಲ, ವಾಸ್ತವ ನುಡಿದ್ದಾರೆ ಎಂದು ಮಾಜಿ ಪ್ರಧಾನಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಹೇಳಿದರು.

ಡಿಸಿಎಂ ಡಿಕೆಶಿ ಸೊಕ್ಕು ಮುರಿಯಲು ಚನ್ನಪಟ್ಟಣದ ಮಹಾಜನತೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಬೇಕು ಎಂದು ಅವರು ಗುಡುಗಿದರು.

ಚನ್ನಪಟ್ಟಣದಲ್ಲಿ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಪರ ನಡೆದ ಬೃಹತ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮಾತನಾಡಿ, ಹಾಸನದ ಪ್ರಕರಣವನ್ನು ಬಳಸಿಕೊಂಡು, ಇಡೀ ದೇವೇಗೌಡರ ಕುಟುಂಬ ಮುಗಿಸಲು ಹುನ್ನಾರ ನಡೆದಿತ್ತು.

ಜನವರಿಯೊಳಗೆ ರಾಜ್ಯ ಸರಕಾರ ಬೀಳಲಿದೆ ಎಂದು ವಿ.ಸೋಮಣ್ಣ ಅವರು ಹೇಳಿದ ಬಗ್ಗೆ ಪ್ರತಿಕ್ರಿಯಿಸಿದ ಅವರು; ನನ್ನಂತೆಯೇ ಸೋಮಣ್ಣ ಅವರಿಗೂ ಜೋತಿಷ್ಯ ಕೇಳುವ ಅಭ್ಯಾಸ ಇರುವುದೇ ಸೋಜಿಗ, ಆದರೆ ಅವರು ಸತ್ಯವನ್ನೇ ಹೇಳಿದ್ದಾರೆ. ಈ ಸರಕಾರ ಬಹಳ ದಿನ ಇರುವುದಿಲ್ಲ ಎಂದು ಹೇಳಿದರು.

ಒಂದು ಕಾಲದಲ್ಲಿ ನಾನು ಮತ್ತು ಯಡಿಯೂರಪ್ಪ ಕಿತ್ತಾಡಿದ್ದೆವು. ಆದರೆ, ನಾವಿಬ್ಬರು ಈಗ ಒಂದಾಗಿರುವುದೇ ಈ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೆಸೆಯಲು ಎಂದು ಅವರು ಯಡಿಯೂರಪ್ಪ ಅವರ ಕೈ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಮೇಲೆ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕುಮಾರಸ್ವಾಮಿ ಅವರನ್ನು ಅರೆಸ್ಟ್ ಮಾಡಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು; ಡಿಕೆಶಿ ಅವರಿಗೆ ಅವರ ಮಾತುಗಳೇ ಮುಳುವಾಗಲಿದೆ ಎಂದು ವಾಗ್ದಾಳಿ ನಡೆಸಿದರು.

ತಮ್ಮ ಮಗನನ್ನು ಚುನಾವಣೆಗೆ ನಿಲ್ಲಿಸಲು ₹50 ಕೋಟಿ ಹಣಕ್ಕಾಗಿ ಮಹಾನುಭಾವನೊಬ್ಬನಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪಿ ಸ್ಥಾನದಲ್ಲಿ ಕುಮಾರಸ್ವಾಮಿ ಇದ್ದಾರೆ. ಆದರೆ, ಇದೇ ಚನ್ನಪಟ್ಟಣದ ಮಹಾಜನತೆಯಿಂದಲೇ ಸಿಎಂ ಆಗಿದ್ದ ಕುಮಾರಸ್ವಾಮಿಗೆ ಅಂತಹ ಅನಿವಾರ‌್ಯತೆಯೇ ಇಲ್ಲ. ಕಾಂಗ್ರೆಸ್ ಎಂದಿಗೂ ನಂಬಿಕೆಗೆ ಅರ್ಹರಲ್ಲ ಎಂದು ಅವರ ಜತೆ ಸಹವಾಸವೇ ಬೇಡ ಎಂದು ಕುಮಾರಸ್ವಾಮಿಗೇ ಹೇಳಿದ್ದೆ. ಆದರೆ, ಎಚ್‌ಡಿಕೆ ಮೇಲೆ ಒತ್ತಡ ಹಾಕಿ, ಅವರೊಂದಿಗೆ ಕಾಂಗ್ರೆಸ್ ಸರಕಾರ ರಚಿಸಲಾಗಿತ್ತುಎಂದು ಮಾಜಿ ಪ್ರಧಾನಿಗಳು ವಿಷಾದಿಸಿದರು.

ನಿಖಿಲ್ ಕುಮಾರಸ್ವಾಮಿ ಅವರ ನಮ್ಮ ಅಭ್ಯರ್ಥಿ ಎಂದು 11 ದಿನದ ಹಿಂದೆ ಯಾರು ಹೇಳಿರಲಿಲ್ಲ. ಆದರೆ, 6 ತಿಂಗಳಿನಿಂದ ನಾನೇ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದ ಡಿ.ಕೆ.ಶಿವಕುಮಾರ್‌ಗೆ ಈಗ ಏನಾಗಿದೆ? ಅವರ ಬದಲು ಮತ್ತೊಬ್ಬರು ಅಖಾಡದಲ್ಲಿದ್ದಾರೆ ಎಂದು ಅವರು ತಿರುಗೇಟು ಕೊಟ್ಟರು.

ಸಿದ್ದರಾಮಯ್ಯ ಅವರನ್ನು ಹಣಕಾಸು ಸಚಿವರನ್ನಾಗಿ ಮಾಡಿದ್ದೆ ಈ ದೇವೇಗೌಡ. ಮತ್ತೆ ಅವರೇನು ಮಾ ಎಂದು ಹೇಳಲು ನಾನು ಹೋಗಲ್ಲ. ನಿಖಿಲ್ ನನ್ನ ಮೊಮ್ಮಗ ಎನ್ನುವ ಮಾತು ಬೇಕಿಲ್ಲ. ನಾಮಪತ್ರ ಸಲ್ಲಿಸುವವರೆಗೂ ನಿಖಿಲ್ ಹೆಸರನ್ನು ನಾನು ಉಲ್ಲೇಖಿಸಲೇ ಇಲ್ಲ. ಮಹಾನುಭಾವ ಎನ್ನುವ ಡಿಕೆಶಿಯ ಸೊಕ್ಕು ಮುರಿಯಲು ನಿಖಿಲ್ ಗೆಲುವು ಅನಿವಾರ‌್ಯ. ಪುಣ್ಯಾತ್ಮರಾದ ಮತದಾರರ ನಿರ್ಣಯವೇ ಎಲ್ಲದಕ್ಕೂ ಉತ್ತರ ನೀಡಲಿದೆ ಎಂದರು ಅವರು.

ನಾನು ಮತ್ತೆ ಕ್ಷೇತ್ರಕ್ಕೆ ಬರುತ್ತೆನೆ. ಕ್ರಮ ಸಂಖ್ಯೆ 1ಕ್ಕೆ ಎಲ್ಲರೂ ತಪ್ಪದೇ ಮತದಾನ ಮಾಡಿ. ಇದೇ ತಿಂಗಳ 24ರ ಬೆಳಗ್ಗೆ ನಾನು ಹಾಗೂ ಯಡಿಯೂರಪ್ಪ ಅವರು ಒಟ್ಟಿಗೆ ಬಂದು ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೆವೆ ಎಂದು ದೇವೇಗೌಡರು ಹೇಳಿದರು.

About the Author

The Bengaluru Live

Administrator

Visit Website View All Posts

Post navigation

Previous: ಕನಕಪುರದಲ್ಲಿ ಶಾಲೆಗಳಿಗೆ ನಾನು 25 ಎಕರೆ ಜಾಗ ದಾನ ಮಾಡಿದ್ದೇನೆ, ದೇವೇಗೌಡರ ಕುಟುಂಬದವರು ಒಂದು ಗುಂಟೆ ಜಾಗ ದಾನ ಮಾಡಿದ್ದಾರಾ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
Next: ಚನ್ನಪಟ್ಟಣ ಚುನಾವಣೆಯಲ್ಲಿ ಕುಮಾರಸ್ವಾಮಿ ಹಣಬಲ ನಡೆಯುವುದಿಲ್ಲ: ಡಿಸಿಎಂ ಡಿ. ಕೆ. ಶಿವಕುಮಾರ್

Related Stories

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕರ್ನಾಟಕ

ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ

The Bengaluru Live November 12, 2026 2:35 PM
ಭಾರತದ ಸುಪ್ರೀಂ ಕೋರ್ಟ್ — ಕಡತ ಚಿತ್ರ
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ

The Bengaluru Live November 12, 2026 1:47 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

The Bengaluru Live November 12, 2026 1:41 PM

Latest Post

ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕರ್ನಾಟಕ

ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ

November 12, 2026 2:35 PM
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ ಭಾರತದ ಸುಪ್ರೀಂ ಕೋರ್ಟ್ — ಕಡತ ಚಿತ್ರ
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ

November 12, 2026 1:47 PM
ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

November 12, 2026 1:41 PM
ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಕುರಿತು ಜಿಲ್ಲಾಧಿಕಾರಿಗಳು, ಎಸ್‌ಪಿಗಳೊಂದಿಗೆ ಶಿವಕುಮಾರ್ ಸಭೆ ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಪರಿಶೀಲನೆಯ ವಿಡಿಯೊ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು
  • ಕರ್ನಾಟಕ
  • ಶಿಕ್ಷಣ

ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಕುರಿತು ಜಿಲ್ಲಾಧಿಕಾರಿಗಳು, ಎಸ್‌ಪಿಗಳೊಂದಿಗೆ ಶಿವಕುಮಾರ್ ಸಭೆ

November 12, 2026 1:19 PM
ಯಶವಂತಪುರ–ಮಡಗಾಂವ್ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರು ಮೂಲಕ: ನ.13ರಂದು ಉದ್ಘಾಟನಾ ವಿಶೇಷ ರೈಲು, ನ.15ರಿಂದ ನಿಯಮಿತ ಸೇವೆ ನಿಲ್ದಾಣದಲ್ಲಿ ನಿಂತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
  • ಕರ್ನಾಟಕ
  • ಬೆಂಗಳೂರು

ಯಶವಂತಪುರ–ಮಡಗಾಂವ್ ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ಮಂಗಳೂರು ಮೂಲಕ: ನ.13ರಂದು ಉದ್ಘಾಟನಾ ವಿಶೇಷ ರೈಲು, ನ.15ರಿಂದ ನಿಯಮಿತ ಸೇವೆ

November 12, 2026 10:49 AM
ನ.16ರಂದು ಟೌನ್ ಹಾಲ್‌ನಲ್ಲಿ ಸಾಮೂಹಿಕ ರಜೆ ಸಭೆಗೆ ಜಿಬಿಎ ಪಾಲಿಕೆಗಳ ನೌಕರರ ಸಂಘ ಕರೆ; 29 ಬೇಡಿಕೆಗಳ ಮುಂದಿಟ್ಟು ಹೋರಾಟಕ್ಕೆ ಸಜ್ಜು ಬೇಕೇ ಬೇಕು ನ್ಯಾಯ ಬೇಕು ಫಲಕಗಳನ್ನು ಹಿಡಿದ ನೌಕರರ ದೊಡ್ಡ ಸಮೂಹ
  • ಕರ್ನಾಟಕ
  • ಬೆಂಗಳೂರು

ನ.16ರಂದು ಟೌನ್ ಹಾಲ್‌ನಲ್ಲಿ ಸಾಮೂಹಿಕ ರಜೆ ಸಭೆಗೆ ಜಿಬಿಎ ಪಾಲಿಕೆಗಳ ನೌಕರರ ಸಂಘ ಕರೆ; 29 ಬೇಡಿಕೆಗಳ ಮುಂದಿಟ್ಟು ಹೋರಾಟಕ್ಕೆ ಸಜ್ಜು

November 12, 2026 10:00 AM

ನೀವು ತಪ್ಪಿಸಿಕೊಂಡಿರಬಹುದು

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್
  • ಕರ್ನಾಟಕ

ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ

The Bengaluru Live November 12, 2026 2:35 PM
ಭಾರತದ ಸುಪ್ರೀಂ ಕೋರ್ಟ್ — ಕಡತ ಚಿತ್ರ
  • ಕರ್ನಾಟಕ

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ

The Bengaluru Live November 12, 2026 1:47 PM
ಕರ್ನಾಟಕ ಲೋಕಾಯುಕ್ತ ಕಚೇರಿ — ಕಡತ ಚಿತ್ರ
  • ಕರ್ನಾಟಕ

ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

The Bengaluru Live November 12, 2026 1:41 PM
ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಪರಿಶೀಲನೆಯ ವಿಡಿಯೊ ಸಭೆಯಲ್ಲಿ ಕರ್ನಾಟಕದ ಅಧಿಕಾರಿಗಳು
  • ಕರ್ನಾಟಕ
  • ಶಿಕ್ಷಣ

ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಕುರಿತು ಜಿಲ್ಲಾಧಿಕಾರಿಗಳು, ಎಸ್‌ಪಿಗಳೊಂದಿಗೆ ಶಿವಕುಮಾರ್ ಸಭೆ

The Bengaluru Live November 12, 2026 1:19 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕಾರ್ಯದರ್ಶಿ ಹುದ್ದೆಗೆ ಕೆಪಿಸಿಸಿಗೆ 920 ಅರ್ಜಿ; ಸಂದರ್ಶನದ ಮೂಲಕ 112 ಮಂದಿ ಆಯ್ಕೆ, ತಲಾ ಎರಡು ಕ್ಷೇತ್ರಗಳ ಜವಾಬ್ದಾರಿ
  • ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು: ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕರ್ನಾಟಕ
  • ಯಾದಗಿರಿಯಲ್ಲಿ 50,000 ರೂ. ಲಂಚ ಪಡೆಯುತ್ತಿದ್ದ ಗುರುಮಠಕಲ್ ಪೊಲೀಸ್ ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ
  • ಕೆಪಿಎಸ್‌ಸಿ ಪರೀಕ್ಷಾ ಭದ್ರತೆ ಕುರಿತು ಜಿಲ್ಲಾಧಿಕಾರಿಗಳು, ಎಸ್‌ಪಿಗಳೊಂದಿಗೆ ಶಿವಕುಮಾರ್ ಸಭೆ
©Copyright 2025 The Bengaluru Live All rights reserved. | MoreNews by AF themes.