Home ಕರ್ನಾಟಕ ಹಸಿರು ಪಟಾಕಿಗೆ ಮಾತ್ರ ಅವಕಾಶ: ಮಾಲೀನ್ಯ ನಿಯಂತ್ರಣ ಮಂಡಳಿ

ಹಸಿರು ಪಟಾಕಿಗೆ ಮಾತ್ರ ಅವಕಾಶ: ಮಾಲೀನ್ಯ ನಿಯಂತ್ರಣ ಮಂಡಳಿ

116
0

ಬೆಂಗಳೂರು:

ಈ ಸಾಲಿನ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಹಸಿರು ಪಟಾಕಿ ಹೊರತಾಗಿ ಬೇರಾವ ಪಟಾಕಿಯನ್ನು ಮಾರಾಟ ಮಾಡುವುದು ಹಾಗೂ ಸಿಡಿಸುವುದನ್ನು ನಿಷೇಧಿಸಿದೆ.

ಪಟಾಕಿಗಳನ್ನು ಹಚ್ಚುವ ಸಮಯವನ್ನು ರಾತ್ರಿ 8.00 ಗಂಟೆಯಿಂದ ರಾತ್ರಿ 10.00 ಗಂಟೆವರೆಗೆ ನಿಗಧಿಪಡಿಸಲಾಗಿದೆ.

ಹಸಿರು ಪಟಾಕಿಗಳಲ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ರಾಸಾಯನಿಕಗಳಾದ ಆಲ್ಯೂಮಿನಿಯಂ, ಬೇರಿಯಂ, ಪೋಟಾಷಿಯಂ ನೈಟ್ರೇಟ್ ಮತ್ತು ಕಾರ್ಬನ್ ರಹಿತ ಅಥವಾ ಸಾಕಷ್ಟು ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಿದ್ದು, ಬೇರೆ ಪಟಾಕಿಗಳಿಗೆ ಹೋಲಿಸಿದಾಗ ಸುಮಾರು ಶೇ.30% ರಷ್ಟು ಕಡಿಮೆ ಕಣಗಳನ್ನು ಹೊರಹಾಕುತ್ತವೆ ಹಾಗೂ ಶಬ್ಧಮಟ್ಟವೂ ಸಹ 125 ಡೆಸಿಬಲ್‍ಗಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ.

ಹಸಿರು ಪಟಾಕಿಗಳ ತಯಾರಕರು ತಮ್ಮ ಪಟಾಕಿಗಳ ಕಾರ್ಟೂನ್ ಬಾಕ್ಸ್‍ಗಳ ಮೇಲೆ ರಾಷ್ಟ್ರೀಯ ಪರಿಸರ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ನಾಗಪುರ (CSIR-NEERI ಹಾಗೂ ಪೆಟ್ರೋಲಿಯಂ ಎಕ್ಸ್‍ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್ (PESO) ರವರಿಂದಅನುಮೋದನೆ ಪಡೆದು ನೋಂದಣಿ,ಪ್ರಮಾಣ ಪತ್ರ ಹಾಗೂ ಲಾಂಛನ ಒಳಗೊಂಡ ಕ್ವಿಕ್ ರೆಸ್ಪಾನ್ಸ್ ಕೋಡ್ (QR Code) ನ್ನುಪ್ರದರ್ಶಿಸಿರುತ್ತಾರೆ.

ಹಸಿರು ಪಟಾಕಿಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವೆಬ್‍ಸೈಟ್ http://www.kspcb.gov.in ನಲ್ಲಿ ಪಡೆಯುವಂತ ಕೋರಲಾಗಿದೆ. ಸಾರ್ವಜನಿಕರಿಗೆ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಬೇರೆ ಪಟಾಕಿಗಳನ್ನು ಮಾರಾಟ ಮಾಡುತ್ತಿರುವುದನ್ನು ಕಂಡುಬಂದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಕಛೇರಿಗೆ ದೂರು ನೀಡಬಹುದು ಎಂದು ಹೇಳಿದೆ.

Screenshot 819
Screenshot 820
Screenshot 821

LEAVE A REPLY

Please enter your comment!
Please enter your name here