ಕಾರವಾರ:
ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ನೌಕಾ ಹೆಲಿಕಾಪ್ಟರ್ ಒಂದು ಉತ್ತರಕನ್ನಡ ಜಿಲ್ಲೆಯ ದಾಸನಕೊಪ್ಪ ಗ್ರಾಮದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ಮೂಲಗಳ ಪ್ರಕಾರ, ಹೆಲಿಕಾಪ್ಟರ್ ಅನ್ನು ನೌಕಾಪಡೆಯ ಎಎನ್-741 ಹೆಲಿಕಾಪ್ಟರ್ ಎಂದು ಗುರುತಿಸಲಾಗಿದೆ. ಆಗಸದಲ್ಲಿ ಕೆಲ ನಿಮಿಷಗಳ ಕಾಲ ಹಾರಾಡಿದ ಹೆಲಿಕಾಪ್ಟರ್ ನಂತರ ಗ್ರಾಮದಲ್ಲಿ ಭೂಸ್ಪರ್ಶ ಮಾಡಿದೆ.
ಹೆಲಿಕಾಪ್ಟರ್‌ನಲ್ಲಿ ಮೂರ ಪೈಲೆಟ್‌ಗಳು ಸೇರಿ 8 ಜನರಿದ್ದು, ಗೋವಾದಿಂದ ಬೆಂಗಳೂರಿಗೆ ಹಾರಾಟ ನಡೆಸಿತ್ತು.