Home ಸಿನಿಮಾ ಯುವರತ್ನನಿಗೆ ಏಪ್ರಿಲ್ 7ರವರೆಗೂ ಥಿಯೇಟರ್​ ಹೌಸ್ ಫುಲ್​ಗೆ ಅವಕಾಶ

ಯುವರತ್ನನಿಗೆ ಏಪ್ರಿಲ್ 7ರವರೆಗೂ ಥಿಯೇಟರ್​ ಹೌಸ್ ಫುಲ್​ಗೆ ಅವಕಾಶ

125
0

ಪುನೀತ್​ ರಾಜ್​ಕುಮಾರ್​, ಫಿಲ್ಮ್ ಚೇಂಬರ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ

ಬೆಂಗಳೂರು:

ಪುನೀತ್​ ರಾಜ್​ಕುಮಾರ್ ಮತ್ತು ಫಿಲ್ಮ್ ಚೇಂಬರ್ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಏಪ್ರಿಲ್​ 7ರವರೆಗೂ ಯುವರತ್ನನಿಗೆ ಥಿಯೇಟರ್​ ಹೌಸ್ ಫುಲ್​ಗೆ ಅವಕಾಶ ನೀಡಿದೆ.

ಏಪ್ರಿಲ್ 7ರ ನಂತರ ಶೇ.50ರಷ್ಟು ಭರ್ತಿಗೆ ಮಾತ್ರ ಅವಕಾಶ ನೀಡುವುದಾಗಿ ತಿಳಿಸಿದೆ. ಈ ಮೂಲಕ ಸದ್ಯದ ನಿರ್ಧಾರ ಕೆಲವು ದಿನಗಳವರೆಗೆ ಸಡಿಲಿಕೆಯಾದಂತಾಗಿದೆ.

ಕೊರೊನಾ ನಿಯಮಾವಳಿಗಳು ಹೆಚ್ಚಾದ ಕಾರಣ ರಾಜ್ಯ ಸರ್ಕಾರ ಕಠಿಣ ಮಾರ್ಗದರ್ಶಿ ಬಿಡುಗಡೆಗೊಳಿಸಿತ್ತು. ಥಿಯೇಟರ್​ನಲ್ಲಿ ಕೇವಲ ಶೇ. 50ರಷ್ಟು ಸೀಟು ಭರ್ತಿಗೆ ಅವಕಾಶ ನೀಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿನಿಮಾ ರಂಗಕ್ಕೆ ಕೊನೆಗೂ ಜಯ ಸಿಕ್ಕಿದೆ. ಸರ್ಕಾರ ಕೈಗೊಂಡ ಕಠಿಣ ನಿರ್ಧಾರವನ್ನು ಏಪ್ರಿಲ್ 7ರ ವರೆಗೆ ಸಡಿಲಿಸುವುದಾಗಿ ತಿಳಿಸಿದೆ.

ಇಂದು ಸಂಜೆ ಪುನೀತ್ ರಾಜಕುಮಾರ್ ಹಾಗೂ ಯುವರತ್ನ ಸಿನಿಮಾ ತಂಡವು ಮುಖ್ಯಮಂತ್ರಿಯೊಂದಿಗೆ ಭೇಟಿಯಾಗಿ ಚರ್ಚೆ ನಡೆಸಿದರು. ಬಳಿಕ ರಾಜ್ಯದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ಸರ್ಕಾರಿ ಆದೇಶ ಹೊರಡಿಸಿದ್ದರು

Chief Minister BS Yediyurappa allows 100 seating capacity for Yuvarathnaa till April 7.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ಕಠಿಣ ನಿಯಮಾವಳಿಗಳನ್ನು ಹೇರಿ ರಾಜ್ಯ ಸರ್ಕಾರ ನಿನ್ನೆ (ಏಪ್ರಿಲ್ 3) ಆದೇಶ ಹೊರಡಿಸಿತ್ತು. ಅದರಂತೆ, ನಿಗದಿತ 8 ಜಿಲ್ಲೆಗಳಲ್ಲಿ ಸಿನಿಮಾ ಹಾಲ್​ಗಳಲ್ಲಿ ಕೇವಲ ಶೇ. 50ರಷ್ಟು ಪ್ರೇಕ್ಷಕರಿಗೆ ಮಾತ್ರ ಅನುಮತಿ ನೀಡಬೇಕು ಎಂದು ಸೂಚನೆ ನೀಡಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಚಂದನವನದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: ದಯವಿಟ್ಟು ಥಿಯೇಟರ್​​ಗಳಿಗೆ ಶೇ.100ರಷ್ಟು ಅವಕಾಶ ನೀಡಿ: ಪುನೀತ್​ ರಾಜ್​ಕುಮಾರ್ https://kannada.thebengalurulive.com/allow-theaters-to-have-100-seating-capacity-puneet-rajkumar/

LEAVE A REPLY

Please enter your comment!
Please enter your name here