Home ಬೆಂಗಳೂರು ನಗರ ಕೆಪಿಎಸ್‌ಸಿ ನೂತನ ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ್ ನೇಮಕ

ಕೆಪಿಎಸ್‌ಸಿ ನೂತನ ಅಧ್ಯಕ್ಷರಾಗಿ ಶಿವಶಂಕರಪ್ಪ ಸಾಹುಕಾರ್ ನೇಮಕ

610
0
bengaluru

ಬೆಂಗಳೂರು:

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೂತನ ಅಧ್ಯಕ್ಷರಾಗಿ ಶಿವಶಂಕರಪ್ಪ ಎಸ್. ಸಾಹುಕಾರ್ ನೇಮಕವಾಗಿದ್ದಾರೆ.

ಇದಕ್ಕೆ ಮುನ್ನ ಕೆಪಿಎಸ್‌ಸಿ ಅಧ್ಯಕ್ಷರಾಗಿದ್ದ ಷಡಕ್ಷರಿ ಸ್ವಾಮಿ ಶನಿವಾರ ತಮ್ಮ ಸ್ಥಾನದಿಂದ ನಿವೃತ್ತರಾಗಿದ್ದಾರೆ. ಇದೀಗ ಶಿವಶಂಕರಪ್ಪ ಅವರನ್ನು ಷಡಕ್ಷರಿ ಅವರಿಂದ ತೆರವಾದ ಸ್ಥಾನಕ್ಕೆ ನೇಮಕ ಮಾಡಲಾಗಿದೆ.

KPSC chairman

ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದವರಾದ ಶಿವಶಂಕರಪ್ಪ ಅವರನ್ನು ರಾಜ್ಯಪಾಲ ವಜುಭಾಯಿ ವಾಲಾ ಕೆಪಿಎಸ್‌ಸಿ ಅಧ್ಯಕ್ಷರನ್ನಾಗ್ ನೇಮಿಸಿ ಆದೇಶಿಸಿದ್ದಾರೆ.

bengaluru

ಶಿವಶಂಕರಪ್ಪ ಓರ್ವ ಕೃಷಿ ಎಂಜಿನಿಯರಿಂಗ್‌ ಪದವೀಧರರಾಗಿದ್ದು ಅವರ ಅಧಿಕಾರಾವಧಿ ಮೂರು ವರ್ಷಗಳ ಕಾಲ ಇರಲಿದೆ. ಇವರು 2019ರ ಸೆಪ್ಟೆಂಬರ್‌ 3ರಂದು ಕೆಪಿಎಸ್‌ಸಿ ಸದಸ್ಯರಾಗಿ ನೇಮಕವಾಗಿದ್ದರು.

bengaluru

LEAVE A REPLY

Please enter your comment!
Please enter your name here