ಬಿಬಿಎಂಪಿ ಅವಧಿ ಮುಗಿಯುವ ಮೊದಲು ವಾರ್ಡ್‌ಗಳ ಹೆಚ್ಚಳ ಮತ್ತು ವಾರ್ಡ್‌ಗಳ ಗಡಿ ನಿಗಧಿಯನ್ನು ಏಕೆ ಪೂರ್ಣಗೊಳಿಸಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಪ್ರಶ್ನೆ
ಬೆಂಗಳೂರು:
ಲಕ್ಷಾಂತರ ಬೆಂಗಳೂರಿಗರ ಮೂಲ ಅನುಮಾನಗಳಿಗೆ ಪ್ರತಿಧ್ವನಿಯಾಗಿ, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ರಾಜ್ಯ ಸರ್ಕಾರಕ್ಕೆ ಸರಳವಾದ, ನೇರವಾದ ಪ್ರಶ್ನೆಯನ್ನು ಕೇಳಿದರು — “ನಿಗದಿತ ಅವಧಿಯಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸದೇ ಅವಧಿ ಮೀರಿದೆ ಎಂಬುದಾಗಿ ನೀವು ಭಾವಿಸುವುದಿಲ್ಲವೇ?”.
ಬುಧವಾರ ಸುಮಾರು ಒಂದೂವರೆ ಗಂಟೆಗಳ ವಿಚಾರಣೆಯ ನಂತರ, ಮುಖ್ಯ ನ್ಯಾಯಮೂರ್ತಿ ಓಕಾ ಪಾಲಿಕೆಗೆ ಚುನಾವಣೆ ನಡೆಸುವ ಕುರಿತು ದಾಖಾಲಾಗಿರುವ ಪ್ರಕರಣಗಳ ಸಂಬಂಧದ ತಮ್ಮ ಆದೇಶಗಳನ್ನು ಕಾಯ್ದಿರಿಸಿದ್ದಾರೆ.
ಮುಂದಿನ ವಿಚಾರಣೆಗೆ ಅವರು ನಿರ್ದಿಷ್ಟ ದಿನಾಂಕವನ್ನು ಘೋಷಿಸದೇ, ಓಕಾ ಅವರ ಅವಲೋಕನೆಗಳು ಅವರ ಆಲೋಚನೆಯ ಸೂಚಕವಾಗಿದೆ.
“ಬಿಬಿಎಂಪಿ ವಾರ್ಡ್‌ಗಳನ್ನು 198 ರಿಂದ 243 ಕ್ಕೆ ಹೆಚ್ಚಿಸುವ, ಪ್ರತಿ ವಾರ್ಡ್‌ಗೆ ಸಂಬಂಧಿಸಿದಂತೆ ವಾರ್ಡ್‌ಗಳ ಗಡಿ ನಿಗಧಿಯನ್ನು ಪಾಲಿಕೆಯ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿಯು ಮುಕ್ತಾಯಗೊಳ್ಳುವ ಮೊದಲೇ ಈ ಪ್ರಕ್ರಿಯೆಗಳನ್ನು ಮುಗಿಸದೇ ಇರಲು ಕಾರಣಗಳೇನು ಎಂಬುದಾಗಿ ಪ್ರಶ್ನಿಸಿದರು.
ಪ್ರಸ್ತುತ ಇರುವ 198 ವಾರ್ಡ್‌ಗಳನ್ನು 243 ಕ್ಕೆ ಹೆಚ್ಚಿಸುವುದರೊಂದಿಗೆ, ವಾರ್ಡ್‌ಗಳ ಗಡಿ ನಿಗಧಿ ಮತ್ತು ಮತದಾರರ ಪಟ್ಟಿಗಳ ಪರಿಷ್ಕರಣೆ ಮಾಡಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಸರ್ಕಾರದ ಉದ್ದೇಶಗಳನ್ನು ಸಿಜೆಗೆ ಮನವರಿಕೆ ಮಾಡಲು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ಕೆ ನವದ್ಗಿ ರವರು ಪ್ರಯತ್ನಿಸಿದರು.
ಇದಕ್ಕೆ ಪ್ರತಿಕ್ರಿಯೆಯಾಗಿ, ಸಿಜೆ ರವರು ಕಾನೂನಾತ್ಮಕವಾಗಿ ಚುನಾವಣೆಗಳನ್ನು ನಡೆಸುವ ಕಾಲಮಿತಿಯನ್ನು ಕೇಳುವುದರೊಂದಿಗೆ – ಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸುವಂತೆ ರಾಜ್ಯ ಸರ್ಕಾರ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬಹುದೆಂದು ಸುಳಿವು ನೀಡಿದರು.
ಸಾಂಕ್ರಾಮಿಕ ರೊಗದ ಹಿನ್ನಲೆಯಲ್ಲಿ ಚುನಾವಣೆ ಮುಂದೂಡುವುದು ನ್ಯಾಯೋಚಿತವಲ್ಲ
243 ವಾರ್ಡ್‌ಗಳನ್ನು ರಚಿಸುವ ಕಾನೂನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಹೋಗಿಲ್ಲವೇ ಎಂದು ಓಕಾ ಕೇಳಿದರು. “ಬಿಬಿಎಂಪಿಯ ಅಧಿಕಾರಾವಧಿ ಮುಗಿಯುವ ಮೊದಲೇ ಈ ಕ್ರಮಗಳನ್ನು ಪ್ರಾರಂಭಿಸಬೇಕಾಗಿತ್ತು. ಕಾನೂನು ಜಾರಿಗೆ ತರುವ ಮೂಲಕ, ಸಾಂಕ್ರಾಮಿಕ ರೋಗದಿಂದಾಗಿ ಚುನಾವಣೆಗಳು ವಿಳಂಬವಾಗುತ್ತವೆ ಎಂದು ರಾಜ್ಯ ಸರ್ಕಾರ ಹೇಳಲು ಸಾಧ್ಯವಿಲ್ಲ. ಆದ್ದರಿಂದ ನ್ಯಾಯಾಲಯವು ಇದರಲ್ಲಿ ಮಧ್ಯಪ್ರವೇಶಿಸಬೇಕಾಗಿದೆ” ಎಂದು ಸಿಜೆ ಅವಲೋಕಿಸಿದರು.
2011 ರ ಜನಗಣತಿಯ ಪ್ರಕಾರ ಬೆಂಗಳೂರಿನ ಜನಸಂಖ್ಯೆಯು 86 ಲಕ್ಷವಾಗಿದ್ದರೆ, ಪ್ರಸ್ತುತ ಜನಸಂಖ್ಯೆಯು ಸುಮಾರು 1.36 ಕೋಟಿ ಆಗಿದೆ ಮತ್ತು ಇದರಿಂದ ಹೊಸದಾಗಿ ರಚಿಸಲಾದ 243 ವಾರ್ಡ್‌ಗಳಿಗೆ ಮತದಾರರ ಪಟ್ಟಿಗಳ ಪರಿಷ್ಕರಣೆ ಅಗತ್ಯ ಎಂದು ಹೇಳುವ ಮೂಲಕ ಅಡ್ವೊಕೇಟ್ ಜನರಲ್ ರವರು ಮುಖ್ಯ ನ್ಯಾಯಾಧೀಶರನ್ನು ಮನವೊಲಿಸಲು ಪ್ರಯತ್ನಿಸಿದರು.
ಒಂದು ನಿರ್ದಿಷ್ಟ ವಾರ್ಡ್ ಅನ್ನು ಎರಡು ಅಸೆಂಬ್ಲಿ ವಿಭಾಗಗಳಾಗಿ ವಿಂಗಡಿಸಲು ಸಾಧ್ಯವಿಲ್ಲ, ಇದು ಡಿಲಿಮಿಟೇಶನ್ ಸಮಯದಲ್ಲಿ ಸಂಭವಿಸಬಹುದು ಎಂದು ವಕೀಲ ಕೆ.ಎನ್.ಫಾನೀಂದ್ರ ರವರು ನ್ಯಾಯ್ಯಾಲಯದ ಗಮನಸೆಳೆದರು. ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅರ್ಜಿಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಿದ ನಂತರ ಹೊಸ ಬಿಬಿಎಂಪಿ ಕಾಯ್ದೆ ಪರಿಶೀಲಿಸುವ ಜಂಟಿ ವಿಧಾನಸಭಾ ಸಮಿತಿ ರಚಿಸಲಾಗಿದೆ ಎಂದರು.
ಮಾಜಿ ಅಡ್ವೊಕೇಟ್ ಜನರಲ್ ರವಿವರ್ಮ ಕುಮಾರ್ ಅವರು ಮಾಜಿ ಕಾರ್ಪೋರೇಟರ್ ಎಂ.ಶಿವರಾಜು ಮತ್ತು ಮಾಜಿ ಕಾಂಗ್ರೆಸ್ ಪಕ್ಷದ ಮುಖಂಡ ಅಬ್ದುಲ್ ವಾಜಿದ್ ಅವರ ಪರವಾಗಿ ವಾದಿಸಿದರು.