Home ಬೆಂಗಳೂರು ನಗರ ರಾಜ್ಯದ 31 ಜಿಲ್ಲೆಗಳಲ್ಲೂ ಕರ್ನಾಟಕ ಯೋಗ ಅಭಿಯಾನಕ್ಕೆ ಸಿಎಂ ಸಲಹೆ

ರಾಜ್ಯದ 31 ಜಿಲ್ಲೆಗಳಲ್ಲೂ ಕರ್ನಾಟಕ ಯೋಗ ಅಭಿಯಾನಕ್ಕೆ ಸಿಎಂ ಸಲಹೆ

46
0
CM advises Karnataka Yoga campaign in all 31 districts
bengaluru

ರಾಜ್ಯದಲ್ಲಿ ಕರ್ನಾಟಕ ಯೋಗಾಸನಾ ಸ್ಪೋರ್ಟ್ಸ್‌ ಅಸೋಷಿಯೇಷನ್‌ ಅಸ್ತಿತ್ವಕ್ಕೆ

ಬೆಂಗಳೂರು:

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಯೋಗಾಸನಾ ಸ್ಪೋರ್ಟ್ಸ್‌ ಅಸೋಷಿಯೇಷನ್‌, ಶ್ವಾಸ ಯೋಗ ಸಂಸ್ಥೆ ಮತ್ತು ಪತಂಜಲಿ ಯೋಗ ಪೀಠದ ಅಡಿಯಲ್ಲಿ ರಾಜ್ಯದ 31 ಜಿಲ್ಲೆಗಳಲ್ಲೂ “ಕರ್ನಾಟಕ ಯೋಗ ಅಭಿಯಾನ” ನಡೆಸುವಂತೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಸಲಹೆ ನೀಡಿದ್ದಾರೆ.

ಇಂದು ಬೆಂಗಳೂರಿನ ತಮ್ಮ ನಿವಾಸಕ್ಕೆ ಆಗಮಿಸಿದ್ದ ಕರ್ನಾಟಕದ ಬಾಬಾ ರಾಮ್‌ದೇವ್‌ ಎಂದೇ ಪ್ರಸಿದ್ದಿಯಾಗಿರುವ, ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಪೀಠಾಧ್ಯಕ್ಷರು, ಶ್ವಾಸ ಯೋಗ ಸಂಸ್ಥೆಯ ಸಂಸ್ಥಾಪಕರು ಮತ್ತು ಕರ್ನಾಟಕ ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ನ ಮಹಾಪೋಷಕರಾದ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮೀಜಿಗಳ ನೇತೃತ್ವದ ತಂಡವನ್ನು ಭೇಟಿ ಮಾಡಿ ಯೋಗ ಮತ್ತು ರಾಜ್ಯದಲ್ಲಿ ಯೋಗವನ್ನು ಪ್ರಚುರಪಡಿಸುವ ಬಗ್ಗೆ ವಿಸ್ತ್ರುತವಾಗಿ ಚರ್ಚೆ ನಡೆಸಿದರು.

ರಾಜ್ಯದಲ್ಲಿ ಯೋಗ ಪ್ರಚುರ ಪಡಿಸುವಲ್ಲಿ ಬಹಳ ಮಹತ್ವದ ಪಾತ್ರವನ್ನು ತಮ್ಮ ಶ್ವಾಸಯೋಗ ಸಂಸ್ಥೆಯ ಮೂಲಕ ವಚನಾನಂದ ಶ್ರೀಗಳು ವಹಿಸಿದ್ದಾರೆ. ಇದೀಗ ಅವರ ನೇತೃತ್ವ ಮತ್ತು ಮುಂದಾಳತ್ವದಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ನ್ನು ಪ್ರಾರಂಭಿಸಲಾಗಿದೆ. ನ್ಯಾಷನಲ್‌ ಯೋಗಾಸನ ಸ್ಪೋರ್ಟ್ಸ್‌ ಫೆಡರೇಷನ್‌ ನ ಸಹಯೋಗ ಸಂಸ್ಥೆಯಾಗಿ ರಚಿಸಲಾಗಿರುವ ಈ ಸಂಸ್ಥೆಯಿಂದ ಉತ್ತಮ ಕೆಲಸಗಳಾಗುವ ಭರವಸೆ ನಮಗೆ ಇದೆ. ಈ ಸಂಸ್ಥೆಯ ಮೂಲಕ ಗ್ರಾಮೀಣ ಮಟ್ಟದ ಯೋಗಪಟುಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗಳಿಗೆ ತಯಾರು ಮಾಡುವ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುವ ಉದ್ದೇಶ ಬಹಳ ಶ್ಲಾಘನೀಯ. ರಾಜ್ಯದ 31 ಜಿಲ್ಲೆಗಳಲ್ಲೂ ಕರ್ನಾಟಕ ಯೋಗ ಅಭಿಯಾನ ನಡೆಸುವಂತೆ ಸಲಹೆ ನೀಡಿದ್ದು, ಸಂಸ್ಥೆಯ ಹಾಗೂ ಶ್ವಾಸ ಯೋಗ ಸಂಸ್ಥೆ ಮತ್ತು ಪತಂಜಲಿ ಯೋಗ ಪೀಠದ ಮುಂದಾಳತ್ವದಲ್ಲಿ ನೀಡಲಾಗುವ ಪ್ರಸ್ತಾವನೆಗೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದೇವೆ ಎಂದು ತಿಳಿಸಿದರು.

bengaluru
CM advises Karnataka Yoga campaign in all 31 districts

ಕರ್ನಾಟಕ ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ನ ಮಹಾಪೋಷಕರಾದ ಜಗದ್ಗುರು ಶ್ರೀಶ್ರೀಶ್ರೀ ವಚನಾನಂದ ಮಹಾಸ್ವಾಮೀಜಿಗಳು ಮಾತನಾಡಿ, ದೇಶದ ಪ್ರಮುಖ ಫೆಡರೇಷನ್‌ನ ಸಹಯೋಗದಲ್ಲಿ ರಾಜ್ಯದಲ್ಲಿ ಈ ಯೋಗಾಸನಾ ಸ್ಪೋರ್ಟ್ಸ್‌ ಅಸೋಷಿಯೇಷನ್‌ ರಚಿಸಲಾಗಿದೆ. ಯೋಗವನ್ನು ಇನ್ನಷ್ಟು ಪ್ರಚುರಗೊಳಿಸುವ ಹಾಗೂ ಎಲ್ಲಾ ಸ್ತರದವರೂ ಅದನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸುವ ಉದ್ದೇಶ ನಮ್ಮದಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲೂ ಕರ್ನಾಟಕ ಯೋಗ ಅಭಿಯಾನವನ್ನು ಉದ್ದೇಶಿಸಲಾಗಿದೆ. ಇದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಎಲ್ಲಾ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸಂಸ್ಥೇಯ ವತಿಯಿಂದ ಉತ್ತಮ ಪ್ರಸ್ತಾವನೆ ರಚಿಸಿ ಸಲ್ಲಿಸಲಾಗುವುದು ಎಂದು ಹೇಳಿದರು.

ಈ ಸಂಧರ್ಭದಲ್ಲಿ ನ್ಯಾಷನಲ್‌ ಯೋಗಾಸನ ಸ್ಪೋರ್ಟ್ಸ್‌ ಫೆಡರೇಷನ್‌ ನ ಪ್ರಧಾನ ಕಾರ್ಯದರ್ಶಿ ಡಾ. ಜಯದೀಪ್‌ ಆರ್ಯ, ಕರ್ನಾಟಕ ಯೋಗಾಸನ ಸ್ಪೋರ್ಟ್ಸ ಅಸೋಸಿಯೇಷನ್ ಅಧ್ಯಕ್ಷರಾದ ಭವರ್‌ಲಾಲ್‌ ಆರ್ಯ ಮತ್ತಿತರರು ಭಾಗವಹಿಸಿದ್ದರು.

bengaluru

LEAVE A REPLY

Please enter your comment!
Please enter your name here