Home ಬೆಂಗಳೂರು ನಗರ ಜನಸಾಮಾನ್ಯರು ವಿಜ್ಞಾನದ ಜ್ಞಾನ ಪಡೆಯುವಂತಾಗಬೇಕು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಜನಸಾಮಾನ್ಯರು ವಿಜ್ಞಾನದ ಜ್ಞಾನ ಪಡೆಯುವಂತಾಗಬೇಕು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

29
0
Common people should get knowledge of science: Karnataka Chief Minister Basavaraj Bommai

ಬೆಂಗಳೂರು:

ಜನಸಾಮಾನ್ಯರು ಸೈನ್ಸ್ ಗ್ಯಾಲರಿ ಪ್ರವೇಶಿಸಿ ವಿಜ್ಞಾನದ ಜ್ಞಾನ ಪಡೆದು ಹೊರಹೋಗುವಂತಾಗಬೇಕು. ಇದಕ್ಕೆ ರಾಜ್ಯ ಸರ್ಕಾರ ಎಲ್ಲಾ‌‌ ಸಹಕಾರ, ಬೆಂಬಲ ‌ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರು ಸೈನ್ಸ್ ಗ್ಯಾಲರಿ ಉದ್ಘಾಟಿಸಿ ಮಾತನಾಡಿದರು.

ವಿಜ್ಞಾನ ಮತ್ತು ಆಧ್ಯಾತ್ಮ ಒಂದೇ ನಾಣ್ಯದ ಎರಡು ಮುಖಗಳು. ತತ್ವಶಾಸ್ತ್ರ,ಆಧ್ಯಾತ್ಮ ಎಲ್ಲದರಲ್ಲೂ ವಿಜ್ಞಾನದ ಅಂಶಗಳು ಹೆಚ್ಚಾಗಿದೆ. ವಿಜ್ಞಾನದಲ್ಲಿ ಸಂಶೋಧನೆಗೆ ಇನ್ನೂ ಸಾಕಷ್ಟು ಅವಕಾಶಗಳಿವೆ. ಮಾನವನ ಮೆದುಳು ಇನ್ನೂ 75% ನಷ್ಟು ವಿಸ್ಕೃತವಾಗಬೇಕಿದೆ. ಕೇವಲ 25% ಮೆದುಳುನ್ನು ಬಳಸಿಕೊಂಡು ಮನುಷ್ಯ ಇಷ್ಟೆಲ್ಲಾ ಅದ್ಭುತ ಸೃಷ್ಟಿ ಮಾಡಿದ್ದಾನೆ. ಶೇ 100% ಮೆದುಳನ್ನು ಮನುಷ್ಯ ಉಪಯೋಗಿಸಿದರೆ ಏನೆಲ್ಲಾ‌ ಸೃಷ್ಟಿಸಬಹುದು ಎಂದರು.

ವೈಯಕ್ತಿಕ ವಿಕಸನಕ್ಕೆ ಸಹಾಯವಾಗಬೇಕು: ಸೈನ್ಸ್ ಗ್ಯಾಲರಿ ಕೂಡ ಅದೇ ನಿಟ್ಟಿನಲ್ಲಿ ಕೆಲಸ ಮಾಡಬೇಕು. ವ್ಯಕ್ತಿಯ ವೈಯಕ್ತಿಕ ವಿಕಸನಕ್ಕೆ ಸಹಾಯವಾಗಬೇಕು. ಆರ್ ಎನ್ ಡಿ ಇಕೋ‌ ಸಿಸ್ಟಮ್, ಏರೋಸ್ಪೇಸ್ ಎಲ್ಲದರಲ್ಲೂ ಕೂಡ ರಾಜ್ಯ ಮುಂಚೂಣಿಯಲ್ಲಿದೆ. ಆರ್ ಎನ್ ಡಿ ನೀತಿ ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ರಾಜ್ಯ,ದೇಶ, ವಿಶ್ವದೆಲ್ಲೆಡೆ ಸೈನ್ಸ್ ಗ್ಯಾಲರಿಯ ಅನುಕೂಲವಾಗಲಿ ಎಂದರು.

ಐ.ಟಿ, ಬಿ.ಟಿ ಸಚಿವ ಡಾ: ಸಿ.ಎನ್.ಅಶ್ವತ್ಥ್ ನಾರಾಯಣ್, ಸಚಿವ ಎಸ್.ಟಿ. ಸೋಮಶೇಖರ್ , ಬಯೋಕಾನ್ ಮುಖ್ಯಸ್ಥರಾದ ಕಿರಣ್ ಮಜುಂದಾರ್ ಶಾ, ಐ.ಟಿ. ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣ ರೆಡ್ಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here