Home Uncategorized ಲಂಚ ಸ್ವೀಕರಿಸಿದ್ದ ಕಂದಾಯ ನಿರೀಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ, ರೂ 4 ಲಕ್ಷ ದಂಡ...

ಲಂಚ ಸ್ವೀಕರಿಸಿದ್ದ ಕಂದಾಯ ನಿರೀಕ್ಷಕನಿಗೆ 5 ವರ್ಷ ಜೈಲು ಶಿಕ್ಷೆ, ರೂ 4 ಲಕ್ಷ ದಂಡ ವಿಧಿಸಿದ ನ್ಯಾಯಾಲಯ

11
0
Advertisement
bengaluru

ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದ ಕಂದಾಯ ನಿರೀಕ್ಷಕನೊಬ್ಬನಿಗೆ ವಿಶೇಷ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, 4 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ. ಬೆಂಗಳೂರು: ಲಂಚಕ್ಕೆ ಬೇಡಿಕೆ ಇಟ್ಟು ಸಿಕ್ಕಿಬಿದ್ದಿದ್ದ ಕಂದಾಯ ನಿರೀಕ್ಷಕನೊಬ್ಬನಿಗೆ ವಿಶೇಷ ನ್ಯಾಯಾಲಯ ಐದು ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ್ದು, 4 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ.

ಕೆಂಗೇರಿ ಹೋಬಳಿಯ ಕಂದಾಯ ನಿರೀಕ್ಷಕ ಸುರೇಶ್‌ ಜಿ.ಸಿ. (51) ದೋಷಿ ಎಂದು ತೀರ್ಮಾನಿಸಿರುವ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯ, 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ.4 ಲಕ್ಷ ದಂಡ ವಿಧಿಸಿದೆ.

ಮ್ಯುಟೇಷನ್‌ ಬದಲಾವಣೆ ಮಾಡಲು ಕೆಲ ವ್ಯಕ್ತಿಗಳಿಗೆ ಸುರೇಶ್ ರೂ. 5 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ನಂತರ ಚೌಕಾಸಿ ಮಾಡಿದಾಗ ರೂ.4 ಲಕ್ಷಗೆ ಒಪ್ಪಿಕೊಂಡಿದ್ದರು. ಇದರಂತೆ ರೂ.2 ಲಕ್ಷವನ್ನು ಮುಂಗಡ ಪಡೆದಿದ್ದರು. ರೂ.2 ಲಕ್ಷ ನೀಡಿದ್ದ ವ್ಯಕ್ತಿಗಳು ಉಳಿದ ಹಣ ನೀಡುವುದಕ್ಕೂ ಮುನ್ನ ಎಸಿಬಿಗೆ ದೂರು ನೀಡಿದ್ದಾರೆ. ಇದರಂತೆ 2016ರ ಸೆಪ್ಟೆಂಬರ್ 2ರಂದು ಲಂಚ ಪಡೆಯುತ್ತಿದ್ದಾಗ ಕಂದಾಯ ನಿರೀಕ್ಷಕನನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದರು.

ಪ್ರಕರಣದ ತನಿಖೆ ಪೂರ್ಣಗೊಳಿಸಿದ್ದ ಎಸಿಬಿ ಅಧಿಕಾರಿಗಳು, ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

bengaluru bengaluru

ಮಂಗಳವಾರ ವಿಚಾರಣೆ ಪೂರ್ಣಗೊಳಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮೀನಾರಾಯಣ ಭಟ್‌ ಕೆ ಅವರು, ಸುರೇಶ್‌ ವಿರುದ್ಧದ ಆರೋಪಗಳು ಸಾಬೀತಾಗಿವೆ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಹಾಗೂ ಪಡೆದಿರುವುದು ದೃಢಪಟ್ಟಿದೆ’ ಎಂದು ಪ್ರಕಟಿಸಿದರು. ಅಲ್ಲದೆ, ಸುರೇಶ್‌ ಅವರಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂ.4 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದರು.

ದಂಡ ಪಾವತಿಗೆ ತಪ್ಪಿದಲ್ಲಿ ನಾಲ್ಕು ತಿಂಗಳ ಸಾಧಾರ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶದಲ್ಲಿ ತಿಳಿಸಿದರು.


bengaluru

LEAVE A REPLY

Please enter your comment!
Please enter your name here