ಸದ್ಯ ಅವರು ಹೋಂ ಐಸೋಲೇಷನ್ ನಲ್ಲಿ ಇದ್ದಾರೆ. 2 ಡೋಸ್ ಲಸಿಕೆ ಪಡೆದ್ರೂ ಸೋಂಕು ದೃಢ
ಚಾಮರಾಜನಗರ:
ಚಾಮರಾಜನಗರ ಜಿಲ್ಲಾಧಿಕಾರಿ ಎಂ. ಆರ್. ರವಿ ಅವರಿಗೆ ಭಾನುವಾರ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಜಿಲ್ಲಾಧಿಕಾರಿಯವರಿಗೆ ಎರಡು ದಿನಗಳ ಹಿಂದೆ ನೆಗಡಿ, ಗಂಟಲು ನೋವು ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಶನಿವಾರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲಾಗಿತ್ತು. ಅದರ ಫಲಿತಾಂಶ ಭಾನುವಾರ ಬಂದಿದ್ದು, ಪಾಸಿಟಿವ್ ದೃಢಪಟ್ಟಿದೆ.
ಚಾಮರಾಜನಗರ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಂ.ಎಸ್ ರವಿ ಇದನ್ನು ಬೆಂಗಳೂರುಲೈವ್‌ಗೆ ಖಚಿತಪಡಿಸಿದರು. “ಜಿಲ್ಲಾಧಿಕಾರಿಯವರು ಶನಿವಾರ ಲಘು ಜ್ವರ ಮತ್ತು ಗಂಟಲು ನೋವಿನಿಂದ ಬಳಲುತ್ತಿದ್ದರು, ನಂತರ ಅವರನ್ನು ಪರೀಕ್ಷಿಸಲಾಯಿತು. ಭಾನುವಾರ ಅವರ ವರದಿ ಸಕಾರಾತ್ಮಕವಾಗಿದೆ. ಅವರಿಗೆ ಸೋಂಕು ದೃಢ ವಾಗಿದೆ, ” ಎಂದು ಹೇಳಿದರು.
ಸದ್ಯ ಅವರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾಧಿಕಾರಿಯವರು ಕೋವಿಡ್ ವಿರುದ್ಧದ ರೋಗ ನಿರೋಧ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿದ್ದರು — ಫೆ. 8ರಂದು ಮೊದಲು ಡೋಸ್ ಮತ್ತು ಮಾ. 8ರಂದು ಎರಡನೇ ಡೋಸ್ ಲಸಿಕೆ — ಎರಡನೇ ಡೋಸ್ ಪಡೆದು 27 ದಿನಗಳಾಗಿತ್ತು.
ಜಿಲ್ಲಾಧಿಕಾರಿಯವರು ತಪ್ಪದೇ ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದರು.