Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ಮೂರು ತಿಂಗಳೊಳಗೆ ಶೇ.80 ಜನರಿಗೆ ಕೋವಿಡ್ ಲಸಿಕೆ ಹಾಕಿಸಿ, 3 ನೇ ಅಲೆಯಿಂದ ರಕ್ಷಿಸಿ – ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ತಾಕೀತು
  • ರಾಜಕೀಯ
  • ಕರ್ನಾಟಕ
  • ಬೆಂಗಳೂರು ನಗರ

ಮೂರು ತಿಂಗಳೊಳಗೆ ಶೇ.80 ಜನರಿಗೆ ಕೋವಿಡ್ ಲಸಿಕೆ ಹಾಕಿಸಿ, 3 ನೇ ಅಲೆಯಿಂದ ರಕ್ಷಿಸಿ – ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ತಾಕೀತು

The Bengaluru Live July 4, 2021 12:45 PM 1 minute read
DKS Shivakumar

ಮೇಕೆದಾಟು ಯೋಜನೆ ಆರಂಭಕ್ಕೆ ಮುಹೂರ್ತ ನಿಗದಿ ಮಾಡುವಂತೆ ಡಿ.ಕೆ.ಶಿವಕುಮಾರ್ ಟ್ವೀಟ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಕೋವಿಡ್ 3ನೇ ಅಲೆಯಿಂದ ಜನರನ್ನು ರಕ್ಷಿಸಲು ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯದ ಶೇ. 80 ಜನರಿಗೆ ಲಸಿಕೆ ಹಾಕುವ ಸವಾಲಿಗೆ ಸಿದ್ದವಾಗುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಫತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ”ಮೂರು ತಿಂಗಳೊಳಗೆ ರಾಜ್ಯದ ಶೇಕಡ 80 ವಯಸ್ಕರಿಗೆ ಎರಡು ಡೋಸ್ ಲಸಿಕೆ ಹಾಕಿದರೆ ಕೊರೊನಾ 3 ನೇ ಅಲೆಯಿಂದ ರಾಜ್ಯದ ರಕ್ಷಣೆ ಮಾಡಬಹುದಾಗಿದೆ” ಎಂದು ಹೇಳಿದರು.

”ಅಕ್ಟೋಬರ್‌ ತಿಂಗಳಲ್ಲಿ ಕೊರೊನಾ 3ನೇ ಅಲೆ ತೀವ್ರವಾಗುವ ಸೂಚನೆಯನ್ನು ತಜ್ಞರು ನೀಡಿದ್ದಾರೆ. ಶೇ.80 ವಯಸ್ಕರಿಗೆ ಸೆಪ್ಟೆಂಬರ್ 30 ರೊಳಗೆ ಎರಡು ಡೋಸ್ ಲಸಿಕೆ ನೀಡಿದರೆ 3ನೇ ಅಲೆಯಿಂದ ರಕ್ಷಣೆ ಪಡೆಯಬಹುದು ಮತ್ತು ಅದರ ತೀವ್ರತೆ ತಡೆಯಬಹುದು. ಅದಕ್ಕಾಗಿಯೇ ಈ ಸವಾಲಿಗೆ ಸರ್ಕಾರ ಸಿದ್ದವಿದೆಯೇ? ಎಂದು ಪ್ರಶ್ನೆ ಮಾಡುತ್ತಿದ್ದೇನೆ” ಎಂದರು.

” ವ್ಯಾಕ್ಸಿನೇಷನ್ ಬಗ್ಗೆ ಕೇವಲ ಮಾತನಾಡಿದರೆ ಸಾಲದು. ರಾಜ್ಯ ಸರ್ಕಾರ ಈವರೆಗೆ ಶೇಕಡ 80 ಜನರಿಗೆ ಮಾತ್ರವೇ ಲಸಿಕೆ ನೀಡಿದೆ. ಕೇವಲ ಒಂದು ಡೋಸ್ ಲಸಿಕೆ ಹಾಕಿದರೆ ಕೋವಿಡ್ ತೀವ್ರತೆಯನ್ನು ತಗ್ಗಿಸಲಾಗದು. ಕೊರೊನಾದಿಂದ ಪೂರ್ಣ ರಕ್ಷಣೆ ಸಾಧ್ಯವಾಗಲು ಎರಡೂ ಡೋಸ್ ಪಡೆದಿರಬೇಕು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಹೀಗಾಗಿ ಸೆಪ್ಟೆಂಬರ್‌ ಅಂತ್ಯದೊಳಗೆ ಶೇ.80 ವಯಸ್ಕರಿಗೆ ಎರಡೂ ಡೋಸ್ ಹಾಕುವ ಹೊಣೆಗಾರಿಕೆ ಯನ್ನು ಸರ್ಕಾರ ನಿರ್ವಹಿಸಲೇಬೇಕು. ಈ ಸವಾಲಿನಲ್ಲಿ ವಿಫಲವಾದರೆ, 3ನೇ ಅಲೆಯ ಪರಿಣಾಮಗಳಿಗೆ ಸರ್ಕಾರವೇ ಜವಾಬ್ದಾರಿಯಾಗಬೇಕಾಗುತ್ತದೆ” ಎಂದು ಕೆಪಿಸಿಸಿ ಅಧ್ಯಕ್ಷರು ಎಚ್ಚರಿಸಿದರು.

ಈ ಸವಾಲು ಅಸಾಧ್ಯವಾದುದೇನೂ ಅಲ್ಲ. ವಿದೇಶಗಳಿಗೆ ಲಸಿಕೆ ಕಳಿಸುವುದನ್ನು ತಗ್ಗಿಸಿ ನಮ್ಮ ಜನರಿಗೆ ವ್ಯಾಕ್ಸಿನೇಷನ್‌ ಮಾಡಲು ಒತ್ತು ಕೊಡಬೇಕು. ಬಿಜೆಪಿ ನಾಯಕರು ಲಸಿಕೆ ನೀಡಿಕೆಯಲ್ಲೂ ಅಪರ- ತಪರಾ ಮಾಡುವುದನ್ನು ನಿಲ್ಲಿಸಿ, ಎಲ್ಲರಿಗೂ ಲಸಿಕೆ ಹಾಕಿಸಿ ಜನರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಬೇಕು” ಎಂದು ತಾಕೀತು ಮಾಡಿದರು.

”ಕೇಂದ್ರದಲ್ಲಿ ಅವರದೇ ಪಕ್ಷದ ಸರ್ಕಾರ ಇದ್ದರೂ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅವಶ್ಯಕ ಪ್ರಮಾಣದ ಲಸಿಕೆ ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ವ್ಯಾಕ್ಸಿನೇಷನ್ ಬಗ್ಗೆ ಒಂದು ದಿನದ ಅಬ್ಬರದ ಪ್ರಚಾರ ಪಡೆದು ಸರ್ಕಾರ ಸುಮ್ಮನಾದರೆ ಹೇಗೆ? ಲಸಿಕೆ ಹಾಕುವ ಪ್ರಮಾಣ ಕಡಿಮೆಯಾಗಿದೆ. ಲಸಿಕೆ ಹಾಕುವಲ್ಲಿ ಉತ್ತರ ಕರ್ನಾಟಕದ ಜನರನ್ನು ಮಲತಾಯಿ ಮಕ್ಕಳಂತೆ ನೋಡಲಾಗುತ್ತಿದೆ. ಬೆಂಗಳೂರು ನಗರದಲ್ಲೂ ಲಸಿಕೆ ದಾಸ್ತಾನು ಕೊರತೆಯಿದೆ. ಜನ ಲಸಿಕೆಗಾಗಿ ಕ್ಯೂ ನಿಲ್ಲುವುದು ತಪ್ಪಿಲ್ಲ. ಅವಶ್ಯಕ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗಿಲ್ಲವಾದ ಕಾರಣ ದಿಲ್ಲಿಗೆ ಹೋಗುವುದಾಗಿ ಆರೋಗ್ಯ ಸಚಿವರು ಹೇಳುತ್ತಿದ್ದಾರೆ. ಈ ಸರ್ಕಾರ ಈಗಲಾದರೂ ಎಚ್ಚೆತ್ತು ಬದ್ದತೆಯಿಂದ ಕೆಲಸ ಮಾಡುತ್ತಾ ನೋಡೋಣ” ಎಂದು ಶಿವಕುಮಾರ್ ಹೇಳಿದರು.

”ಡೆಲ್ಟಾ ರೂಪಾಂತರಿ ವೈರಾಣು ವಿರುದ್ದ ರಕ್ಷಣೆಗಾಗಿ ಕೋವಿಶೀಲ್ಡ್ 2 ನೇ ಲಸಿಕೆಯನ್ನು 8 ವಾರಗಳೊಳಗೆ ಕೊಡಬೇಕು. ಅದಕ್ಕಾಗಿ ಸರ್ಕಾರ ಮಾರ್ಗಸೂಚಿಯಲ್ಲಿ ಸೂಕ್ತ ಬದಲಾವಣೆ ಮಾಡಿಕೊಳ್ಳಲಿ” ಎಂದು ಸಲಹೆ ಮಾಡಿದರು.

” ಕಾಂಗ್ರೆಸ್ ಪಕ್ಷದ ನಾಯಕರು ಸ್ವಂತ ಖರ್ಚಿನಲ್ಲಿ ವ್ಯಾಕ್ಸಿನೇಷನ್‌ ಶಿಬಿರಗಳನ್ನು ನಡೆಸಿ, 1 ಲಕ್ಷ ಮಂದಿಗೆ ಉಚಿತವಾಗಿ ಲಸಿಕೆ ಹಾಕಿಸಿದ್ದಾರೆ. ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿಸಲು ಅನುಮತಿ ಕೇಳಿದರೂ ಸರ್ಕಾರ ಕೊಡಲಿಲ್ಲ. ಈ ಉದ್ದೇಶಕ್ಕೆ ಶಾಸಕರ ನಿಧಿ ಬಳಸುವ ಸದಾಶಯಕ್ಕೆ ಸರ್ಕಾರ ಸಮ್ಮತಿಸಲಿಲ್ಲ. ನಮ್ಮ ಸಹಾಯ ಅಗತ್ಯವಿಲ್ಲ ಎಂದರೆ ತೊಂದರೆ ಇಲ್ಲ. ಕಾಲಮಿತಿಯಲ್ಲಿ ಸರ್ಕಾರ ತ್ವರಿತವಾಗಿ ಎಲ್ಲರಿಗೂ ಲಸಿಕೆ ಹಾಕಿಸಿ, ಜನರನ್ನು ರಕ್ಷಣೆ ಮಾಡಲಿ” ಎಂದು ಶಿವಕುಮಾರ್ ಹೇಳಿದರು.

ಲಸಿಕೆ ಹಾಕಿಸಿಕೊಳ್ಳುವ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸಲು ಕೆಪಿಸಿಸಿ ಮಕ್ಕಳಿಗಾಗಿ ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನ ನಡೆಸಿದೆ. ವಯಸ್ಕರು ವ್ಯಾಕ್ಸಿನ್ ಪಡೆಯಲು ಪ್ರೇರಣೆಯಾಗುವಂತೆ 20 ಸಾವಿರಕ್ಕೂ ಹೆಚ್ಚು ಮಕ್ಕಳು ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಉತ್ತಮ ವಿಡಿಯೋ ಮಾಡಿದ 22 ಮಕ್ಕಳಿಗೆ ಆ್ಯಂಡ್ರಾಯ್ಡ್ ಟ್ಯಾಬ್ ಗಳನ್ನು ಬಹುಮಾನವಾಗಿ ಪಕ್ಷದ ವತಿಯಿಂದ ನೀಡಲಾಗಿದೆ. ನಾವಂತೂ ಜನರನ್ನು ಲಸಿಕೆ ಪಡೆಯಲು ಪ್ರೇರೇಪಿಸುತ್ತಿದ್ದೇವೆ. ಆದರೆ, ಲಸಿಕೆ ದಾಸ್ತಾನು ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ. ಆಡಳಿತ ನಡೆಸುವವರು ಎಚ್ಚೆತ್ತುಕೊಂಡು ಕೆಲಸ ಮಾಡಲಿ” ಎಂದು ಕಿವಿಮಾತು ಹೇಳಿದರು.

”ಮೂರು ತಿಂಗಳೊಳಗೆ ಶೇಕಡ 80 ಜನರಿಗೆ ಎರಡು ಡೋಸ್ ಲಸಿಕೆ ಹಾಕಿಸಿ, ಕೋವಿಡ್ 3 ನೇ ಅಲೆಯಿಂದ ಜನರನ್ನು ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ತಾಕೀತು ಮಾಡಲು ಪಕ್ಷದ ವತಿಯಿಂದ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗುವುದು” ಎಂದು ಶಿವಕುಮಾರ್ ತಿಳಿಸಿದರು.

About the Author

The Bengaluru Live

Administrator

Visit Website View All Posts

Post navigation

Previous: ಮಲ್ಲೇಶ್ವರಂ ಕ್ಷೇತ್ರದಲ್ಲಿ ಲಸಿಕಾ ಅಭಿಯಾನ ತ್ವರಿತಗೊಳಿಸಲು ಡಾ.ಸಿ.ಎನ್.ಅಶ್ವತ್ಥ ನಾರಾಯಣ ಒತ್ತು
Next: ಮೈಸೂರು ಅರಮನೆ, ಮೃಗಾಲಯ ಜುಲೈ 5 ರಿಂದ ವೀಕ್ಷಣೆಗೆ ಮುಕ್ತ

Related Stories

‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

Atul Chaturvedi November 29, 2026 9:07 PM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

The Bengaluru Live November 29, 2026 8:56 PM
ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

The Bengaluru Live November 29, 2026 7:53 PM

Latest Post

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ ‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

November 29, 2026 9:07 PM
ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

November 29, 2026 8:56 PM
ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

November 29, 2026 7:53 PM
850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್ ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

November 29, 2026 7:46 PM
‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ ಲಾಲ್‌ಬಾಗ್ ಫಲಕದ ಮುಂದೆ ನಿಂತು ಕುಳಿತಿರುವ ಜನರ ದೊಡ್ಡ ಗುಂಪು
  • ಬೆಂಗಳೂರು ನಗರ

‘ಲಾಲ್‌ಬಾಗ್ ಉಳಿಸಿದ್ದೇವೆ, ಮುಂದಿನ ನಿಲ್ದಾಣ ಹೆಬ್ಬಾಳ ಕೆರೆ’: ನಾಗರಿಕರ ವಿಜಯೋತ್ಸವದಲ್ಲಿ ತೇಜಸ್ವಿ ಸೂರ್ಯ

November 29, 2026 7:27 PM
₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು ಪ್ರತಿಭಟನಾ ವೇದಿಕೆಯಲ್ಲಿ ಕೈ ಎತ್ತಿ ಹೆಬ್ಬೆರಳು ತೋರುತ್ತಿರುವ ಗುಲಾಬಿ ಸೀರೆಯ ಆಶಾ ಕಾರ್ಯಕರ್ತೆಯರು ಮತ್ತು ಮುಖಂಡರು
  • ಬೆಂಗಳೂರು ನಗರ

₹2,000 ಹೆಚ್ಚಳಕ್ಕೆ ಲಿಖಿತ ಭರವಸೆ: 13 ದಿನಗಳ ಧರಣಿ ವಾಪಸ್ ಪಡೆದ ಆಶಾ ಕಾರ್ಯಕರ್ತೆಯರು

November 29, 2026 7:11 PM

ನೀವು ತಪ್ಪಿಸಿಕೊಂಡಿರಬಹುದು

‘ಗ್ಯಾನೇಶ್, ಇಟ್ಸ್ ಡನ್ ಬ್ರೋ’ ಫಲಕ ಹಿಡಿದ ರಾಹುಲ್ ಗಾಂಧಿ ಮತ್ತು ಮೈಕ್‌ನಲ್ಲಿ ಮಾತನಾಡುತ್ತಿರುವ ಬಿ.ವೈ. ವಿಜಯೇಂದ್ರ ಅವರ ಕೊಲಾಜ್
  • ಕರ್ನಾಟಕ
  • ರಾಜಕೀಯ

‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ

Atul Chaturvedi November 29, 2026 9:07 PM
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ
  • ಕರ್ನಾಟಕ

ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ

The Bengaluru Live November 29, 2026 8:56 PM
ಸ್ಪಾ ಸ್ವಾಗತ ಕೊಠಡಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು, ಒಬ್ಬರು ಗೋಡೆಯ ಸಿಸಿಟಿವಿ ಪರದೆಯ ಚಿತ್ರ ತೆಗೆಯುತ್ತಿರುವುದು
  • ಬೆಂಗಳೂರು ನಗರ

ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ

The Bengaluru Live November 29, 2026 7:53 PM
ಚೆನ್ನೈನ ಸಭೆಯೊಂದರಲ್ಲಿ ಮೇಜಿನ ಸುತ್ತ ಸೋಫಾಗಳ ಮೇಲೆ ವೃತ್ತಾಕಾರವಾಗಿ ಕುಳಿತಿರುವ ನಾಯಕರು
  • ಕರ್ನಾಟಕ
  • ರಾಜಕೀಯ

850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್

Atul Chaturvedi November 29, 2026 7:46 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ‘ಇಟ್ಸ್ ಡನ್, ಬ್ರೋ!’: ಸ್ಟಾಲಿನ್ ನಿಲುವಿನ ಬೆನ್ನಲ್ಲೇ ರಾಹುಲ್ ಗಾಂಧಿ ಮಾತನ್ನೇ ಅವರಿಗೆ ತಿರುಗೇಟಾಗಿ ಬಳಸಿದ ವಿಜಯೇಂದ್ರ
  • ಯುಜಿ ಆಯುಷ್ ಸ್ಟ್ರೇ ವೇಕೆನ್ಸಿ ಅಂತಿಮ ಫಲಿತಾಂಶ: 507 ಮಂದಿಗೆ ಸೀಟು, ಇನ್ನೂ 1,394 ಸೀಟು ಉಳಿಕೆ
  • ಬೆಂಗಳೂರು ಸ್ಪಾ ತಪಾಸಣೆ: 1,154 ಕೇಂದ್ರಗಳ ಪರಿಶೀಲನೆ, ಸುರಕ್ಷತಾ ಕಾಯ್ದೆ ಉಲ್ಲಂಘಿಸಿದ 11ರ ವಿರುದ್ಧ ಕ್ರಮ
  • 850 ಸ್ಥಾನಗಳಿಂದ ಬಿಜೆಪಿಗೆ ಭಾರತದ ಚುನಾವಣಾ ನಕ್ಷೆ ಬದಲಿಸುವ ಶಕ್ತಿ: ರಾಹುಲ್ ಗಾಂಧಿ; ಮಸೂದೆ ಬೆಂಬಲಿಸದೆ ಬೇರೆ ದಾರಿಯಿಲ್ಲ ಎಂದ ಸ್ಟಾಲಿನ್
©Copyright 2025 The Bengaluru Live All rights reserved. | MoreNews by AF themes.