Home ಆರೋಗ್ಯ ಒಂದು ಕೋಟಿ ಲಸಿಕೆಗಳನ್ನು ಖರೀದಿಸಲು ಕರ್ನಾಟಕ ಸರ್ಕಾರ ಆದೇಶ

ಒಂದು ಕೋಟಿ ಲಸಿಕೆಗಳನ್ನು ಖರೀದಿಸಲು ಕರ್ನಾಟಕ ಸರ್ಕಾರ ಆದೇಶ

51
0

ಶೀಘ್ರದಲ್ಲಿ 18-44 ವಯಸ್ಸಿನವರಿಗೆ 3ನೇ ಹಂತದ ಕೋವಿಡ್-19 ಲಸಿಕಾ ಯೋಜನೆ

ಬೆಂಗಳೂರು:

ರಾಜ್ಯ ಸರ್ಕಾರ 18 ರಿಂದ 44 ವಯಸ್ಸಿನ ನಡುವಿನ ನಾಗರೀಕರಿಗೆ ಕೋವಿಡ್-19 ಲಸಿಕೆಯನ್ನು ನೀಡುವ ಯೋಜನೆಯನ್ನು ಶೀಘ್ರದಲ್ಲಿ ರಾಜ್ಯದ್ಯಾಂತ ಆರಂಭಿಸಲಿದ್ದು, ಅದಕ್ಕಾಗಿ ಒಂದು ಕೋಟಿ ಲಸಿಕೆಗಳನ್ನು ಕೊಳ್ಳಲು ಕ್ರಮವಹಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರು ತಿಳಿಸಿದರು.

ಅವರು ಇಂದು 3ನೇ ಹಂತದ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಕುರಿತು ರಾಜ್ಯಮಟ್ಟದ ಇಲಾಖಾ ಕಾರ್ಯದರ್ಶಿಗಳೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ತಯಾರಿ ಸಭೆ ಉದ್ದೇಶಿಸಿ ಮಾತನಾಡಿದರು.

ರಾಜ್ಯದಲ್ಲಿರುವ 18-44 ವಯಸ್ಸಿನ ಜನಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವ ಲಸಿಕೆಯನ್ನು ಖರೀದಿಸಲು ನಿರ್ಧರಿಸಲಾಗಿದೆ. ಈಗಾಗಲೇ ಒಂದು ಕೋಟಿ ಲಸಿಕೆಗಳಿಗೆ ಸಂಬಂಧಿಸಿದ ಕಂಪನಿಗೆ ಬೇಡಿಕೆ ಸಲ್ಲಿಸಲಾಗಿದ್ದು, ಲಸಿಕಾ ತಯಾರಿಕ ಕಂಪನಿ ಸರಬರಾಜು ಆರಂಭಿಸಿದ ತಕ್ಷಣದಿಂದ ಯೋಜನೆ ಆರಂಭಿಸಲಾಗುವುದು ಎಂದು ಹೇಳಿದರು.

18 ರಿಂದ 44 ವಯಸ್ಸಿನ ಪ್ರತಿಯೊಬ್ಬರು ಈ ಲಸಿಕೆ ಪಡೆಯಲು cowin ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳುವುದು ಅಗತ್ಯವಿರುತ್ತದೆ. ಈ ಪೋರ್ಟಲ್ ನಲ್ಲಿ ಲಸಿಕೆಗೆ ಸಂಬಂಧಿಸಿದಂತೆ ಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ. ನೋಂದಣಿ ನಂತರ ಲಸಿಕೆ ಪಡೆಯುವ ಸಮಯ ಹಾಗೂ ದಿನಾಂಕವನ್ನು ತಿಳಿಯಬಹುದಾಗಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ 45 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿರುವ ಲಸಿಕಾ ಕಾರ್ಯಕ್ರಮ ಮೇ 1 ರ ನಂತರ ಸಹ ಮುಂದುವರೆಯಲಿದೆ ಎಂದು ಅವರು ತಿಳಿಸಿದರು.

LEAVE A REPLY

Please enter your comment!
Please enter your name here