Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ಯುವಜನರು ಹಿರಿಯರಿಗೆ ಲಸಿಕೆ ಕೊಡಿಸಿ: ಡಾ.ಕೆ.ಸುಧಾಕರ್
  • ಆರೋಗ್ಯ
  • ಉಡುಪಿ

ಯುವಜನರು ಹಿರಿಯರಿಗೆ ಲಸಿಕೆ ಕೊಡಿಸಿ: ಡಾ.ಕೆ.ಸುಧಾಕರ್

The Bengaluru Live March 30, 2021 6:30 PM
ಯುವಜನರು ಹಿರಿಯರಿಗೆ ಲಸಿಕೆ ಕೊಡಿಸಿ: ಡಾ.ಕೆ.ಸುಧಾಕರ್

ಯುವಜನರು ಹಿರಿಯರಿಗೆ ಲಸಿಕೆ ಕೊಡಿಸಿ: ಡಾ.ಕೆ.ಸುಧಾಕರ್

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಉಡುಪಿ:

ವಿಜಯನಗರ ಸಾಮ್ರಾಜ್ಯದಲ್ಲಿ ಸೃಷ್ಟಿಯಾಗಿದ್ದ ವೈಭವದಂತೆ ಆರೋಗ್ಯ ಕ್ಷೇತ್ರದಲ್ಲೂ ವೈಭವ ತರಬೇಕಿದೆ. ಇದಕ್ಕಾಗಿ ಆಸ್ಪತ್ರೆಗಳ ಮೂಲಸೌಕರ್ಯ ಹೆಚ್ಚಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ವರ್ಚುವಲ್ ವೇದಿಕೆ ಮೂಲಕ ವಿವಿಧ ಮೂಲಸೌಕರ್ಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೋನಾ ಸೋಂಕು ತಡೆಗೆ ಲಸಿಕೆ ಅಗತ್ಯವಾಗಿದೆ. ಇದಕ್ಕಾಗಿ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲರೂ ಲಸಿಕೆ ಪಡೆಯಬೇಕು. ಯುವ ಸಮೂಹ ಹಿರಿಯರಿಗೆ ಲಸಿಕೆ ಹಾಕಿಸಲು ಮುಂದಾಗಬೇಕು ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ನೀಡಿದ್ದಾರೆ. ಮೂರು ಹಂತಗಳ ಆರೋಗ್ಯ ಸೇವೆಯನ್ನು ಬಲಪಡಿಸಲಾಗುತ್ತಿದೆ. ಪಿಎಚ್ ಸಿಗಳಿಗೆ ಆಧುನಿಕ ಸ್ಪರ್ಶ ನೀಡಲಾಗುತ್ತಿದೆ ಎಂದರು.

ರೋಗಗಳು ಬಂದ ನಂತರ ಔಷಧಿ ನೀಡುವುದಕ್ಕಿಂತ ಮುಂಚಿತವಾಗಿ ರೋಗ ಬಾರದಂತೆ ಮಾಡುವ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ವೈದ್ಯರು ಕೆಲಸ ಮಾಡುವುದನ್ನು ಉತ್ತೇಜಿಸಲು ಕಾನೂನಿನಲ್ಲಿ ಬದಲಾವಣೆ ತರಲಾಗುತ್ತಿದೆ. ಹಳ್ಳಿಗಳಲ್ಲಿ ಹೆಚ್ಚು ಜನರು ವಾಸಿಸುತ್ತಿದ್ದು, ವೈದ್ಯರ ಸೇವೆ ಅಗತ್ಯ ಎಂದರು.

Sudhakar in Udupi

ರಾಜ್ಯದ ನಾಲ್ಕು ಕಡೆಗಳಲ್ಲಿ ಈಗಾಗಲೇ ವೈದ್ಯಕೀಯ ಕಾಲೇಜು ನಿರ್ಮಾಣ ಆರಂಭವಾಗಿದೆ. ದೇಶದಲ್ಲಿ 157 ವೈದ್ಯಕೀಯ ಕಾಲೇಜುಗಳ ನಿರ್ಮಾಣವಾಗುತ್ತಿದೆ. ಇದು ಪೂರ್ಣವಾದರೆ ಸುಮಾರು 27 ಸಾವಿರ ವಿದ್ಯಾರ್ಥಿಗಳಿಗೆ ವ್ಯಾಸಂಗದ ಅವಕಾಶ ಸಿಗಲಿದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ವೈದ್ಯರ ನೇರ ನೇಮಕ ನಡೆಯುತ್ತಿದೆ ಎಂದರು.

ಬಳಿಕ ಸಚಿವ ಡಾ.ಕೆ.ಸುಧಾಕರ್, ಉಡುಪಿಯ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿ, ಮಣಿಪಾಲ್ ಕ್ಯಾಂಪಸ್ ದೊಡ್ಡದಿದ್ದು, ಸುಮಾರು 11 ಸಾವಿರ ಜನರಿದ್ದಾರೆ. ಇಲ್ಲಿ 900 ಮಂದಿಗೆ ಕೊರೋನಾ ಸೋಂಕು ತಗಲಿದ್ದು, ನಿರ್ದಿಷ್ಟ ಕ್ರಮ ವಹಿಸಲು ಸೂಚಿಸಲಾಗಿದೆ. ಇಡೀ ಕ್ಯಾಂಪಸ್ ಅನ್ನು ಕಂಟೇನ್ಮೆಂಟ್ ಮಾಡಲಾಗಿದೆ. ಯಾರಿಗೂ ಸೋಂಕಿನ ತೀವ್ರತೆ ಇಲ್ಲ ಎಂಬುದು ಸಮಾಧಾನಕರ ಸಂಗತಿ. ನೆಗೆಟಿವ್ ಇರುವವರನ್ನು ಮಾತ್ರ ಮನೆಗೆ ಕಳುಹಿಸಲಾಗುತ್ತಿದೆ ಎಂದರು.

ಒಂದೇ ಕ್ಯಾಂಪಸ್ ನಲ್ಲಿ ಹೆಚ್ಚು ಜನರಿರುವುದು ಸೋಂಕು ಬೇಗ ಹರಡಲು ಕಾರಣ. ವಿದ್ಯಾರ್ಥಿಗಳು ಕೋವಿಡ್ ಸುರಕ್ಷತಾ ಕ್ರಮ ಪಾಲಿಸುವುದಿಲ್ಲ. ಪರೀಕ್ಷೆ ನಂತರ ಪಾರ್ಟಿ ಮಾಡುವುದು, ಸುತ್ತುವುದು ಕೂಡ ಕಾರಣ ಇರಬಹುದು. ಈಗ ಎಲ್ಲ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ ಎಂದರು.

ರಾಜ್ಯದಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆಯೇ ಹೊರತು ಮರಣ ದರ ಹೆಚ್ಚಿಲ್ಲ. ಸೋಂಕು ನಿಯಂತ್ರಣ ಕುರಿತು ಮುಖ್ಯಮಂತ್ರಿಗಳು ಅವಲೋಕಿಸಿ ಎಲ್ಲ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದರು.

About the Author

The Bengaluru Live

Administrator

Visit Website View All Posts

Post navigation

Previous: ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ: ಮ್ಯಾಜಿಸ್ಟ್ರೇಟ್ ಎದುರು ಸಂತ್ರಸ್ತ ಯುವತಿ ಹೇಳಿಕೆ ದಾಖಲು
Next: ಎಸ್ಐಟಿಯಿಂದ ಸಿಡಿ ಯುವತಿಯ ಧ್ವನಿ ಪರೀಕ್ಷೆ, ಪ್ರಾಥಮಿಕ ವಿಚಾರಣೆ: ನಾಳೆ ವಿಚಾರಣೆಗೆ ಬರುವಂತೆ ಮತ್ತೆ ನೋಟಿಸ್

Related Stories

ಕಿದ್ವಾಯಿ ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಆರೋಗ್ಯ
  • ಬೆಂಗಳೂರು ನಗರ

ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ

The Bengaluru Live November 14, 2026 10:05 PM
ತಪಾಸಣೆಯ ವೇಳೆ ರಸಗುಲ್ಲಾ ಪಾತ್ರೆಗಳನ್ನು ಪರಿಶೀಲಿಸುತ್ತಿರುವ ಆಹಾರ ಸುರಕ್ಷತಾ ಅಧಿಕಾರಿ
  • ಆರೋಗ್ಯ
  • ರಾಷ್ಟ್ರೀಯ

ಎಫ್‌ಎಸ್‌ಎಸ್‌ಎಐ ಹಬ್ಬದ ಕಾರ್ಯಾಚರಣೆ: 56,431 ಆಹಾರ ಮಳಿಗೆಗಳ ತಪಾಸಣೆ, 1,133 ಪರವಾನಗಿ ಅಮಾನತು, 3,279 ಟನ್ ಆಹಾರ ವಶ

The Bengaluru Live November 8, 2026 1:11 PM
ದಾವಣಗೆರೆಯ ಚಿಗಟೇರಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಹೊರನೋಟ
  • ಆರೋಗ್ಯ
  • ಕರ್ನಾಟಕ

ಶಸ್ತ್ರಚಿಕಿತ್ಸಾ ಕೊಠಡಿ ಅಗ್ನಿ ಸುರಕ್ಷತೆ ಕುರಿತು ಚಿಗಟೇರಿ ಆಸ್ಪತ್ರೆಗೆ ಕರ್ನಾಟಕದ ಎಚ್ಚರಿಕೆ

The Bengaluru Live November 6, 2026 9:30 PM

Latest Post

ಲೇಖಕ ರವಿ ಹಂಜ್ ನೆರೆ ರಾಜ್ಯದಲ್ಲಿ ಪತ್ತೆ: ವಿಚಾರಣೆಗೆ ಹಾಜರಾಗಲು ನೋಟಿಸ್, ಅಮೆರಿಕ ದೂತಾವಾಸಕ್ಕೂ ಮಾಹಿತಿ ಎಂದ ಪ್ರಿಯಾಂಕ್ ಖರ್ಗೆ ಹಸಿರಿನ ನಡುವೆ ಕುದುರೆಯ ಮೇಲಿರುವ ಬಸವೇಶ್ವರರ ಪ್ರತಿಮೆ
  • ಕರ್ನಾಟಕ

ಲೇಖಕ ರವಿ ಹಂಜ್ ನೆರೆ ರಾಜ್ಯದಲ್ಲಿ ಪತ್ತೆ: ವಿಚಾರಣೆಗೆ ಹಾಜರಾಗಲು ನೋಟಿಸ್, ಅಮೆರಿಕ ದೂತಾವಾಸಕ್ಕೂ ಮಾಹಿತಿ ಎಂದ ಪ್ರಿಯಾಂಕ್ ಖರ್ಗೆ

November 21, 2026 9:44 PM
ಹಿರಿಯೂರಿನಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಸಿಎಂ ಶಿವಕುಮಾರ್: ನ್ಯಾಯಯುತ ಬೇಡಿಕೆ ಈಡೇರಿಸುವ ಭರವಸೆ ಸರ್ಕಾರಿ ನೌಕರರ ಸಮ್ಮೇಳನದ ಬ್ಯಾನರ್ ಮುಂದೆ ವೇದಿಕೆಯ ಮೇಲೆ ಹಳದಿ ಮತ್ತು ಕೆಂಪು ಶಾಲು ಹೊದ್ದ ವ್ಯಕ್ತಿಗಳು ಸ್ಮರಣಿಕೆ ಹಿಡಿದು ನಿಂತಿದ್ದಾರೆ
  • ಕರ್ನಾಟಕ
  • ಚಿತ್ರದುರ್ಗ

ಹಿರಿಯೂರಿನಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಸಿಎಂ ಶಿವಕುಮಾರ್: ನ್ಯಾಯಯುತ ಬೇಡಿಕೆ ಈಡೇರಿಸುವ ಭರವಸೆ

November 21, 2026 9:39 PM
ಮಾಸ್ತಿಗುಡಿಯಲ್ಲಿ ₹6 ಕೋಟಿ ವೆಚ್ಚದ ಆದಿವಾಸಿ ವಸತಿ ಶಾಲೆ ಉದ್ಘಾಟನೆ: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಯತೀಂದ್ರ ಸಿದ್ದರಾಮಯ್ಯ ಕರೆ ಗುಲಾಬಿ ಬಣ್ಣದ ಮೇಲ್ಛಾವಣಿಯ ವೇದಿಕೆಯಲ್ಲಿ ಹೂವಿನಿಂದ ಅಲಂಕರಿಸಿದ ಮೇಜಿನ ಹಿಂದೆ ಸಾಲಾಗಿ ನಿಂತಿರುವ ಅಧಿಕಾರಿಗಳು ಮತ್ತು ಮುಖಂಡರು
  • ಕರ್ನಾಟಕ
  • ಮೈಸೂರು

ಮಾಸ್ತಿಗುಡಿಯಲ್ಲಿ ₹6 ಕೋಟಿ ವೆಚ್ಚದ ಆದಿವಾಸಿ ವಸತಿ ಶಾಲೆ ಉದ್ಘಾಟನೆ: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಯತೀಂದ್ರ ಸಿದ್ದರಾಮಯ್ಯ ಕರೆ

November 21, 2026 9:30 PM
ಹೆಗ್ಗಡದೇವನಕೋಟೆಯಲ್ಲಿ ಪ್ರಜಾಸೇವೆ ಆಂದೋಲನ: ಸಾರ್ವಜನಿಕರ ಅಹವಾಲು ಆಲಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಯತೀಂದ್ರ ಸಿದ್ದರಾಮಯ್ಯ ಸೂಚನೆ ಪ್ರಜಾಸೇವೆ ಆಂದೋಲನ ಬ್ಯಾನರ್ ಅಡಿ ಮೇಜುಗಳ ಬಳಿ ಕುಳಿತಿರುವ ಅಧಿಕಾರಿಗಳ ಮುಂದೆ ಮೈಕ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ
  • ಕರ್ನಾಟಕ
  • ಮೈಸೂರು

ಹೆಗ್ಗಡದೇವನಕೋಟೆಯಲ್ಲಿ ಪ್ರಜಾಸೇವೆ ಆಂದೋಲನ: ಸಾರ್ವಜನಿಕರ ಅಹವಾಲು ಆಲಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಯತೀಂದ್ರ ಸಿದ್ದರಾಮಯ್ಯ ಸೂಚನೆ

November 21, 2026 9:25 PM
ಮೊದಲ ಬಾರಿ ಸೀನಿಯರ್ ಮಹಿಳಾ ಟಿ20 ಟ್ರೋಫಿ ಗೆದ್ದ ಕರ್ನಾಟಕ: 11 ಬಾರಿಯ ಚಾಂಪಿಯನ್ ರೈಲ್ವೇಸ್ ವಿರುದ್ಧ ಫೈನಲ್‌ನಲ್ಲಿ 3 ರನ್ ಗೆಲುವು ಫೈನಲ್ ಬಳಿಕ ಕಣ್ಣೀರಿನೊಂದಿಗೆ ಕೆಎಸ್‌ಸಿಎ ಟೋಪಿ ಧರಿಸಿದ ಕರ್ನಾಟಕ ಮಹಿಳಾ ಕ್ರಿಕೆಟ್ ಆಟಗಾರ್ತಿ, ಈ ಸಲ ಕಪ್ ನಮ್ದು ಎಂಬ ಬರಹ
  • ಕರ್ನಾಟಕ
  • ಕ್ರೀಡೆ

ಮೊದಲ ಬಾರಿ ಸೀನಿಯರ್ ಮಹಿಳಾ ಟಿ20 ಟ್ರೋಫಿ ಗೆದ್ದ ಕರ್ನಾಟಕ: 11 ಬಾರಿಯ ಚಾಂಪಿಯನ್ ರೈಲ್ವೇಸ್ ವಿರುದ್ಧ ಫೈನಲ್‌ನಲ್ಲಿ 3 ರನ್ ಗೆಲುವು

November 21, 2026 9:15 PM
ಪಶ್ಚಿಮ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಐದು ವಿಭಾಗಗಳ ಪರಿಶೀಲನೆ: ಕಸ ತೆರವು, ಕೆರೆ ಹೂಳೆತ್ತುವಿಕೆ, ಜಂಕ್ಷನ್ ಕಾಮಗಾರಿಗೆ ಸೂಚನೆ ಪರಿಶೀಲನೆ ವೇಳೆ ಮರಗಳಿರುವ ಕೆರೆಯ ದಡದಲ್ಲಿ ನಿಂತಿರುವ ಅಧಿಕಾರಿಗಳು
  • ಬೆಂಗಳೂರು ನಗರ

ಪಶ್ಚಿಮ ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಐದು ವಿಭಾಗಗಳ ಪರಿಶೀಲನೆ: ಕಸ ತೆರವು, ಕೆರೆ ಹೂಳೆತ್ತುವಿಕೆ, ಜಂಕ್ಷನ್ ಕಾಮಗಾರಿಗೆ ಸೂಚನೆ

November 21, 2026 7:39 PM

ನೀವು ತಪ್ಪಿಸಿಕೊಂಡಿರಬಹುದು

ಹಸಿರಿನ ನಡುವೆ ಕುದುರೆಯ ಮೇಲಿರುವ ಬಸವೇಶ್ವರರ ಪ್ರತಿಮೆ
  • ಕರ್ನಾಟಕ

ಲೇಖಕ ರವಿ ಹಂಜ್ ನೆರೆ ರಾಜ್ಯದಲ್ಲಿ ಪತ್ತೆ: ವಿಚಾರಣೆಗೆ ಹಾಜರಾಗಲು ನೋಟಿಸ್, ಅಮೆರಿಕ ದೂತಾವಾಸಕ್ಕೂ ಮಾಹಿತಿ ಎಂದ ಪ್ರಿಯಾಂಕ್ ಖರ್ಗೆ

The Bengaluru Live November 21, 2026 9:44 PM
ಸರ್ಕಾರಿ ನೌಕರರ ಸಮ್ಮೇಳನದ ಬ್ಯಾನರ್ ಮುಂದೆ ವೇದಿಕೆಯ ಮೇಲೆ ಹಳದಿ ಮತ್ತು ಕೆಂಪು ಶಾಲು ಹೊದ್ದ ವ್ಯಕ್ತಿಗಳು ಸ್ಮರಣಿಕೆ ಹಿಡಿದು ನಿಂತಿದ್ದಾರೆ
  • ಕರ್ನಾಟಕ
  • ಚಿತ್ರದುರ್ಗ

ಹಿರಿಯೂರಿನಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಸಿಎಂ ಶಿವಕುಮಾರ್: ನ್ಯಾಯಯುತ ಬೇಡಿಕೆ ಈಡೇರಿಸುವ ಭರವಸೆ

The Bengaluru Live November 21, 2026 9:39 PM
ಗುಲಾಬಿ ಬಣ್ಣದ ಮೇಲ್ಛಾವಣಿಯ ವೇದಿಕೆಯಲ್ಲಿ ಹೂವಿನಿಂದ ಅಲಂಕರಿಸಿದ ಮೇಜಿನ ಹಿಂದೆ ಸಾಲಾಗಿ ನಿಂತಿರುವ ಅಧಿಕಾರಿಗಳು ಮತ್ತು ಮುಖಂಡರು
  • ಕರ್ನಾಟಕ
  • ಮೈಸೂರು

ಮಾಸ್ತಿಗುಡಿಯಲ್ಲಿ ₹6 ಕೋಟಿ ವೆಚ್ಚದ ಆದಿವಾಸಿ ವಸತಿ ಶಾಲೆ ಉದ್ಘಾಟನೆ: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಯತೀಂದ್ರ ಸಿದ್ದರಾಮಯ್ಯ ಕರೆ

The Bengaluru Live November 21, 2026 9:30 PM
ಪ್ರಜಾಸೇವೆ ಆಂದೋಲನ ಬ್ಯಾನರ್ ಅಡಿ ಮೇಜುಗಳ ಬಳಿ ಕುಳಿತಿರುವ ಅಧಿಕಾರಿಗಳ ಮುಂದೆ ಮೈಕ್‌ನಲ್ಲಿ ಮಾತನಾಡುತ್ತಿರುವ ವ್ಯಕ್ತಿ
  • ಕರ್ನಾಟಕ
  • ಮೈಸೂರು

ಹೆಗ್ಗಡದೇವನಕೋಟೆಯಲ್ಲಿ ಪ್ರಜಾಸೇವೆ ಆಂದೋಲನ: ಸಾರ್ವಜನಿಕರ ಅಹವಾಲು ಆಲಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಯತೀಂದ್ರ ಸಿದ್ದರಾಮಯ್ಯ ಸೂಚನೆ

The Bengaluru Live November 21, 2026 9:25 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಲೇಖಕ ರವಿ ಹಂಜ್ ನೆರೆ ರಾಜ್ಯದಲ್ಲಿ ಪತ್ತೆ: ವಿಚಾರಣೆಗೆ ಹಾಜರಾಗಲು ನೋಟಿಸ್, ಅಮೆರಿಕ ದೂತಾವಾಸಕ್ಕೂ ಮಾಹಿತಿ ಎಂದ ಪ್ರಿಯಾಂಕ್ ಖರ್ಗೆ
  • ಹಿರಿಯೂರಿನಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ಸಿಎಂ ಶಿವಕುಮಾರ್: ನ್ಯಾಯಯುತ ಬೇಡಿಕೆ ಈಡೇರಿಸುವ ಭರವಸೆ
  • ಮಾಸ್ತಿಗುಡಿಯಲ್ಲಿ ₹6 ಕೋಟಿ ವೆಚ್ಚದ ಆದಿವಾಸಿ ವಸತಿ ಶಾಲೆ ಉದ್ಘಾಟನೆ: ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಯತೀಂದ್ರ ಸಿದ್ದರಾಮಯ್ಯ ಕರೆ
  • ಹೆಗ್ಗಡದೇವನಕೋಟೆಯಲ್ಲಿ ಪ್ರಜಾಸೇವೆ ಆಂದೋಲನ: ಸಾರ್ವಜನಿಕರ ಅಹವಾಲು ಆಲಿಸಿ ಪರಿಹರಿಸುವಂತೆ ಅಧಿಕಾರಿಗಳಿಗೆ ಯತೀಂದ್ರ ಸಿದ್ದರಾಮಯ್ಯ ಸೂಚನೆ
©Copyright 2025 The Bengaluru Live All rights reserved. | MoreNews by AF themes.