Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಆರೋಗ್ಯ
  • ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ
  • ಆರೋಗ್ಯ
  • ಬೆಂಗಳೂರು ನಗರ

ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ

The Bengaluru Live November 14, 2026 10:05 PM
ಕಿದ್ವಾಯಿ ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಗೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಗುವಿನೊಂದಿಗೆ. ಚಿತ್ರ: ಸಿಎಂಒ ಕರ್ನಾಟಕ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು: ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲಿ ಹೆಚ್ಚುವರಿಯಾಗಿ 200 ಹಾಸಿಗೆಗಳ ವ್ಯವಸ್ಥೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಮಕ್ಕಳ ದಿನಾಚರಣೆ ಅಂಗವಾಗಿ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳನ್ನು ವಿಚಾರಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.

ಮಕ್ಕಳೊಂದಿಗೆ ಬರುವ ತಾಯಂದಿರು ಹಾಗೂ ಕುಟುಂಬದ ಸದಸ್ಯರಿಗೆ ವಸತಿ ಕಲ್ಪಿಸಲು 3 ಎಕರೆ ಜಾಗದ ಬೇಡಿಕೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಸಿಎಂ ಕಿದ್ವಾಯಿ ಆಸ್ಪತ್ರೆಯ ಕಪೂರ್ ಕಟ್ಟಡದ ಕೆಳಗಿನ ವಾರ್ಡ್‌ಗಳಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಮಾತನಾಡಿ, “ಸರಿಯಾಗಿ ನೋಡಿಕೊಳ್ತಾ ಇದ್ದಾರಾ? ಊಟ ಕೊಡ್ತಾ ಇದ್ದಾರಾ?” ಎಂದು ವಿಚಾರಿಸಿದರು. ಮಕ್ಕಳಿಗೆ ಚಾಕೊಲೇಟ್ ಮತ್ತು ಡ್ರಾಯಿಂಗ್ ಪುಸ್ತಕಗಳನ್ನು ಹಂಚಿದರು.

ಒಂದು ಮಗುವಿನ ತಾಯಿಗೆ ಗೃಹಜ್ಯೋತಿ, ಗೃಹಲಕ್ಷ್ಮಿ ಸೌಲಭ್ಯಗಳು ಸಿಗುತ್ತಿವೆಯೇ ಎಂದು ವಿಚಾರಿಸಿದ ಅವರು, ಇನ್ನೊಂದು ಮಗುವಿನ ಕುಟುಂಬದ ಎಪಿಎಲ್ ಕಾರ್ಡನ್ನು ತಕ್ಷಣ ಬಿಪಿಎಲ್ ಕಾರ್ಡ್‌ಗೆ ಬದಲಾಯಿಸಿಕೊಡುವಂತೆ ಸ್ಥಳದಲ್ಲೇ ಸೂಚಿಸಿದರು.

ಆಸ್ಪತ್ರೆಯ ಆವರಣದಲ್ಲಿ ರೋಗಿಗಳನ್ನು ನೋಡಿಕೊಳ್ಳಲು ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ತಾಯಂದಿರು ಮತ್ತು ಸಂಬಂಧಿಕರ ಪಕ್ಕ ಕುಳಿತು, “ಎಲ್ಲಾ ಸೌಲಭ್ಯ ಕೊಡ್ತಾ ಇದ್ದಾರಾ? ಹಣ ಏನಾದರೂ ಕೇಳ್ತಾರಾ?” ಎಂದು ವಿಚಾರಿಸಿದರು. “ನಿಮ್ಮ ನಿಮ್ಮ ಜಿಲ್ಲೆಗಳಲ್ಲೇ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡುತ್ತೇವೆ” ಎಂದು ಭರವಸೆ ನೀಡಿದರು.

“ಆಟವಾಡುತ್ತಾ ಬಾಲ್ಯ ಕಳೆಯಬೇಕಾದ ಪುಟ್ಟ ಕಂದಮ್ಮಗಳು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಯೊಂದಿಗೆ ಹೋರಾಡುತ್ತಿರುವ ದೃಶ್ಯ ಎಂಥವರ ಮನವನ್ನೂ ಕಲಕುವಂತದ್ದು. ಇಂತಹ ಕುಟುಂಬಗಳಿಗೆ ಚಿಕಿತ್ಸೆ ಜತೆಗೆ ಆಸರೆ ಮತ್ತು ಧೈರ್ಯ ನೀಡುವುದು ಸರ್ಕಾರದ ಜವಾಬ್ದಾರಿ” ಎಂದು ಶಿವಕುಮಾರ್ ಹೇಳಿದರು.

ತಾವು ಹಿಂದೆ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದಾಗಲೇ ಕಿದ್ವಾಯಿ ಆಸ್ಪತ್ರೆಯ ಅಭಿವೃದ್ಧಿ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದೆ, ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಇಲ್ಲಿಗೆ ಬಂದು ಮಕ್ಕಳ ಪರಿಸ್ಥಿತಿ ನೋಡಬೇಕು ಎಂದು ಬಂದಿದ್ದೆ ಎಂದ ಅವರು, “ಏನು ಹೇಳಬೇಕು ಎಂಬುದೇ ತಿಳಿಯುವುದಿಲ್ಲ. ಆದರೆ ಮಕ್ಕಳಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅವರ ಭವಿಷ್ಯ ಬಹಳ ಮುಖ್ಯ” ಎಂದು ಭಾವುಕರಾದರು.

ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಹೊರರಾಜ್ಯಗಳಿಂದಲೂ ರೋಗಿಗಳು ಚಿಕಿತ್ಸೆಗಾಗಿ ಕಿದ್ವಾಯಿಗೆ ಬರುತ್ತಿದ್ದಾರೆ. ವರ್ಷಕ್ಕೆ ಸುಮಾರು 3.5 ಲಕ್ಷ ರೋಗಿಗಳು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದು, ಪ್ರತಿದಿನ ಸರಾಸರಿ ಒಂದು ಸಾವಿರ ಮಂದಿ ಬರುತ್ತಿದ್ದಾರೆ. ಇಷ್ಟೊಂದು ದೊಡ್ಡ ಸಂಖ್ಯೆಯ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದು ವಿಶೇಷ ಎಂದ ಮುಖ್ಯಮಂತ್ರಿ, ವೈದ್ಯರು ಮತ್ತು ಸಿಬ್ಬಂದಿಯ ಕಾರ್ಯವನ್ನು ಮೆಚ್ಚಿದರು.

ಕ್ಯಾನ್ಸರ್ ಚಿಕಿತ್ಸೆಗೆಂದು ಎಲ್ಲರೂ ಬೆಂಗಳೂರಿನ ಕಿದ್ವಾಯಿಗೆ ಬರುವ ಅನಿವಾರ್ಯತೆ ತಪ್ಪಬೇಕು ಎಂದು ಹೇಳಿದ ಅವರು, ತುಮಕೂರು, ಮೈಸೂರು, ಬಳ್ಳಾರಿ, ಕಲಬುರಗಿ ಹಾಗೂ ರಾಯಚೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿಕಿತ್ಸಾ ವ್ಯವಸ್ಥೆ ಆರಂಭಿಸಲು ಕಾರ್ಯಕ್ರಮ ರೂಪಿಸಲಾಗಿದೆ, ಈ ಯೋಜನೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದರು.

ಕಿದ್ವಾಯಿಯಲ್ಲಿ ಈಗಾಗಲೇ ಒಂದು ರೋಬೋಟಿಕ್ ಯಂತ್ರ ಕಾರ್ಯನಿರ್ವಹಿಸುತ್ತಿದ್ದು, ಮತ್ತೊಂದು ರೋಬೋಟಿಕ್ ಯಂತ್ರ ಸೇರಿದಂತೆ ಅಗತ್ಯ ವೈದ್ಯಕೀಯ ಉಪಕರಣಗಳ ಖರೀದಿಗೆ ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಅನುಮತಿ ನೀಡಲಾಗಿದೆ ಎಂದು ಶಿವಕುಮಾರ್ ತಿಳಿಸಿದರು.

ರೋಬೋಟಿಕ್ ಶಸ್ತ್ರಚಿಕಿತ್ಸಾ ಉಪಕರಣಗಳ ಕುರಿತು ದಿ ಬೆಂಗಳೂರು ಲೈವ್‌ನ ಹಿಂದಿನ ವರದಿ

  • ಕಿದ್ವಾಯಿ ಮತ್ತು ಹುಬ್ಬಳ್ಳಿ ಕಿಮ್ಸ್‌ನಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸಾ ಉಪಕರಣಕ್ಕೆ ₹40 ಕೋಟಿ: ಸಂಪುಟ ಅನುಮೋದನೆ

About the Author

The Bengaluru Live

Administrator

Visit Website View All Posts

Post navigation

Previous: ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ

Related Stories

ಐದನೇ ಕರ್ನಾಟಕ ಮಿನಿ ಒಲಂಪಿಕ್ಸ್ ಉದ್ಘಾಟನಾ ವೇದಿಕೆಯಲ್ಲಿ ಮೈಕ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕ್ರೀಡೆ
  • ಬೆಂಗಳೂರು ನಗರ

ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್

The Bengaluru Live November 14, 2026 9:44 PM
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನದ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗಣ್ಯರು
  • ಬೆಂಗಳೂರು ನಗರ
  • ರಾಜಕೀಯ

ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ

The Bengaluru Live November 14, 2026 12:30 PM
ಅಶೋಕ ಸಿಂಹಗಳು ಮತ್ತು ಎನ್‌ಐಎ ಮುದ್ರೆಯೊಂದಿಗೆ ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆಯ ಲಾಂಛನ
  • ಅಪರಾಧ
  • ಬೆಂಗಳೂರು ನಗರ

ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುಡುಮಡಂ ಇಮ್ರಾನ್ ಬಂಧನ

The Bengaluru Live November 14, 2026 10:34 AM

Latest Post

ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ ಕಿದ್ವಾಯಿ ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಆರೋಗ್ಯ
  • ಬೆಂಗಳೂರು ನಗರ

ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ

November 14, 2026 10:05 PM
ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ KEA UG NEET ಎರಡನೇ ಸುತ್ತಿನ ಸೀಟು ರದ್ದತಿಗೆ ₹10,000 ದಂಡ; MCC ಸೀಟು ಪಡೆದವರಿಗೆ ಸೆಪ್ಟೆಂಬರ್ 20ರವರೆಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ
  • ಕರ್ನಾಟಕ
  • ಶಿಕ್ಷಣ

ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ

November 14, 2026 9:52 PM
ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್ ಐದನೇ ಕರ್ನಾಟಕ ಮಿನಿ ಒಲಂಪಿಕ್ಸ್ ಉದ್ಘಾಟನಾ ವೇದಿಕೆಯಲ್ಲಿ ಮೈಕ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕ್ರೀಡೆ
  • ಬೆಂಗಳೂರು ನಗರ

ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್

November 14, 2026 9:44 PM
ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನದ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗಣ್ಯರು
  • ಬೆಂಗಳೂರು ನಗರ
  • ರಾಜಕೀಯ

ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ

November 14, 2026 12:30 PM
ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುಡುಮಡಂ ಇಮ್ರಾನ್ ಬಂಧನ ಅಶೋಕ ಸಿಂಹಗಳು ಮತ್ತು ಎನ್‌ಐಎ ಮುದ್ರೆಯೊಂದಿಗೆ ಗೃಹ ಸಚಿವಾಲಯದ ರಾಷ್ಟ್ರೀಯ ತನಿಖಾ ಸಂಸ್ಥೆಯ ಲಾಂಛನ
  • ಅಪರಾಧ
  • ಬೆಂಗಳೂರು ನಗರ

ಶ್ರೀಲಂಕಾ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪುಡುಮಡಂ ಇಮ್ರಾನ್ ಬಂಧನ

November 14, 2026 10:34 AM
ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ ಯಲಹಂಕ ಹೊಸ ಪಟ್ಟಣದಲ್ಲಿ ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಗೌಡ
  • ಅಪರಾಧ
  • ಬೆಂಗಳೂರು ನಗರ

ಬೆಂಗಳೂರಿನ ಯಲಹಂಕ ಹೊಸ ಪಟ್ಟಣದಲ್ಲಿ ಕಚೇರಿ ಹೊರಗೆ ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ

November 13, 2026 9:57 PM

ನೀವು ತಪ್ಪಿಸಿಕೊಂಡಿರಬಹುದು

ಕಿದ್ವಾಯಿ ಆಸ್ಪತ್ರೆಯಲ್ಲಿ ಮಗುವಿನೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಆರೋಗ್ಯ
  • ಬೆಂಗಳೂರು ನಗರ

ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ

The Bengaluru Live November 14, 2026 10:05 PM
KEA UG NEET ಎರಡನೇ ಸುತ್ತಿನ ಸೀಟು ರದ್ದತಿಗೆ ₹10,000 ದಂಡ; MCC ಸೀಟು ಪಡೆದವರಿಗೆ ಸೆಪ್ಟೆಂಬರ್ 20ರವರೆಗೆ ದಂಡವಿಲ್ಲದೆ ನಿರ್ಗಮನಕ್ಕೆ ಅವಕಾಶ
  • ಕರ್ನಾಟಕ
  • ಶಿಕ್ಷಣ

ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ

The Bengaluru Live November 14, 2026 9:52 PM
ಐದನೇ ಕರ್ನಾಟಕ ಮಿನಿ ಒಲಂಪಿಕ್ಸ್ ಉದ್ಘಾಟನಾ ವೇದಿಕೆಯಲ್ಲಿ ಮೈಕ್ ಮುಂದೆ ಮಾತನಾಡುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
  • ಕ್ರೀಡೆ
  • ಬೆಂಗಳೂರು ನಗರ

ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್

The Bengaluru Live November 14, 2026 9:44 PM
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನದ ಮುಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಗಣ್ಯರು
  • ಬೆಂಗಳೂರು ನಗರ
  • ರಾಜಕೀಯ

ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ

The Bengaluru Live November 14, 2026 12:30 PM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಕಿದ್ವಾಯಿಯಲ್ಲಿ 200 ಹೆಚ್ಚುವರಿ ಹಾಸಿಗೆ: ಮಕ್ಕಳ ದಿನಾಚರಣೆಯಂದು ಭೇಟಿ ನೀಡಿದ ಸಿಎಂ ಶಿವಕುಮಾರ್ ಘೋಷಣೆ
  • ಎಂಎಸ್ಸಿ ನರ್ಸಿಂಗ್: 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟ; ನ.16ರೊಳಗೆ ಪ್ರವೇಶ
  • ಮಿನಿ ಒಲಂಪಿಕ್ಸ್ ಉದ್ಘಾಟನೆ: ಶಾಲಾ ಕ್ರೀಡೆಗೆ ಉತ್ತೇಜನ, ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಗಮನ ಎಂದ ಶಿವಕುಮಾರ್
  • ಬೆಂಗಳೂರಿನ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಭಾರತ ಪ್ರಾದೇಶಿಕ ಸಮ್ಮೇಳನದ ಲಾಂಛನ ಅನಾವರಣ
©Copyright 2025 The Bengaluru Live All rights reserved. | MoreNews by AF themes.