Home ಆರೋಗ್ಯ ಕರ್ನಾಟಕದಲ್ಲಿಂದು 14,859 ಹೊಸ ಪ್ರಕರಣ, 78 ಸಾವು

ಕರ್ನಾಟಕದಲ್ಲಿಂದು 14,859 ಹೊಸ ಪ್ರಕರಣ, 78 ಸಾವು

33
0

ಬೆಂಗಳೂರು:

ಕಳೆದ 24 ಗಂಟೆಗಳಲ್ಲಿ ಕರ್ನಾಟಕದಲ್ಲಿ 14,859 ಹೊಸ ಪ್ರಕರಣಗಳು, 78 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದು ಮೃತರ ಸಂಖ್ಯೆ 13,190ಕ್ಕೆ ಏರಿದೆ.

ಎಂದಿನಂತೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 9,917 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 79,616ಕ್ಕೆ ಜಿಗಿದಿದೆ. ಉಳಿದಂತೆ ಕಲಬುರಗಿ 488, ತುಮಕೂರು 432, ಮೈಸೂರು 415, ಬೆಂಗಳೂರು ಗ್ರಾಮಾಂತರದಲ್ಲಿ 358 ಪ್ರಕರಣಗಳು ದಾಖಲಾಗುವುದರೊಂದಿಗೆ ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ಕಳೆದ 24 ಗಂಟೆಯಲ್ಲಿ 4,031 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 577 ಮಂದಿ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here