Home ಆರೋಗ್ಯ ಸಿಎಂ ಯಡಿಯೂರಪ್ಪಗೆ ಎರಡನೇ ಬಾರಿ ಕೊರೋನಾ ಪಾಸಿಟಿವ್

ಸಿಎಂ ಯಡಿಯೂರಪ್ಪಗೆ ಎರಡನೇ ಬಾರಿ ಕೊರೋನಾ ಪಾಸಿಟಿವ್

37
0

ವೈದ್ಯರ ಸಲಹೆಯ ಮೇರೆಗೆ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್

ಬೆಂಗಳೂರು:

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಎರಡನೇ ಬಾರಿ ಕೊರೋನಾ ಪಾಸಿಟಿವ್ ಬಂದಿದೆ. ಇದೀಗ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

ಸಿಎಂ ಯಡಿಯೂರಪ್ಪ ಅವರಿಗೆ ಕೊರೋನಾ ಬರುತ್ತಿರುವುದು ಇದು ಎರಡನೇ ಸಲ. ಕಳೆದ ವರ್ಷ ಆಗಸ್ಟ್ 2, 2020 ರಂದು ಕೂಡ ಕೊರೋನಾ ಬಂದು ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.

ಕಳೆದೆರಡು ದಿನಗಳಿಂದ ಜ್ವರ, ಸುಸ್ತಿನಿಂದ ಬಳಲುತ್ತಿದ್ದ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಿ ಕೊರೋನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ.

ಸಿಎಂ ಟ್ವೀಟ್ ಮಾಡಿದ್ದಾರೆ: “ಜ್ವರದ ಹಿನ್ನಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಕೋರುತ್ತೇನೆ.”

78 ವರ್ಷದ ಮುಖ್ಯಮಂತ್ರಿ ಇಂದು ತಮ್ಮ ನಿವಾಸದಲ್ಲಿ COVID ಕುರಿತು ತುರ್ತು ಸಭೆ ನಡೆಸಿದ್ದರು. ನಂತರ ಅವರು ಮಾಧ್ಯಮವನ್ನು ವಿವರಿಸಿದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಪಿ.ರವಿ ಕುಮಾರ್, ಐಎಎಸ್ ಅಧಿಕಾರಿಯ ರಮಣ ರೆಡ್ಡಿ, ಗೌರವ್ ಗುಪ್ತಾ, ತುಷಾರ್ ಗಿರಿ ನಾಥ್, ಜಾವೈದ್ ಅಖ್ತರ್, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮತ್ತು ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here