ಬೆಂಗಳೂರು:
ವಿದೇಶದಿಂದ ಕಳ್ಳ ಹಾದಿಯಲ್ಲಿ ರಾಜಧಾನಿಗೆ ಬರುವ ಡ್ರಗ್ಸ್ ಸಾಗಾಣಿಕೆ ವಿರುದ್ಧ ಕಸ್ಟಮ್ಸ್ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ನಗರದಲ್ಲಿ ಮೂವರರನ್ನು ಬಂಧಿಸಿ 10 ಕೋಟಿ ಮೌಲ್ಯದ ಡ್ರಗ್ಸನ್ನು ಜಪ್ತಿ ಮಾಡಿದ್ದಾರೆ.
ಬೆಲ್ಜಿಯಂ ಹಾಗೂ ಜಾಂಬೀಯಾ ದೇಶಗಳಿಂದ ದುಬೈ ಮೂಲಕ ಕೊರಿಯರ್‌ನಲ್ಲಿ ನಗರಕ್ಕೆ ಬಂದಿದ್ದ 7 ಕೋಟಿ ಮೌಲ್ಯದ ಹೆರಾಯಿನ್ ಹಾಗೂ 2.82 ಕೋಟಿ ಬೆಲೆ ಬಾಳುವ 2 ಕೆ.ಜಿ ಎಂಡಿಎಂಎ ಡ್ರಗ್ಸ್ ಜಪ್ತಿಯಾಗಿದೆ. ವಿದೇಶದಿಂದ ಡ್ರಗ್ಸ್ ಸಾಗಾಣಿಕೆ ಬಗ್ಗೆ ಮಾಹಿತಿ ಮೇರೆಗೆ ಎಚ್ಚೆತ್ತಿರುವ ಕಸ್ಟಮ್ಸ್ ಅಧಿಕಾರಿಗಳು, ನಗರಕ್ಕೆ ವಿದೇಶದಿಂದ ಬರುವ ಪಾರ್ಸಲ್ ಹಾಗೂ ಕೊರಿಯರ್ ಮೇಲೆ ನಿಗಾವಹಿಸಿದ್ದಾರೆ.
ಬೆಲ್ಜಿಯಂ ಮತ್ತು ಜಾಂಬಿಯಾದಿಂದ ದುಬೈ ಮೂಲಕ ಬಂದ ಎರಡು ಕೊರಿಯರ್ ಪಾರ್ಸೆಲ್ಗಳಲ್ಲಿದ್ದ 1.002 ಕೆಜಿ (ರೂ. 7 ಕೋಟಿ) ಹೆರೋಯಿನ್ ಮತ್ತು 4.58 ಕೆಜಿ (ರೂ. 2.82 ಕೋಟಿ) ಎಂಡಿಎಂಎ/ ಎಕ್ಸ್ಟಸಿ ಮಾತ್ರೆಗಳನ್ನು ಬೆಂಗಳೂರು ಕಸ್ಟಮ್ಸ್ನ ಕೇಂದ್ರ ಗುಪ್ತಚರ ಘಟಕವು ಪತ್ತೆ ಮಾಡಿದೆ. ಇಬ್ಬರನ್ನು ಬಂಧಿಸಲಾಗಿದೆ.ತನಿಖೆ ಪ್ರಗತಿಯಲ್ಲಿದೆ. @cbic_india https://t.co/rzCC1kseFG
— Bengaluru Customs (@blrcustoms) February 20, 2022
ಈ ಡ್ರಗ್ಸ್ ಸಾಗಾಣಿಕೆ ಹಿಂದೆ ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾದ ಪಾತ್ರವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Also Read: Heroin, Ecstasy worth @ Rs 10 crore seized at Bengaluru Airport