Davangere-based techie couple, 6-year-old child died mysteriously in America
ದಾವಣಗೆರೆ:
ದಾವಣಗೆರೆ ಮೂಲದ ಟೆಕ್ಕಿ ದಂಪತಿ ಹಾಗೂ ಅವರ ಪುತ್ರ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಅಮೆರಿಕಾದ ಮೆರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ನಲ್ಲಿ ನಡೆದಿದೆ.
ಯೋಗೇಶ್ ಹೊನ್ನಾಳ(37), ಪ್ರತಿಭಾ(35), ಯಶ್(6) ಮೃತರು. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ನಿವಾಸಿಗಳಾಗಿದ್ದಾರೆ.
ಕಳೆದ 9 ವರ್ಷಗಳಿಂದ ಅಮೆರಿಕದಲ್ಲಿ ವಾಸವಾಗಿದ್ದರು. ಯೋಗೇಶ್, ಪ್ರತಿಭಾ ಇಬ್ಬರೂ ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಸಾವಿಗೆ ನಿಖರ ಕಾರಣ ತಿಳಿಸಿ ಮೃತದೇಹ ತರಿಸಿಕೊಡುವಂತೆ ಮೃತ ಯೋಗೇಶ್ ತಾಯಿ ಶೋಭಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಒಂದೇ ಕುಟುಂಬದ ಮೂವರ ಸಾವು ಹಲವು ಅನುಮಾನಗಳನ್ನು ಹುಟ್ಟು ಹಾಕಿದ್ದು, ಸಾವಿಗೆ ನಿಖರ ಕಾರಣ ತಿಳಿಸುವಂತೆ ಮತ್ತು ಮೃತದೇಹ ತರಿಸಿಕೊಡುವಂತೆ ಮೃತ ಯೋಗೇಶ್ ಕುಟುಂಬ ಸರ್ಕಾರಕ್ಕೆ ಮನವಿ ಮಾಡಿದೆ.
