ದಾವಣಗೆರೆ:
ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನು ಆಗುತ್ತೋ ಗೊತ್ತಾಗುವುದಿಲ್ಲ ಎಂದು ಮಹಾರಾಷ್ಟ್ರದ ಅಜಿತ್ ಪವ್ವಾರ್ ಪ್ರಕರಣ ಉಲ್ಲೇಖಿಸಿದ ಮಾಜಿ ಮುಖ್ಯಮಂತ್ರಿ ಬೊಮ್ಮಯಿ.
ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಹೇಳಿದ್ದು ಒಂದು ಮಾಡಿದ್ದು ಮಾಡಿದ್ದು ಒಂದು. ಗ್ಯಾರೆಂಟಿ 5 ದೋಖಾಗಳನ್ಮು ನೀಡಿ ಜನರಿಗೆ ಮೋಸ ಮಾಡಿದ್ದಾರೆ. ಆದ್ದರಿಂದ ಸದನದ ಒಳಗೆ ಹೊರಗೆ ಹೋರಾಟ ಎಂದು ಹೇಳಿದರು.
ಕೆಲವೇ ದಿನಗಳಲ್ಲಿ ವಿಪಕ್ಷ ನಾಯಕನ ಆಯ್ಕೆ ಯಾಗುತ್ತದೆ. ಕೇಂದ್ರ ನಾಯಕರು ಬೇರೆ ಬೇರೆ ರಾಜ್ಯಗಳ ನಿರ್ಣಯ ತೆಗೆದುಕೊಳ್ಳಬೇಕಿತ್ತು. ಈಗ ನಮ್ಮ ರಾಜ್ಯದ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದರು.
ಬಿಟ್ ಕಾಯನ್ ಹಗರಣ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 40% ಈ ಕೇಸ್ ಬಗ್ಗೆಃ ತನಿಖೆ ನಡೆಸಿಲಿ ಅದರ ಜೊತೆ ಈಗಾಗಲೇ ಲೋಕಾಯುಕ್ತದಲ್ಲಿ ಕೆಲವು ಪ್ರಕರಣಗಳ ತನಿಖೆ ನಡೆಯುತ್ತಿದೆ. 2013 ರಿಂದ ಇಲ್ಲಿವೆರೆಗೂ ಎಲ್ಲಾ ಪ್ರಕರಣಗಳ ತನಿಖೆ ಕಮಿಷನ್ ಮುಂದೆ ಒಪ್ಪಿಸಲಿ ಯಾವುದೋ ಒಂದು ಕೇಸ್ ಹಿಡಿದು ತನಿಖೆ ನಡೆಸಬಾರದು ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.