Home ಕರ್ನಾಟಕ ಮೇ 23 ರಂದು ರಾಜ್ಯವ್ಯಾಪಿ ‘ಲಾಕ್‌ಡೌನ್’ ವಿಸ್ತರಿಸುವ ಬಗ್ಗೆ ನಿರ್ಧಾರ: ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ

ಮೇ 23 ರಂದು ರಾಜ್ಯವ್ಯಾಪಿ ‘ಲಾಕ್‌ಡೌನ್’ ವಿಸ್ತರಿಸುವ ಬಗ್ಗೆ ನಿರ್ಧಾರ: ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪ

79
0

ಬೆಂಗಳೂರು:

ರಾಜ್ಯದಲ್ಲಿ ‘ಲಾಕ್‌ಡೌನ್’ ರೀತಿಯ ಪರಿಸ್ಥಿತಿಯನ್ನು ವಿಸ್ತರಿಸುವ ಬಗ್ಗೆ ಮೇ 23ಕ್ಕೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ ಸುದ್ದಿಗಾರರಿಗೆ ಈ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಹೇರಿರುವ ಲಾಕ್ ಡೌನ್ ನಿಂದ ಯಾವ ಮಟ್ಟಿಗೆ ಬೆಂಗಳೂರು ನಗರ ಸೇರಿದಂತೆ ಜಿಲ್ಲೆಗಳಲ್ಲಿ ಪರಿಣಾಮ ಬೀರಿದೆ, ಮುಂದೆ ಏನು ಅಗತ್ಯ ಕ್ರಮಗಳನ್ನು ತೆಗೆದುಕೊಂಡರೆ ಉತ್ತಮ ಎಂದು ಸಚಿವರು, ಅಧಿಕಾರಿಗಳೊಂದಿಗೆ 23ರಂದು ಸಭೆ ನಡೆಸಿ ತೀರ್ಮಾನಕ್ಕೆ ಬರುತ್ತೇನೆ ಎಂದು ಹೇಳಿದರು.

ಪ್ರಸ್ತುತ ಪರಿಸ್ಥಿತಿಯಲ್ಲಿ, ಮೇ 24 ರಂದು ಬೆಳಿಗ್ಗೆ 6 ಗಂಟೆಯವರೆಗೆ ‘ಕರೋನಾ ಕರ್ಫ್ಯೂ’ ಮುಂದುವರಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಯಡಿಯುರಪ್ಪ, ಕರ್ಫ್ಯೂ ವಿಸ್ತರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮೇ 23 ರಂದು ಸರ್ಕಾರ ಕರೆ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.

ಕಳೆದ ಎರಡು ದಿನಗಳಲ್ಲಿ ಕರ್ನಾಟಕ ಭೀಕರ ವೈರಸ್‌ನಿಂದ ಅತಿ ಹೆಚ್ಚು ಚೇತರಿಕೆ ಕಂಡಿದೆ, ಆದರೆ ಅದರ ಹೊರತಾಗಿಯೂ ರಾಜ್ಯವು ಪ್ರತಿದಿನವೂ ಸುಮಾರು 30,000 ಕೋವಿಡ್-ಪಾಸಿಟಿವ್ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ.

LEAVE A REPLY

Please enter your comment!
Please enter your name here