ಬೆಂಗಳೂರು: ದೀಪಾವಳಿ ಹಬ್ಬದ ಹೆಚ್ಚುವರಿ ಪ್ರಯಾಣಿಕರ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಬೆಂಗಳೂರು ಕಂಟೋನ್ಮೆಂಟ್ ಹಾಗೂ ತಿರುವನಂತಪುರಂ ನಾರ್ತ್ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಬಾರಿ ವಿಶೇಷ ರೈಲು ಓಡಿಸಲಿದೆ.
ರೈಲು ಸಂಖ್ಯೆ 06575 ನವೆಂಬರ್ 6ರ ಶುಕ್ರವಾರ ಸಂಜೆ 4.40ಕ್ಕೆ ಬೆಂಗಳೂರು ಕಂಟೋನ್ಮೆಂಟ್ನಿಂದ ಹೊರಟು ನವೆಂಬರ್ 7ರ ಶನಿವಾರ ಬೆಳಿಗ್ಗೆ 10.30ಕ್ಕೆ ತಿರುವನಂತಪುರಂ ನಾರ್ತ್ ತಲುಪಲಿದೆ.
ರೈಲು ಸಂಖ್ಯೆ 06576 ನವೆಂಬರ್ 7ರ ಶನಿವಾರ ಮಧ್ಯಾಹ್ನ 12.40ಕ್ಕೆ ತಿರುವನಂತಪುರಂ ನಾರ್ತ್ನಿಂದ ಹೊರಟು ನವೆಂಬರ್ 8ರ ಭಾನುವಾರ ಬೆಳಿಗ್ಗೆ 6ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ.
ನಿಲ್ದಾಣಗಳು
ಎರಡೂ ದಿಕ್ಕಿನಲ್ಲಿ ವೈಟ್ಫೀಲ್ಡ್, ಬಂಗಾರಪೇಟೆ, ಕುಪ್ಪಂ, ಸೇಲಂ, ಈರೋಡ್, ತಿರುಪ್ಪೂರು, ಪೋದನೂರು, ಪಾಲಕ್ಕಾಡ್, ತ್ರಿಶೂರ್, ಆಲುವಾ, ಎರ್ಣಾಕುಲಂ ಟೌನ್, ಕೋಟ್ಟಯಂ, ಚಂಗನಾಶಸ್ಸೇರಿ, ತಿರುವಲ್ಲಾ, ಚೆಂಗನ್ನೂರು, ಮವೇಲಿಕರ, ಕಾಯಂಕುಳಂ, ಕರುನಾಗಪ್ಪಳ್ಳಿ, ಶಾಸ್ತಾಂಕೋಟ್ಟಾ, ಕೊಲ್ಲಂ ಹಾಗೂ ವರ್ಕಲ ಶಿವಗಿರಿ ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ.
ಬೋಗಿಗಳು
ರೈಲು 21 ಬೋಗಿಗಳನ್ನು ಹೊಂದಿರಲಿದ್ದು, 1 ಎಸಿ 2-ಟಿಯರ್, 5 ಎಸಿ 3-ಟಿಯರ್, 8 ಸ್ಲೀಪರ್, 5 ಸಾಮಾನ್ಯ ಬೋಗಿಗಳು ಹಾಗೂ ದಿವ್ಯಾಂಗಸ್ನೇಹಿ ಬೋಗಿ ಹೊಂದಿರುವ 2 ಸೆಕೆಂಡ್ ಕ್ಲಾಸ್ ಲಗೇಜ್ ಕಮ್ ಬ್ರೇಕ್ ವ್ಯಾನ್ಗಳು ಇರಲಿವೆ ಎಂದು ರೈಲ್ವೆ ತಿಳಿಸಿದೆ.
