ಬೆಂಗಳೂರು: ಬೆಂಗಳೂರು ಉತ್ತರ ನಗರ ಪಾಲಿಕೆಯು ‘ವಾರ್ಡ್ ಒನ್’ ಅಭಿಯಾನದಡಿ ಸೋಮವಾರ ಮೂರು ವಿಭಾಗಗಳಲ್ಲಿ 34 ರಸ್ತೆ ಗುಂಡಿಗಳನ್ನು ಮುಚ್ಚಿ, 85 ಟನ್ ನಿರ್ಮಾಣ ತ್ಯಾಜ್ಯ ತೆರವುಗೊಳಿಸಿ, ₹65,700 ದಂಡ ವಿಧಿಸಿದೆ.
ವಿದ್ಯಾರಣ್ಯಪುರ ವಿಭಾಗದ ವಾರ್ಡ್ 14 ರಾಜೀವ್ ಗಾಂಧಿ ನಗರ, ಬ್ಯಾಟರಾಯನಪುರ ವಿಭಾಗದ ವಾರ್ಡ್ 17 ಜಕ್ಕೂರು ಹಾಗೂ ಸರ್ವಜ್ಞನಗರ ವಿಭಾಗದ ವಾರ್ಡ್ 22 ಹೆಣ್ಣೂರಿನಲ್ಲಿ ಕಾರ್ಯಾಚರಣೆ ನಡೆದಿದೆ ಎಂದು ಪಾಲಿಕೆ ತಿಳಿಸಿದೆ.
ಸೋಮವಾರದ ಕಾರ್ಯ
- 6 ಕಿ.ಮೀ. ಉದ್ದದ ರಸ್ತೆಗಳಲ್ಲಿ ಕಾರ್ಯಾಚರಣೆ
- 22 ಕಸದ ಕಪ್ಪು ಚುಕ್ಕೆಗಳ ತೆರವು, 27 ಟನ್ ಕಸ ವಿಲೇವಾರಿ
- 130 ನಿರ್ಮಾಣ ತ್ಯಾಜ್ಯ ಸಂಗ್ರಹಣಾ ಸ್ಥಳಗಳ ತೆರವು
- 1.5 ಕಿ.ಮೀ. ಪಾದಚಾರಿ ಮಾರ್ಗ ದುರಸ್ತಿ, 16 ಅಡೆತಡೆ ತೆರವು
- 3 ಜಂಕ್ಷನ್ಗಳ ಸುಧಾರಣೆ, 1.55 ಕಿ.ಮೀ. ರಸ್ತೆಬದಿ ಚರಂಡಿ ಹೂಳೆತ್ತುವಿಕೆ
- 5 ಬೀದಿ ದೀಪ ದುರಸ್ತಿ, 33 ಉದ್ಯಾನವನಗಳ ಸ್ವಚ್ಛತೆ
- 7 ಸ್ಥಳಗಳಲ್ಲಿ ಸಸಿ ನೆಡುವ ಚಟುವಟಿಕೆ
- 85 ಅನಧಿಕೃತ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ಗಳು ಹಾಗೂ 28 ವಾಹನಗಳ ತೆರವು
ತಪಾಸಣೆ ಹಾಗೂ ದಂಡ
128 ವಾಣಿಜ್ಯ ಸಂಸ್ಥೆಗಳನ್ನು ಪರಿಶೀಲಿಸಿದ್ದು, 56 ಸಂಸ್ಥೆಗಳು ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಘನತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್, ಸ್ವಚ್ಛತೆ ಹಾಗೂ ವ್ಯಾಪಾರ ಪರವಾನಗಿ ನಿಯಮಗಳ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಸೂಚನೆ ಹಾಗೂ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಮಾರ್ಗದರ್ಶನದಲ್ಲಿ ಅಭಿಯಾನ ನಡೆಯುತ್ತಿದೆ. ವಿವಿಧ ವಾರ್ಡ್ಗಳಲ್ಲಿ ಸ್ಥಳೀಯ ಸಮಸ್ಯೆಗಳನ್ನು ಗುರುತಿಸುವ ಕಾರ್ಯ ಮುಂದುವರಿಯಲಿದೆ ಎಂದು ಪಾಲಿಕೆ ತಿಳಿಸಿದೆ.
