ಬೆಂಗಳೂರು: ಬೆಂಗಳೂರಿನ ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಭಾನುವಾರ ಚೀನಾದ ಸಿಚುವಾನ್ ಯುಯಾಂದ ಮೀಲೆ ವಿರುದ್ಧ ನಡೆದ ಫೈನಲ್ ಬಳಿಕ ಜಪಾನ್ನ ಡೆನ್ಸೊ ಐರಿಸ್ ಮಹಿಳಾ ಬಾಸ್ಕೆಟ್ಬಾಲ್ ಲೀಗ್ ಏಷ್ಯಾ ಚಾಂಪಿಯನ್ ಆಗಿ ಹೊರಹೊಮ್ಮಿತು.
ಸಿಚುವಾನ್ ಯುಯಾಂದ ಮೀಲೆ ತಂಡ ರನ್ನರ್ ಅಪ್ ಆಯಿತು. ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ ಅವರು ಫೈನಲ್ ಪಂದ್ಯ ವೀಕ್ಷಿಸಿ ಎರಡೂ ತಂಡಗಳಿಗೆ ಟ್ರೋಫಿ ವಿತರಿಸಿದರು.
ಫಿಬಾ ಏಷ್ಯಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಕೆ. ಗೋವಿಂದರಾಜ್, ವಿಧಾನ ಪರಿಷತ್ ಸಭಾಪತಿ ಸಲೀಂ ಅಹಮದ್, ತಮಿಳುನಾಡಿನ ಕ್ರೀಡಾ ಸಚಿವ ಹಾಗೂ ಭಾರತೀಯ ಬಾಸ್ಕೆಟ್ಬಾಲ್ ಸಂಸ್ಥೆಯ ಅಧ್ಯಕ್ಷ ಆಧವ್ ಅರ್ಜುನ್, ಕರ್ನಾಟಕ ಬಾಸ್ಕೆಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ದಯಾನಂದ ಮತ್ತು ನಟಿ ರಮ್ಯಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
