ಐದೇ ದಿನದಲ್ಲಿ ಕಾನ್ಸ್ಟೇಬಲ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟಿಸಿದ ಕೆಇಎ; ಸೆ.27ರವರೆಗೆ ಆಕ್ಷೇಪಣೆಗೆ ಅವಕಾಶ
ಬೆಂಗಳೂರು: ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನ ಬಳಿಕ ಉಳಿದಿರುವ 273 ವೈದ್ಯಕೀಯ ಮತ್ತು ಎರಡು ದಂತ ವೈದ್ಯಕೀಯ ಸೀಟುಗಳಿಗೆ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 26ರ ಬೆಳಗ್ಗೆ 10.30ರವರೆಗೆ ಆಯ್ಕೆಗಳನ್ನು ದಾಖಲಿಸಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಸೀಟು ಹಂಚಿಕೆಯಾಗದ ಹಾಗೂ ಕಾಷನ್ ಠೇವಣಿ ಪಾವತಿಸಿರುವ ಅಭ್ಯರ್ಥಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಅದೇ ದಿನ ಸೀಟು ಹಂಚಿಕೆ ಮತ್ತು ಕಾಲೇಜು ಪ್ರವೇಶ
ಆಯ್ಕೆ ದಾಖಲಿಸುವ ಅವಧಿ ಮುಗಿದ ಅರ್ಧ ಗಂಟೆಯ ಬಳಿಕ ಫಲಿತಾಂಶ ಪ್ರಕಟಿಸಲಾಗುವುದು. ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಅಕ್ಟೋಬರ್ 26ರ ಸಂಜೆ 6 ಗಂಟೆಯೊಳಗೆ ಸಂಬಂಧಿತ ಕಾಲೇಜುಗಳಿಗೆ ಸೇರಬೇಕು ಎಂದು ಪ್ರಾಧಿಕಾರ ತಿಳಿಸಿದೆ.
ವೈದ್ಯಕೀಯ ಸಮಾಲೋಚನಾ ಸಮಿತಿಯ ನಿರ್ದೇಶನದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ಅಕ್ಟೋಬರ್ 26 ಅಂತಿಮ ದಿನವಾಗಿರುವುದರಿಂದ ಈ ಗಡುವು ನಿಗದಿಪಡಿಸಲಾಗಿದೆ ಎಂದು ಪ್ರಸನ್ನ ಹೇಳಿದ್ದಾರೆ. ನಿಗದಿತ ಅವಧಿಯೊಳಗೆ ಕಾಲೇಜಿಗೆ ವರದಿ ಮಾಡದಿದ್ದರೆ ಹಂಚಿಕೆಯಾದ ಸೀಟನ್ನು ರದ್ದುಪಡಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಎರಡನೇ ಸ್ಟ್ರೇ ವೇಕೆನ್ಸಿ ಸುತ್ತಿನ ಫಲಿತಾಂಶವನ್ನೂ ಕೆಇಎ ಭಾನುವಾರ ಪ್ರಕಟಿಸಿದೆ. ಆ ಸುತ್ತಿನಲ್ಲಿ 13 ವೈದ್ಯಕೀಯ ಮತ್ತು 12 ದಂತ ವೈದ್ಯಕೀಯ ಸೀಟುಗಳನ್ನು ಹಂಚಿಕೆ ಮಾಡಲಾಗಿದೆ. ಆಯಾ ಕಾಲೇಜುಗಳಿಗೆ ಸೇರಲು ಅಕ್ಟೋಬರ್ 26 ಕೊನೆಯ ದಿನವಾಗಿದೆ.
