Home ಕರ್ನಾಟಕ ಈ ಬಾರಿ ಶಬರಿಮಲೆಯಲ್ಲಿ ಭಕ್ತರಿಗೆ ಪಂಬಾ ನದಿ ಸ್ನಾನ, ತುಪ್ಪದ ಅಭಿಷೇಕ ನಿಷೇಧ….!

ಈ ಬಾರಿ ಶಬರಿಮಲೆಯಲ್ಲಿ ಭಕ್ತರಿಗೆ ಪಂಬಾ ನದಿ ಸ್ನಾನ, ತುಪ್ಪದ ಅಭಿಷೇಕ ನಿಷೇಧ….!

137
0

ಶಬರಿಮಲೆ:

ಸುಮಾರು ಒಂದು ತಿಂಗಳ ವಿರಾಮ ನಂತರ ಶಬರಿಮಲೆಯಲ್ಲಿ ಮತ್ತೆ ಅಯ್ಯಪ್ಪ ನಾಮಸ್ಮರಣೆ ಮೊಳಗುತ್ತಿದೆ. ಶಬರಿಮಲೆಯ ಬೆಟ್ಟಗಳಲ್ಲಿ ಹರಿ ಹರಸುತನಿಗೆ ವೈಭವದ ಪೂಜಾ ಕೈಂಕರ್ಯಗಳು ನೆರವೇರಲಿವೆ. ಭಾನುವಾರ ದೇವಾಲಯದ ದ್ವಾರಗಳು ತೆರೆದಿದ್ದು, 62 ದಿನಗಳ ಕಾಲ ನಡೆಯುವ ಮಂಡಲ ಪೂಜೆ ಮಕರ ವಿಳಕ್ಕು (ಮಕರಜ್ಯೋತಿ) ಗಾಗಿ ದೇವಾಲಯ ತೆರೆಯಲಾಗಿದೆ.

ಆದರೆ, ಭಾನುವಾರ ದೇವಾಲಯದ ಬಾಗಿಲು ತೆರೆದಿದ್ದರೂ ಸೋಮವಾರದಿಂದ ಭಕ್ತರಿಗೆ ಅಯ್ಯಪ್ಪ ದರ್ಶನ ಕಲ್ಪಿಸಲಿದ್ದಾರೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಅಧಿಕಾರಿಗಳು ಅನೇಕ ನಿಬಂಧನೆಗಳನ್ನು ವಿಧಿಸಿದ್ದು, ಅವುಗಳನ್ನು ಕಡ್ಡಾಯವಾಗಿ ಅನುಸರಿಸಬೇಕಿದೆ. ಇಲ್ಲದಿದ್ದರೆ ಭಕ್ತರ ಶಬರಿಮಲೆ ಪ್ರವೇಶಕ್ಕೆ ಅವಕಾಶ ಕಲ್ಪಿಸುವುದಿಲ್ಲ ಎಂದು ದೇಗಲ ಅಧಿಕಾರಿಗಳು ಹೇಳಿದ್ದಾರೆ.

ಭಾನುವಾರ ಸಂಜೆ 5 ಗಂಟೆಗೆ ಅಯ್ಯಪ್ಪ ಸನ್ನಿದಾನಂ ಬಾಗಿಲು ತೆರೆದಿದ್ದು, ಈ ಕಾರ್ಯಕ್ರಮದಲ್ಲಿ ದೇವಾಲಯ ತಂತ್ರಿ ಕಂದಾರು ರಾಜಿವರು ನೇತೃತ್ವದ ತಾಂತ್ರಿಕ ಎ.ಕೆ. ನಂಬೂದರಿ .. ಹೊಸದಾಗಿ ಆಯ್ಕೆಯಾಗಿರುವ ಅಯ್ಯಪ್ಪ ದೇವಾಲಯದ ಪ್ರಧಾನ ತಂತ್ರಿ ವಿ.ಕೆ.ಜಯರಾಜ್ ಪೊಟ್ಟಿ .. ಮಾಲಿಕಾಪುರತ್ತಮ ದೇವಾಲಯದ ಮುಖ್ಯ ತಂತ್ರಿ ಎಂ.ಎನ್.ರಾಜಕುಮಾರ್ ವಿಶೇಷ ಪೂಜೆಗಳನ್ನು ನಡೆಸಿದರು. ಆದರೆ, ಕೋವಿಡ್ ಕಾರಣದಿಂದ ದೇವಾಲಯದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

62 ದಿನಗಳವರೆಗೆ ದೇಗುಲ ತೆರೆದಿರಲಿದ್ದು, ಈ ಬಾರಿ ಕೇವಲ 85,000 ಭಕ್ತರಿಗೆ ಮಾತ್ರ ದರ್ಶನ ಅವಕಾಶ ಕಲ್ಪಿಸಲಾಗುತ್ತದೆ. ರೈಲ್ವೆ ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಭಕ್ತರು 48 ಗಂಟೆಗಳ ಮುನ್ನ ಅಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಲಾಗಿದೆ. ಪರೀಕ್ಷಾ ವರದಿಗಳನ್ನು ಬೆಟ್ಟದ ಮೇಲೆ ತೆರಳಿದ ನಂತರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರಿಗೆ ಮಾತ್ರ ದರ್ಶನಕ್ಕೆ ಅನುಮತಿ ನೀಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿತ್ಯ ಕೇವಲ ಒಂದು ಸಾವಿರ ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಶನಿವಾರ ಹಾಗೂ ಭಾನುವಾರಗಳಂದು ಮಾತ್ರ 2 ಸಾವಿರ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರಿಸಿದ್ದಾರೆ.

ಆನ್ಲೈನ್ನಲ್ಲಿ ಸ್ಲಾಟ್ ಕಾಯ್ದಿರಿಸಲು ಸೂಚಿಸಲಾಗಿದೆ. ಈ ನಿಯಮಗಳನ್ನು ಪಾಲಿಸಿದರೆ ಮಾತ್ರ ಶಬರಿಮಲೆಗೆ ಅವಕಾಶ ನೀಡಲಾಗುವುದು. ಪಂಬಾ ನದಿಯಲ್ಲಿ ಸ್ನಾನ ಮಾಡದಂತೆ… ತುಪ್ಪದ ಅಭಿಷೇಕ ನಡೆಸಲು ಸಹ ಅನುಮತಿಸುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗಾಗಿ ಭಕ್ತರು ಕೋವಿಡ್ ನಿಯಮಗಳನ್ನು ಪಾಲಿಸಿ.. ಎಚ್ಚರಿಕೆಯಿಂದ ಅಯ್ಯಪ್ಪ ದರ್ಶನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here