ಆದಿಜಾಂಬವ ನಿಗಮದಿಂದ 16 ಮಹಿಳೆಯರಿಗೆ ಕಿರುಸಾಲ ಪತ್ರ ವಿತರಣೆ
ಬೆಂಗಳೂರು:
ಕರ್ನಾಟಕ ಆದಿಜಾಂಬವ ನಿಗಮದ ವತಿಯಿಂದ ಮಲ್ಲೇಶ್ವರಂ ಕ್ಷೇತ್ರ ವ್ಯಾಪ್ತಿಯ 16 ಮಹಿಳೆಯರಿಗೆ ತಲಾ 50 ಸಾವಿರ ರೂ.ಗಳ ಕಿರುಸಾಲ ಪತ್ರಗಳನ್ನು ಕ್ಷೇತ್ರದ ಶಾಸಕರೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಶನಿವಾರ ವಿತರಿಸಿದರು.
ತಮ್ಮ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಇದನ್ನು ನೆರವೇರಿಸಿದ ಅವರು, ಈ ಸಾಲವು ಶೇಕಡ 50ರಷ್ಟು ಸಬ್ಸಿಡಿಯನ್ನು ಒಳಗೊಂಡಿರುತ್ತದೆ. ಆದಿಜಾಂಬವ ಸಮುದಾಯದ ಸದಸ್ಯರು ಇದನ್ನು ತಮ್ಮ ಚಿಕ್ಕಪುಟ್ಟ ವ್ಯಾಪಾರ ವಹಿವಾಟಿಗೆ ಬಳಸಿಕೊಂಡು, ಸ್ವಾವಲಂಬಿಗಳಾಗಬೇಕು ಎಂದರು.
ನಮ್ಮ ಮಲ್ಲೇಶ್ವರ ಕ್ಷೇತ್ರದ 16 ಮಹಿಳೆಯರಿಗೆ ಕರ್ನಾಟಕ ಆದಿಜಾಂಬವ ನಿಗಮದ ವತಿಯಿಂದ ತಲಾ 50 ಸಾವಿರ ರೂ.ಗಳ ಕಿರುಸಾಲ ಪತ್ರಗಳನ್ನು ವಿತರಿಸಲಾಯಿತು.
— Dr. Ashwathnarayan C. N. (@drashwathcn) January 22, 2022
ಈ ಸಾಲವು ಶೇಕಡ 50ರಷ್ಟು ಸಬ್ಸಿಡಿಯನ್ನು ಒಳಗೊಂಡಿದ್ದು ಆದಿಜಾಂಬವ ಸಮುದಾಯದ ಸದಸ್ಯರು ತಮ್ಮ ಚಿಕ್ಕಪುಟ್ಟ ವ್ಯಾಪಾರ ವಹಿವಾಟಿಗೆ ಬಳಸಿಕೊಂಡು, ಸ್ವಾವಲಂಬಿ ಜೀವನ ನಡೆಸಲು ನೆರವಾಗಲಿದೆ. pic.twitter.com/XQsJ420B98
ಜೊತೆಗೆ ಇದೇ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮತ್ತೀಕೆರೆ ವಾರ್ಡಿನ ಗೋಕುಲ ಬಡಾವಣೆಯಲ್ಲಿರುವ ಶ್ರೀ ನಂಜುಂಡೇಶ್ವರ ಮಹಿಳಾ ಸ್ವಸಹಾಯ ಸಂಘಕ್ಕೆ ಇದೇ ನಿಗಮದಿಂದ ಒಟ್ಟು 2.50 ಲಕ್ಷ ರೂ.ಗಳ ಸಾಲ ನೀಡಲಾಯಿತು. ಇದರಲ್ಲಿ ಒಂದು ಲಕ್ಷ ರೂಪಾಯಿ ಸಬ್ಸಿಡಿ ಸೇರಿದೆ.
