Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಗರ
  • ಬೆಂಗಳೂರು ನಗರ
  • ಹೈದರಾಬಾದ್‌ನಲ್ಲಿ ಪೆಟ್ರೋಲ್ ₹110, ಕೊಲ್ಕತ್ತಾದಲ್ಲಿ ₹108, ಬೆಂಗಳೂರಿನಲ್ಲಿ ₹106; ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ ಭಾರೀ ಏರಿಕೆ
  • ಬೆಂಗಳೂರು ನಗರ
  • ನವ ದೆಹಲಿ

ಹೈದರಾಬಾದ್‌ನಲ್ಲಿ ಪೆಟ್ರೋಲ್ ₹110, ಕೊಲ್ಕತ್ತಾದಲ್ಲಿ ₹108, ಬೆಂಗಳೂರಿನಲ್ಲಿ ₹106; ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ ಭಾರೀ ಏರಿಕೆ

The Bengaluru Live May 16, 2026 8:31 AM 1 minute read
📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು/ನವದೆಹಲಿ: ಅಮೆರಿಕಾ-ಇರಾನ್ ಸಂಘರ್ಷದ ಪರಿಣಾಮ ಜಾಗತಿಕ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆಯ ನಡುವೆಯೇ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಭಾರೀ ಏರಿಕೆಯಾಗಿದೆ. ಇಂಧನ ದರ ಏರಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ದುಬಾರಿ ತರಬಹುದೆಂಬ ಆತಂಕ ಜನರಲ್ಲಿ ಹೆಚ್ಚಾಗಿದೆ.

ಪ್ರಧಾನಿ ನರೇಂದ್ರ ಮೋದಿ ಇಂಧನದ ಮಿತಬಳಕೆ ಬಗ್ಗೆ ಕರೆ ನೀಡಿದ ಕೆಲವೇ ದಿನಗಳಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.

ಆರ್ಥಿಕ ತಜ್ಞರ ಪ್ರಕಾರ ಮುಂದಿನ ಕೆಲವು ದಿನಗಳಲ್ಲಿ ಇಂಧನ ದರ ಪ್ರತಿ ಲೀಟರ್‌ಗೆ ಇನ್ನೂ ₹10ರಿಂದ ₹15ರವರೆಗೆ ಹೆಚ್ಚಾಗುವ ಸಾಧ್ಯತೆ ಇದೆ.

ದೇಶದ ಪ್ರಮುಖ ನಗರಗಳಲ್ಲಿ ಇಂಧನ ದರ

ಇತ್ತೀಚಿನ ದರ ಪರಿಷ್ಕರಣೆ ಬಳಿಕ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ₹100 ಗಡಿ ದಾಟಿದೆ.

ಪ್ರಮುಖ ನಗರಗಳ ಇಂಧನ ದರ

ನಗರಪೆಟ್ರೋಲ್ ದರಡೀಸೆಲ್ ದರ
ಬೆಂಗಳೂರು₹106.07₹94.10
ದೆಹಲಿ₹97.77₹90.67
ಕೊಲ್ಕತ್ತಾ₹108.00₹95.00
ಮುಂಬೈ₹106.00₹93.00
ಚೆನ್ನೈ₹103.00₹95.00
ಹೈದರಾಬಾದ್₹110.00₹98.00

ಇದರ ಜೊತೆಗೆ ಹಲವು ಭಾಗಗಳಲ್ಲಿ ಸಿಎನ್ಜಿ ದರವೂ ಪ್ರತಿ ಲೀಟರ್‌ಗೆ ಸುಮಾರು ₹2 ಹೆಚ್ಚಳವಾಗಿದೆ.

ಜಾಗತಿಕ ಸಂಘರ್ಷದ ಪರಿಣಾಮ

ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಜಾಗತಿಕ ತೈಲ ಸರಬರಾಜು ಮತ್ತು ಆಮದು ವೆಚ್ಚದ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ವರದಿಗಳು ತಿಳಿಸಿವೆ.

ಈ ಸಂಕಷ್ಟದ ಆರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತ ಸೇರಿದಂತೆ ಕೆಲವು ಕ್ರಮಗಳ ಮೂಲಕ ಬೆಲೆ ನಿಯಂತ್ರಿಸಲು ಪ್ರಯತ್ನಿಸಿತ್ತು ಎನ್ನಲಾಗುತ್ತಿದೆ.

ಆದರೆ ಹೆಚ್ಚುತ್ತಿರುವ ಆಮದು ವೆಚ್ಚ ಹಾಗೂ ಚಾಲ್ತಿ ಖಾತೆ ಕೊರತೆಯಿಂದ ಇದೀಗ ತೈಲ ಕಂಪನಿಗಳು ದರ ಏರಿಕೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

“ಇದು ಜಸ್ಟ್ ಟ್ರೈಲರ್ ಮಾತ್ರ”

ಆರ್ಥಿಕ ತಜ್ಞರ ಪ್ರಕಾರ ಈಗಿನ ದರ ಏರಿಕೆ ಕೇವಲ ಆರಂಭ ಮಾತ್ರವಾಗಿರಬಹುದು.

ಜಾಗತಿಕ ಕಚ್ಚಾ ತೈಲ ದರ ಇದೇ ರೀತಿಯಲ್ಲಿ ಏರಿಕೆಯಾಗುತ್ತಿದ್ದರೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಇನ್ನೂ ₹10ರಿಂದ ₹15ವರೆಗೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

ಕೆಲವು ತಜ್ಞರ ಪ್ರಕಾರ ತೈಲ ಕಂಪನಿಗಳು ಒಂದೇ ಬಾರಿ ದೊಡ್ಡ ಏರಿಕೆ ಮಾಡದೇ ಹಂತ ಹಂತವಾಗಿ ದರ ಹೆಚ್ಚಿಸಬಹುದು.

ಜನರಲ್ಲಿ ಆಕ್ರೋಶ

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಧ್ಯಮ ವರ್ಗ, ದಿನಗೂಲಿ ಕಾರ್ಮಿಕರು, ಉದ್ಯೋಗಿಗಳು ಹಾಗೂ ವಾಹನ ಸವಾರರಲ್ಲಿ ಆಕ್ರೋಶ ಮೂಡಿಸಿದೆ.

“ಪ್ರತಿದಿನ ಕೆಲಸಕ್ಕೆ 30-40 ಕಿಲೋಮೀಟರ್ ಓಡಾಡಬೇಕು. ಈಗ ಬದುಕೋದೇ ಕಷ್ಟವಾಗುತ್ತಿದೆ,” ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆಹಾರ ಮತ್ತು ಸಾರಿಗೆ ವೆಚ್ಚ ಏರಿಕೆ ಸಾಧ್ಯತೆ

ಭಾರತದಲ್ಲಿ ಸುಮಾರು 65 ಶೇಕಡಾ ಸರಕು ಸಾಗಣೆ ರಸ್ತೆ ಮಾರ್ಗದ ಮೇಲೆಯೇ ಅವಲಂಬಿತವಾಗಿದೆ, ಅದರಲ್ಲಿ ಬಹುತೇಕ ಡೀಸೆಲ್ ವಾಹನಗಳೇ ಬಳಸಲಾಗುತ್ತವೆ.

ಹೀಗಾಗಿ ಡೀಸೆಲ್ ದರ ಏರಿಕೆಯಿಂದ ಕೆಳಗಿನ ವಸ್ತುಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ:

  • ತರಕಾರಿ ಮತ್ತು ಹಣ್ಣುಗಳು
  • ಹಾಲು ಮತ್ತು ಹಾಲು ಉತ್ಪನ್ನಗಳು
  • ಅಕ್ಕಿ, ಬೇಳೆ, ಎಣ್ಣೆ
  • ಸಿಮೆಂಟ್ ಮತ್ತು ಕಟ್ಟಡ ಸಾಮಗ್ರಿಗಳು
  • ಆಟೋ, ಕ್ಯಾಬ್ ದರ
  • ಶಾಲಾ ವ್ಯಾನ್ ಶುಲ್ಕ
  • ಆನ್‌ಲೈನ್ ಡೆಲಿವರಿ ಸೇವೆಗಳು
  • ಸರ್ಕಾರಿ ಮತ್ತು ಖಾಸಗಿ ಬಸ್ ಪ್ರಯಾಣ ದರ

ಖಾಸಗಿ ಬಸ್ ದರ 20-30% ಏರಿಕೆ

ಕರ್ನಾಟಕದಲ್ಲಿ ಖಾಸಗಿ ಬಸ್ ಮಾಲೀಕರು ಈಗಾಗಲೇ 20ರಿಂದ 30 ಶೇಕಡಾ ಪ್ರಯಾಣ ದರ ಏರಿಕೆ ಘೋಷಿಸಿದ್ದಾರೆ.

ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮಾ, ಹೆಚ್ಚುತ್ತಿರುವ ಕಾರ್ಯಾಚರಣಾ ವೆಚ್ಚದ ಕಾರಣ ದರ ಹೆಚ್ಚಳ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಆದರೆ ಸಾರಿಗೆ ಸಚಿವ ಆರ್. ರಾಮಲಿಂಗಾ ರೆಡ್ಡಿ, ಸಾಮಾನ್ಯ ಪರವಾನಗಿ ಹೊಂದಿರುವ ಖಾಸಗಿ ಬಸ್‌ಗಳು ತಮ್ಮ ಇಷ್ಟಕ್ಕೆ ದರ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿ ಭೀತಿ

ಜಾಗತಿಕ ತೈಲ ಮಾರುಕಟ್ಟೆಯ ಅಸ್ಥಿರತೆ ಮುಂದುವರಿದಿರುವ ಕಾರಣ ಮುಂದಿನ ದಿನಗಳಲ್ಲಿ ಆಹಾರ, ಸಾರಿಗೆ ಹಾಗೂ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಇನ್ನಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.

About the Author

The Bengaluru Live

Administrator

Visit Website View All Posts

Post navigation

Previous: ಪೆಟ್ರೋಲ್-ಡೀಸೆಲ್ ದರ ಏರಿಕೆ ವಿಚಾರದಲ್ಲಿ ಕರ್ನಾಟಕದಲ್ಲಿ ರಾಜಕೀಯ ಸಮರ; ಮೋದಿ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ
Next: ಪ್ರಧಾನಿ ಮೋದಿ ಮಿತವ್ಯಯ ಕರೆಗೆ ಸ್ಪಂದನೆ; ಬೆಂಗಳೂರಿನಲ್ಲಿ ಮೆಟ್ರೋದಲ್ಲಿ ಪ್ರಯಾಣಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

Related Stories

ವೇದಿಕೆಯ ಮೇಲೆ ಹೂಮಾಲೆ ಹಾಕಿದ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಬಿಳಿ ಉಡುಪಿನ ವ್ಯಕ್ತಿ ಪುಷ್ಪ ನಮನ ಸಲ್ಲಿಸುತ್ತಿರುವುದು
  • ಬೆಂಗಳೂರು ನಗರ
  • ರಾಜಕೀಯ

ಆಹಾರ ಭದ್ರತೆ, ನೀರಾವರಿ, ಕೈಗಾರಿಕೆಗೆ ನೆಹರು ದೂರದೃಷ್ಟಿಯೇ ಅಡಿಪಾಯ: ಕೆಪಿಸಿಸಿ ಮಕ್ಕಳ ದಿನಾಚರಣೆಯಲ್ಲಿ ಸಿದ್ದರಾಮಯ್ಯ

The Bengaluru Live November 15, 2026 1:37 AM
ಮೆಟ್ರೋ ನಿಲ್ದಾಣದಲ್ಲಿ ಗುಲಾಬಿ ಹೂಗಳನ್ನು ಹಿಡಿದ ಪ್ರಯಾಣಿಕರು ಮತ್ತು ಅಧಿಕಾರಿಗಳ ಗುಂಪು
  • ಕರ್ನಾಟಕ
  • ಬೆಂಗಳೂರು ನಗರ

ಪಿಂಕ್ ಲೈನ್ ಸಾರ್ವಜನಿಕ ಸೇವೆಗೆ ಮುಕ್ತ: ಮೊದಲ ಪ್ರಯಾಣಿಕರಿಗೆ ಗುಲಾಬಿ ನೀಡಿ ಸ್ವಾಗತಿಸಿದ ಕೃಷ್ಣ ಬೈರೇಗೌಡ

The Bengaluru Live November 15, 2026 1:30 AM
ವಿಧಾನಸೌಧ ಆವರಣದಲ್ಲಿ ಹೂಮಾಲೆ ಹಾಕಿದ ಜವಾಹರಲಾಲ್ ನೆಹರು ಪ್ರತಿಮೆ ಮತ್ತು ಕೆಳಗೆ ಅವರ ಭಾವಚಿತ್ರ
  • ಬೆಂಗಳೂರು ನಗರ
  • ರಾಜಕೀಯ

ನೆಹರು ಪ್ರತಿಮೆಗೆ ಪುಷ್ಪನಮನ; ನಿಗಮ ಮಂಡಳಿ ನೇಮಕದ ಎರಡನೇ ಪಟ್ಟಿ ಒಂದೆರಡು ದಿನಗಳಲ್ಲಿ: ಸಿಎಂ ಶಿವಕುಮಾರ್

The Bengaluru Live November 14, 2026 10:28 PM

Latest Post

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ ವೇದಿಕೆಯ ಎದುರು ಚಪ್ಪರದ ಕೆಳಗೆ ಕುಳಿತಿರುವ ಜನಸ್ತೋಮ
  • ಕರ್ನಾಟಕ

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ

November 15, 2026 1:54 AM
ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ ಅಲಂಕೃತ ಚಪ್ಪರದ ಕೆಳಗೆ ಹೂಮಾಲೆ ಹಾಕಿದ ಎರಡು ಪುತ್ಥಳಿಗಳು
  • ಕರ್ನಾಟಕ
  • ರಾಜಕೀಯ

ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ

November 15, 2026 1:52 AM
ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

November 15, 2026 1:47 AM
ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ ಮಕ್ಕಳ ವಿಜ್ಞಾನ ಜಾತ್ರೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಕೇಸರಿ ವಸ್ತ್ರದ ಸ್ವಾಮೀಜಿ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಶಿಕ್ಷಣ

ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ

November 15, 2026 1:47 AM
ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ: ಶ್ರಮಿಕ್ ನಿವಾಸ್ ನೀತಿ, ಕಂಪನಿಗೆ ₹25 ಕೋಟಿವರೆಗೆ ಸಬ್ಸಿಡಿ ನೀಲಿ ಕರ್ನಾಟಕ ಹಿನ್ನೆಲೆಯ ಮುಂದೆ ಕಟ್ಟಡದ ಚಿತ್ರವಿರುವ ಕೈಪಿಡಿಗಳನ್ನು ಹಿಡಿದ ಮೂವರು
  • ಕರ್ನಾಟಕ

ಕೈಗಾರಿಕೆಗಳ ಬಳಿಯೇ ಕಾರ್ಮಿಕರಿಗೆ ವಸತಿ: ಶ್ರಮಿಕ್ ನಿವಾಸ್ ನೀತಿ, ಕಂಪನಿಗೆ ₹25 ಕೋಟಿವರೆಗೆ ಸಬ್ಸಿಡಿ

November 15, 2026 1:42 AM
ಆಹಾರ ಭದ್ರತೆ, ನೀರಾವರಿ, ಕೈಗಾರಿಕೆಗೆ ನೆಹರು ದೂರದೃಷ್ಟಿಯೇ ಅಡಿಪಾಯ: ಕೆಪಿಸಿಸಿ ಮಕ್ಕಳ ದಿನಾಚರಣೆಯಲ್ಲಿ ಸಿದ್ದರಾಮಯ್ಯ ವೇದಿಕೆಯ ಮೇಲೆ ಹೂಮಾಲೆ ಹಾಕಿದ ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಬಿಳಿ ಉಡುಪಿನ ವ್ಯಕ್ತಿ ಪುಷ್ಪ ನಮನ ಸಲ್ಲಿಸುತ್ತಿರುವುದು
  • ಬೆಂಗಳೂರು ನಗರ
  • ರಾಜಕೀಯ

ಆಹಾರ ಭದ್ರತೆ, ನೀರಾವರಿ, ಕೈಗಾರಿಕೆಗೆ ನೆಹರು ದೂರದೃಷ್ಟಿಯೇ ಅಡಿಪಾಯ: ಕೆಪಿಸಿಸಿ ಮಕ್ಕಳ ದಿನಾಚರಣೆಯಲ್ಲಿ ಸಿದ್ದರಾಮಯ್ಯ

November 15, 2026 1:37 AM

ನೀವು ತಪ್ಪಿಸಿಕೊಂಡಿರಬಹುದು

ವೇದಿಕೆಯ ಎದುರು ಚಪ್ಪರದ ಕೆಳಗೆ ಕುಳಿತಿರುವ ಜನಸ್ತೋಮ
  • ಕರ್ನಾಟಕ

ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ

The Bengaluru Live November 15, 2026 1:54 AM
ಅಲಂಕೃತ ಚಪ್ಪರದ ಕೆಳಗೆ ಹೂಮಾಲೆ ಹಾಕಿದ ಎರಡು ಪುತ್ಥಳಿಗಳು
  • ಕರ್ನಾಟಕ
  • ರಾಜಕೀಯ

ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ

The Bengaluru Live November 15, 2026 1:52 AM
ಶಾಲಾ ಕಾರ್ಯಕ್ರಮದಲ್ಲಿ ಬಣ್ಣದ ಕೈಪಿಡಿಗಳನ್ನು ಹಿಡಿದ ಸಮವಸ್ತ್ರದ ಇಬ್ಬರು ವಿದ್ಯಾರ್ಥಿನಿಯರು ಮತ್ತು ಕೆಲವು ಪುರುಷರು
  • ಕರ್ನಾಟಕ
  • ಶಿಕ್ಷಣ

ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ

The Bengaluru Live November 15, 2026 1:47 AM
ಮಕ್ಕಳ ವಿಜ್ಞಾನ ಜಾತ್ರೆಯ ವೇದಿಕೆಯಲ್ಲಿ ಅಧಿಕಾರಿಗಳು ಮತ್ತು ಕೇಸರಿ ವಸ್ತ್ರದ ಸ್ವಾಮೀಜಿ ದೀಪ ಬೆಳಗುತ್ತಿರುವುದು
  • ಕರ್ನಾಟಕ
  • ಶಿಕ್ಷಣ

ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ

The Bengaluru Live November 15, 2026 1:47 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಜನರ ಮನೆ ಬಾಗಿಲಿಗೆ ಸರ್ಕಾರದ ಸೇವೆ: ಹೊಸಕೋಟೆ ಪ್ರಜಾ ಸೇವಾ ಕಾರ್ಯಕ್ರಮದಲ್ಲಿ 499 ಅರ್ಜಿ ಸ್ವೀಕಾರ, ಸಚಿವ ಮುನಿಯಪ್ಪ
  • ಜಾಲಿಗೆಯಲ್ಲಿ ಅಂಬೇಡ್ಕರ್, ಜಗಜೀವನ್ ರಾಂ ಪುತ್ಥಳಿ ಅನಾವರಣ: 40 ವರ್ಷಗಳ ಒಳಮೀಸಲಾತಿ ಹೋರಾಟ ಅಂತ್ಯ ಎಂದ ಮುನಿಯಪ್ಪ
  • ಮುಂದಿನ ವರ್ಷದಿಂದ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಒಂದೇ ಸೂರು; ಪೋಷಕರ ಸಭೆಗಳಿಂದ ಗುಣಮಟ್ಟ ಸುಧಾರಣೆ: ಮಧು ಬಂಗಾರಪ್ಪ
  • ಸರ್ಕಾರಿ ಶಾಲೆಗಳಿಗೆ ಸುಮಾರು ₹4,500 ಕೋಟಿ, ಉಚಿತ ಬಸ್, ಎಲ್‌ಕೆಜಿಯಿಂದ ಪಿಯುಸಿವರೆಗೆ ಒಂದೇ ಸೂರು: ತಿಕೋಟಾದಲ್ಲಿ ಮಧು ಬಂಗಾರಪ್ಪ
©Copyright 2025 The Bengaluru Live All rights reserved. | MoreNews by AF themes.