ಬೆಂಗಳೂರು:
ಗಂಡ ವರದಕ್ಷಿಣೆ ನೀಡಬೇಕೆಂದು ಕಿರುಕುಳ ನೀಡುತ್ತಿರುವುದಾಗಿ ಐಪಿಎಸ್ ಮಹಿಳಾ ಅಧಿಕಾರಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ನೀಡಿದ ದೂರು ಅಧರಿಸಿ ಅವರ ಪತಿ ನಿತಿನ್ ಸುಭಾಶ್ ಯಿಯೋಲಾ ಹಾಗೂ ಕುಟುಂಬಸ್ಥರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
2010ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಅಗಿರುವ ವರ್ತಿಕಾ 2011ರಲ್ಲಿ ಭಾರತೀಯ ವಿದೇಶಾಂಗ ಇಲಾಖೆಯ (ಐಎಫ್ ಎಸ್) ಅಧಿಕಾರಿ ನಿತಿನ್ ಯಿಯೋಲಾ ಅವರನ್ನು ವಿವಾಹವಾಗಿದ್ದರು. ನಿತಿನ್ ದಿಲ್ಲಿಯಲ್ಲಿ ರಾಯಭಾರಿ ಕಚೇರಿಯ ಕಾರ್ಯನಿರ್ವಹಿಸುತ್ತಿದ್ದರು.
ಮದುವೆಯ ಸಂದರ್ಭದಲ್ಲಿ ಚಿನ್ನಾಭರಣ ಪಡೆದುಕೊಂಡಿದ್ದಾರೆ. ಹಣಕ್ಕಾಗಿ ಪದೇ ಪದೆ ಪೀಡಿಸುತ್ತಾರೆ. ಅಜ್ಜಿಯ ಬಳಿ ಪತಿ ಐದು ಲಕ್ಷದ ಚೆಕ್ ಪಡೆದಿದ್ದರು. ಅಲ್ಲದೆ ಮನೆ ಮಾಡುವಾಗ 35 ಲಕ್ಷ ರೂ. ಪಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ಸಂಬಂಧ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ವರದಕ್ಷಿಣೆ, ಹಲ್ಲೆ, ಜೀವ ಬೆದರಿಕೆ ಆರೋಪದಡಿ ಕಬ್ಬನ್ ಪಾರ್ಕ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
Lady IPS officer complains of dowry harassment
— Thebengalurulive/ಬೆಂಗಳೂರು ಲೈವ್ (@bengalurulive_) February 6, 2021
Cubbon Park police register FIR on Vartika Katiyar’s complaint against husband, an IFS officer, and his family membershttps://t.co/5J53AYUGJA#Bengaluru #Bangalore #Karnataka #IPS #VartikaKatiyar #dowryharassment #complaint