Skip to content
ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ದಿ ಬೆಂಗಳೂರು ಲೈವ್ | ಕನ್ನಡ ಸುದ್ದಿ, ಬ್ರೇಕಿಂಗ್ ಅಪ್ಡೇಟ್ಸ್

ಇದು ನಿಮ್ಮ ಧ್ವನಿ

Primary Menu
  • ಮುಖಪುಟ
  • ಪ್ರಾಯೋಜಿತ
  • ಬೆಂಗಳೂರು ನಗರ
  • ಅಪರಾಧ
  • ರಾಜಕೀಯ
  • English News
  • Delhi News
  • ಕರ್ನಾಟಕ
  • ಶಿಕ್ಷಣ
  • ಕ್ರೀಡೆ
  • Home
  • ಕರ್ನಾಟಕ
  • ನಮ್ಮ ನಾಡು ಕಂಡ ಶ್ರೇಷ್ಠ ಕವಿ ಡಾ: ಸಿದ್ಧಲಿಂಗಯ್ಯ: ಬಿ.ಎಸ್.ಯಡಿಯೂರಪ್ಪ
  • ಕರ್ನಾಟಕ
  • ಬೆಂಗಳೂರು ನಗರ

ನಮ್ಮ ನಾಡು ಕಂಡ ಶ್ರೇಷ್ಠ ಕವಿ ಡಾ: ಸಿದ್ಧಲಿಂಗಯ್ಯ: ಬಿ.ಎಸ್.ಯಡಿಯೂರಪ್ಪ

The Bengaluru Live June 21, 2021 5:00 PM 1 minute read
ನಮ್ಮ ನಾಡು ಕಂಡ ಶ್ರೇಷ್ಠ ಕವಿ ಡಾ: ಸಿದ್ಧಲಿಂಗಯ್ಯ: ಬಿ.ಎಸ್.ಯಡಿಯೂರಪ್ಪ

ನಮ್ಮ ನಾಡು ಕಂಡ ಶ್ರೇಷ್ಠ ಕವಿ ಡಾ: ಸಿದ್ಧಲಿಂಗಯ್ಯ: ಬಿ.ಎಸ್.ಯಡಿಯೂರಪ್ಪ

📗 ಈ ಸುದ್ದಿಯನ್ನು ಇಂಗ್ಲಿಷ್‌ನಲ್ಲಿ ಓದಿ

ಬೆಂಗಳೂರು:

ಡಾ: ಸಿದ್ಧಲಿಂಗಯ್ಯ ಅವರು ನಮ್ಮ ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ದಲಿತರ ನೋವನ್ನು ಸಮರ್ಥಕವಾಗಿ ಅಕ್ಷರ ರೂಪಕ್ಕೆ ಇಳಿಸಿ, ಅವರನ್ನು ಜಾಗೃತಿಗೊಳಿಸಿದವರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.

ಇಂದು ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವಂಗತ ಕವಿ ಚಿಂತಕ ಮತ್ತು ಮಾಜಿ ವಿಧಾನಪರಿಷತ್ ಸದಸ್ಯ ಡಾ. ಸಿದ್ಧಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಮ್ಮ ಡಾ: ಸಿದ್ಧಲಿಂಗಯ್ಯನವರು, ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು,ಅಣ್ಣ ಬಸವಣ್ಣವರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋದ ಎಲ್ಲಾ ಕಡೆ ಸಿದ್ಧಲಿಂಗಯ್ಯನವರು ಮಾತನಾಡುತ್ತಾರೆ ಅಂದರೆ ಎಲ್ಲರೂ ಕಿವಿಕೊಟ್ಟು ಕೇಳುವ ರೀತಯಲ್ಲಿ ಅವರ ವಿಚಾರಧಾರೆಗಳನ್ನ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದಂತೆ ಧೀಮಂತ ವ್ಯಕ್ತಿ ಡಾ:ಸಿದ್ಧಲಿಂಗಯ್ಯನವರು ಎಂದರು.

Dr. Siddhalingaiah is greatest poet of our country Karnataka Chief Minister BS Yediyurappa1

ಅವರ ನನ್ನ ಸಂಬಂಧ ಬಹಳ ನಿಕಟವಾಗಿದ್ದು, ಬಹಳ ಸಂದರ್ಭಗಳಲ್ಲಿ ಅನೇಕ ರೀತಗಳಲ್ಲಿ ಚರ್ಚೆ ಮಾಡಿ ಮಾರ್ಗದರ್ಶನ ಮಾಡುತ್ತಿದ್ದರು. ಅಂತಹ ವ್ಯಕ್ತಿಯನ್ನು ಕಳೆದುಕೊಂಡು ನಮ್ಮ ಕುಟುಂಬದ ಒಬ್ಬ ಸದಸ್ಯರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ಭಾವನೆ ನನಗೆ ಮಾತ್ರವಲ್ಲ, ಇಲ್ಲಿ ಕುಳಿತಂತ ಎಲ್ಲರಿಗೂ ಇದೆ ಎಂದು ಭಾವಿಸುತ್ತೇನೆ.. ಡಾ: ಸಿದ್ದಲಿಂಗಯ್ಯನವರು ಮಾಡಿದಂತಹ ಕೆಲಸ ಅವರು ಕವನ ರೂಪದಲ್ಲಿ ನಾಡಿಗೆ ಕೊಟ್ಟಂತ ಕೊಡುಗೆ ಭವಿಷ್ಯ: ಜೀವನದುದ್ದಕ್ಕೂ ನಾವು ನೆನಪಿನಲ್ಲಿಡುವಂತ ಕೆಲಸವನ್ನು ಅವರು ಮಾಡಿ ಹೋಗಿದ್ದಾ.

ಸಾವಿರಾರು ನದಿಗಳು, ಕಪ್ಪುಗಾಡಿನ ಹಾಡು ಮೊದಲಾದ ಕಾವ್ಯ ಸಂಕಲನಗಳ ಮೂಲಕ ದಲಿತ ಚಳುವಳಿಗೆ ಹೊಸ ವೇಗ ಮತ್ತು ಹೊಸ ಸ್ಪರ್ಷ ನೀಡಿದವರು . ಮೂರು ವರ್ಷಗಳ ಕಾಲ ಬೆಂಗಳೂರು ವಿಶ್ವವಿದ್ಯಾನಿಲಯದ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ತಮ್ಮ ಶಿಷ್ಯ ವರ್ಗವನ್ನು ಬೆಳೆಸಿದ ಗುರುಗಳು ಅವರು. ಕಾವ್ಯ ,ಪ್ರಬಂಧ,ವಿಮರ್ಶೆ, ಸಂಶೋಧನೆ, ಆತ್ಮ ಚರಿತ್ರೆ ಮೊದಲಾದ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮದೆ ಆದಂತಹ ಚಾಪುಮೂಡಿಸಿದ ಪ್ರತಿಭಾಶಾಲಿ ವ್ಯಕ್ತಿ ನಮ್ಮ ಸಿದ್ಧಲಿಂಗಯ್ಯನವರು.

Dr. Siddhalingaiah is greatest poet of our country Karnataka Chief Minister BS Yediyurappa2

ಸಾಹಿತ್ಯ ಕ್ಷೇತ್ರದ ಸಾಧನೆಗೆ ಹಲವಾರು ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಸರ್ಕಾರ ಇವರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಇನ್ನು ಇವರ ಸೇವೆ ಗಣನೀಯವಾಗಿತ್ತು ಎಂದು ಈಗ ತಾನೆ ಗೋವಿಂದಕಾರಜೋಳ ಅವರು ಸ್ಮರಣೆ ಮಾಡಿದ್ದಾರೆ. ಎರಡು ಬಾರಿ ವಿಧಾನಪರಿಷತ್ತಿನ ಸದಸ್ಯರಾಗಿ, ವಿಧಾನಪರಿಷತ್ತಿನಲ್ಲಿ ಅವರು ಮಾತನಾಡುತ್ತಿದ್ದ ಮಾತುಗಳು ಈ ನಾಡಿನ ಸರ್ವಜನಾಂಗದ ಅಭಿವೃದ್ಧಿಗಾಗಿ ನಾಡಿನಲ್ಲಿ ಧರ್ಮ ಪ್ರಜ್ಞೆ, ರಾಷ್ಟ್ರ ಪ್ರಜ್ಚೆ, ಸಮಾಜ ಪ್ರಜ್ಞೆ ಮೂಡಿಸುವಂತ ಅವರಹೇಳಿಕೆಗಳು, ಲೇಖನಗಳು ಯಾರೂ ಮರೆಯಲು ಸಾಧ್ಯವಿಲ್ಲ.

ಇಂತಹ ಮೇರುನುಡಿ ಸರಳ ಸಜ್ಜನಿಕೆಯ ಡಾ: ಸಿದ್ಧಲಿಂಗಯ್ಯನವರ ಹಾಸಸ್ಯ ಪ್ರಜ್ಞೆ ಉಲ್ಲೇಖನಾರ್ಹ ಇಂತಹ ಶ್ರೇಷ್ಠ ಸಾಧಕನ ಮರಣ ನಮ್ಮ ನಾಡಿಗೆ ತುಂಬಲಾರದ ನಷ್ಟವಾಗಿದೆ . ಅವರ ಜೀವಿತಾವಧಿಯ ಕೊನೆಯಲ್ಲಿ ರಚಿಸಿದ ಬೋಧಿವೃಕ್ಷದ ಕೆಳಗೆ ಕವನ ಸಂಕಲನ ಬಿಡುಗಡೆ ಮಾಡುವ ಅವಕಾಶ ದೊರೆತಿದೆ . ಈ ಕೃತಿಯನ್ನು ನನಗೆ ರಚಿಸಿದ್ದಾರೆ ಎಂದು ತಿಳಿದು ಮನ ತುಂಬಿ ಬಂದಿದೆ.

ಕವಿ, ಚಿಂತಕ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಡಾ: ಸಿದ್ದಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಇಂದು ಮುಖ್ಯಮಂತ್ರಿ @BSYBJP ರವರು ಪಾಲ್ಗೊಂಡರು.

ಉಪಮುಖ್ಯಮಂತ್ರಿ @GovindKarjol, ವಸತಿ ಸಚಿವ @VSOMANNA_BJP, ಸಮಾಜ ಕಲ್ಯಾಣ ಸಚಿವ @sriramulubjp, ಶಾಸಕ ಮುನಿರತ್ನ, ಮಾನಸ ಸಿದ್ದಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು. pic.twitter.com/jB0TtO0i7k

— CM of Karnataka (@CMofKarnataka) June 21, 2021

ಅವರು ಬದುಕಿದ್ದಾಗ ಈ ಕವನ ಸಂಕಲನ ಬಿಡುಗೆಯಾಗಿದ್ದರೆ ನಾವೆಲ್ಲರೂ ಎಷ್ಟು ಸಂತೋಪಡುತ್ತಿದ್ದೆವು ಭಗವಂತನ ಇಚ್ಚೆ ಬೇರೆ ಇತ್ತು . ಇವತ್ತು ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಅವರ ಕುಟುಂಬ ದವರಿಗೆ, ಶಿಷ್ಯವರ್ಗಕ್ಕೆ ಅಭಿಮಾನಿಗಳಿಗೆ ಅವರ ಅಗಳಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿಎಂದು ದೇವರಲ್ಲಿ ಪ್ರಾರ್ಥಣೆ ಮಾಡಿ, ಅವರ ಸ್ಮರಣೆ ನಿರಂತರವಾಗಿ ಜನರಲ್ಲಿರುವಂತೆ ಏನು ಕಾರ್ಯ ಮಾಡಬೇಕು ಎನ್ನುವ ಬಗ್ಗೆ ಹಿರಿಯರಲ್ಲಿ ಚರ್ಚೆ ಮಾಡಿ, ಒಂದು ತೀಮಾನಕ್ಕೆ ಬಂದು ಅವರ ಒಂದು ನೆನಪನ್ನು ಚಿರಸಂರಣಿಯವಾಗಿಸಲು ಶ್ರಮಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಸತಿ ಸಚಿವ ವಿ.ಸೋಮಣ್ಣ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಶಾಸಕ ಮುನಿರತ್ನ, ಅವರ ಮಗಳು ಮಾನಸ ಸಿದ್ಧಲಿಂಗಯ್ಯ ಅವರು ಉಪಸ್ಥಿತರಿದ್ದರು.

About the Author

The Bengaluru Live

Administrator

Visit Website View All Posts

Post navigation

Previous: ಛೇತ್ರಿ ಬೆಂಗಳೂರು ಎಫ್‌ಸಿಯೊಂದಿಗೆ ಹೊಸ ಒಪ್ಪಂದಕ್ಕೆ ಸಹಿ
Next: ಬೆಂಗಳೂರಲ್ಲಿ ಪ್ರತ್ಯೇಕ ಮಕ್ಕಳ ಕೋವಿಡ್ ಆಸ್ಪತ್ರೆಗೆ ಚಿಂತನೆ: ಶಶಿಕಲಾ ಜೊಲ್ಲೆ

Related Stories

ಆಕಾಶದ ಹಿನ್ನೆಲೆಯಲ್ಲಿ ಬಿಳಿ ವೈಮಾನಿಕ ಕೆಲಸದ ವೇದಿಕೆಯ ಅಂಚಿನಲ್ಲಿರುವ ಕಪ್ಪು ಪಕ್ಷಿ
  • ಬೆಂಗಳೂರು ನಗರ

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ

The Bengaluru Live November 29, 2026 1:27 AM
ಕಚೇರಿಯಲ್ಲಿ ಕುಳಿತು ಮಾತನಾಡುತ್ತಿರುವ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ
  • ಬೆಂಗಳೂರು ನಗರ

ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ

The Bengaluru Live November 29, 2026 1:26 AM
ಮೇಜಿನ ಮೇಲಿನ ಹಲವು ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ

The Bengaluru Live November 29, 2026 12:25 AM

Latest Post

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ ಆಕಾಶದ ಹಿನ್ನೆಲೆಯಲ್ಲಿ ಬಿಳಿ ವೈಮಾನಿಕ ಕೆಲಸದ ವೇದಿಕೆಯ ಅಂಚಿನಲ್ಲಿರುವ ಕಪ್ಪು ಪಕ್ಷಿ
  • ಬೆಂಗಳೂರು ನಗರ

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ

November 29, 2026 1:27 AM
ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ ಕಚೇರಿಯಲ್ಲಿ ಕುಳಿತು ಮಾತನಾಡುತ್ತಿರುವ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ
  • ಬೆಂಗಳೂರು ನಗರ

ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ

November 29, 2026 1:26 AM
ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ ಮೇಜಿನ ಮೇಲಿನ ಹಲವು ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ

November 29, 2026 12:25 AM
ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಗಳಿರುವ ದೊಡ್ಡ ಪರದೆಗಳ ಮುಂದೆ ಸಿಬ್ಬಂದಿ
  • ಕರ್ನಾಟಕ

ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ

November 29, 2026 12:08 AM
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಫಡ್ನವೀಸ್ ಭೇಟಿಯಾದ MES ಮುಖಂಡರು: ಗಡಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಮನವಿ ವಿಮಾನ ನಿಲ್ದಾಣದಲ್ಲಿ ಬ್ಯಾರಿಕೇಡ್ ಆಚೆಯಿಂದ ಮರೂನ್ ಜಾಕೆಟ್ ಧರಿಸಿದ ವ್ಯಕ್ತಿಯೊಂದಿಗೆ ಮಾತನಾಡುತ್ತಿರುವ ಫಲಕ ಹಿಡಿದ ಜನರು
  • ಕರ್ನಾಟಕ

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಫಡ್ನವೀಸ್ ಭೇಟಿಯಾದ MES ಮುಖಂಡರು: ಗಡಿ ವಿವಾದದಲ್ಲಿ ಮಧ್ಯಪ್ರವೇಶಕ್ಕೆ ಮನವಿ

November 28, 2026 9:20 PM
₹2,000 ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು: ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ ಗುಲಾಬಿ ಸೀರೆಯಲ್ಲಿ ಧರಣಿ ಕುಳಿತು ಮುಷ್ಟಿ ಎತ್ತಿ ಘೋಷಣೆ ಕೂಗುತ್ತಿರುವ ಅಪಾರ ಸಂಖ್ಯೆಯ ಆಶಾ ಕಾರ್ಯಕರ್ತೆಯರು
  • ಕರ್ನಾಟಕ

₹2,000 ಹೆಚ್ಚಳಕ್ಕೆ ಒಪ್ಪದ ಆಶಾ ಕಾರ್ಯಕರ್ತೆಯರು: ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಲು ನಿರ್ಧಾರ

November 28, 2026 9:20 PM

ನೀವು ತಪ್ಪಿಸಿಕೊಂಡಿರಬಹುದು

ಆಕಾಶದ ಹಿನ್ನೆಲೆಯಲ್ಲಿ ಬಿಳಿ ವೈಮಾನಿಕ ಕೆಲಸದ ವೇದಿಕೆಯ ಅಂಚಿನಲ್ಲಿರುವ ಕಪ್ಪು ಪಕ್ಷಿ
  • ಬೆಂಗಳೂರು ನಗರ

ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ

The Bengaluru Live November 29, 2026 1:27 AM
ಕಚೇರಿಯಲ್ಲಿ ಕುಳಿತು ಮಾತನಾಡುತ್ತಿರುವ ಸಮವಸ್ತ್ರದಲ್ಲಿರುವ ಪೊಲೀಸ್ ಅಧಿಕಾರಿ
  • ಬೆಂಗಳೂರು ನಗರ

ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ

The Bengaluru Live November 29, 2026 1:26 AM
ಮೇಜಿನ ಮೇಲಿನ ಹಲವು ಮೈಕ್‌ಗಳ ಮುಂದೆ ಮಾತನಾಡುತ್ತಿರುವ ಎಚ್.ಡಿ. ಕುಮಾರಸ್ವಾಮಿ
  • ಕರ್ನಾಟಕ

ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ

The Bengaluru Live November 29, 2026 12:25 AM
ಪರೀಕ್ಷಾ ಕೇಂದ್ರದ ಸಿಸಿಟಿವಿ ದೃಶ್ಯಗಳಿರುವ ದೊಡ್ಡ ಪರದೆಗಳ ಮುಂದೆ ಸಿಬ್ಬಂದಿ
  • ಕರ್ನಾಟಕ

ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ

The Bengaluru Live November 29, 2026 12:08 AM

ನಮ್ಮ ಕುರಿತು

ಬೆಂಗಳೂರು ಲೈವ್ ಬೆಂಗಳೂರು ಮತ್ತು ಕರ್ನಾಟಕವನ್ನು ಕೇಂದ್ರೀಕರಿಸಿ ಇಂಗ್ಲಿಷ್ ಮತ್ತು ಕನ್ನಡದಲ್ಲಿ ಸುದ್ದಿ ಹಾಗೂ ಮಾಹಿತಿಯನ್ನು ಪ್ರಕಟಿಸುವ ಸ್ವತಂತ್ರ ಡಿಜಿಟಲ್ ಸುದ್ದಿ ಪ್ರಕಟಣೆಯಾಗಿದೆ. ಇದು ಫೆಬ್ರವರಿ 2020ರಿಂದ ಕಾರ್ಯನಿರ್ವಹಿಸುತ್ತಿದೆ.

ಉಪಯುಕ್ತ ಕೊಂಡಿಗಳು

  • ಬೆಂಗಳೂರು ಲೈವ್ ಕುರಿತು
  • ಸಂಪರ್ಕಿಸಿ
  • ಸಂಪಾದಕೀಯ ಮಾನದಂಡಗಳು ಮತ್ತು ತಿದ್ದುಪಡಿ ನೀತಿ
  • ಪ್ರಕಾಶಕರು, ಸಂಪಾದಕೀಯ ಹೊಣೆಗಾರಿಕೆ ಮತ್ತು ದೂರು ಪರಿಹಾರ
  • ಮಾಲೀಕತ್ವ ಮತ್ತು ಹಣಕಾಸು ಪಾರದರ್ಶಕತೆ
  • ನಮ್ಮೊಂದಿಗೆ ಜಾಹೀರಾತು ನೀಡಿ
  • ಗೌಪ್ಯತಾ ನೀತಿ
  • ಸೇವಾ ನಿಯಮಗಳು
  • ಪತ್ರಿಕಾ ಪ್ರಕಟಣೆ ಸಲ್ಲಿಸಿ

ಇತ್ತೀಚಿನ ಸುದ್ದಿಗಳು

  • ಬನ್ನೇರುಘಟ್ಟ ಬಳಿ 400 ಕೆವಿ ಲೈನ್‌ನಲ್ಲಿ ಸಿಲುಕಿದ್ದ ಕಪ್ಪು ಹದ್ದು: ವಿದ್ಯುತ್ ಕಡಿತವಿಲ್ಲದೆ ರಕ್ಷಣೆ
  • ಪೂರ್ವ ಬೆಂಗಳೂರು ಪೊಲೀಸರಿಂದ ಸ್ಪಾ, ಮಸಾಜ್ ಸೆಂಟರ್‌ಗಳ ತಪಾಸಣೆ: ಸಿಸಿಟಿವಿ, ಗ್ರಾಹಕರ ದಾಖಲೆ ಪರಿಶೀಲನೆ
  • ಮಂಡ್ಯ ARAI: ಭೂಮಿ ಹಸ್ತಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಜನವರಿ 10ರ ಗಡುವು; ಈ ಮೊದಲೇ ಎಚ್ಚರಿಸಿದ್ದ ಎಚ್.ಡಿ. ಕುಮಾರಸ್ವಾಮಿ
  • ಯುಜಿ ಆಯುಷ್ 2026: ಸ್ಟ್ರೇ ವೇಕೆನ್ಸಿ ಸುತ್ತಿನ ತಾತ್ಕಾಲಿಕ ಫಲಿತಾಂಶ ಪ್ರಕಟ; ನ.29ರ ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ
©Copyright 2025 The Bengaluru Live All rights reserved. | MoreNews by AF themes.