ಬೆಂಗಳೂರು:
ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿರುವ ಜೆಡಿಎಸ್,ರಾಜ್ಯದಲ್ಲಿ ಪಕ್ಷವ ನ್ನು ಸದೃಢಗೊಳಿಸಲು ಏಳು ವಿಭಾಗಗಳ ನ್ನು ರಚಿಸಿದ್ದು,ಪ್ರತಿ ವಿಭಾಗಕ್ಕೂ ಪ್ರಮುಖರನ್ನು ವೀಕ್ಷಕರನ್ನಾಗಿ ನಿಯೋಜನೆ ಮಾಡಿದೆ.
ಕಲ್ಯಾಣ ಕರ್ನಾಟಕ,ಬೆಳಗಾವಿ,ಮೈಸೂರು,ಬೆಂಗಳೂರು ನಗರ ವಿಭಾಗ ಮತ್ತು ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ,ದಾವಣಗೆರೆ,ಕೊಡಗು ಜಿಲ್ಲೆಯ ನ್ನೊಳಗೊಂಡ ಒಂದು ವಿಭಾಗ,ತುಮ ಕೂರು,ರಾಮನಗರ,ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನೊಳಗೊಂಡ ಒಂದು ವಿಭಾಗ ಹಾಗೂ ಚಿಕ್ಕಬಳ್ಳಾಪುರ ಹಾಗು ಕೋಲಾರ ಜಿಲ್ಲೆಯನ್ನೊಳಗೊಂಡ ಒಂದು ವಿಭಾಗವಾಗಿ ರಚನೆ ಮಾಡ ಲಾಗಿದೆ.ಪ್ರತಿ ವಿಭಾಗಕ್ಕೂ ವೀಕ್ಷಕರನ್ನು ನೇಮಕ ಮಾಡಲಾಗಿದೆ.ಕಲ್ಯಾಣ ಕರ್ನಾಟಕ ಮತ್ತು ಬೆಳಗಾವಿ ವಿಭಾಗಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.
ಸಂಕ್ರಾಂತಿ ಬಳಿಕ ಪಕ್ಷಕ್ಕೆ ಹೊಸ ಸ್ವರೂಪ ನೀಡಲಾಗುವುದು ಎಂದು ಹೇಳಿದಂತೆ ಮಾಜಿ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಕ್ಷದ ಕಚೇರಿ ಜೆ.ಪಿ.ಭ ವನದಲ್ಲಿ ಜೆಡಿಎಸ್‌ನ ಪ್ರಮುಖ ನಾಯ ಕರ ಸಭೆ ನಡೆಸಿದರು.ಸಭೆಯಲ್ಲಿ ಪಕ್ಷವನ್ನು ಸದೃಢಗೊಳಿಸುವ ಕುರಿತು ೩ತಾಸುಗಳಿಗಿಂತ ಅಧಿಕ ಸಮಯ ಚರ್ಚೆ ನಡೆಸಿದರು.
ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಕೋರ್‌ಕಮಿಟಿ ರಚನೆ ಕುರಿತು ನಡೆದ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ, ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ,ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ,ಸಂಸದ ಪ್ರಜ್ವಲ್ ರೇವ ಣ್ಣ ಸೇರಿದಂತೆ ಇತರರು ಭಾಗವಹಿಸಿದ್ದರು. UNI