Home ರಾಜಕೀಯ ನನ್ನ ಹಾಗೂ ಪಕ್ಷದ ತಂಟೆಗೆ ಬಂದರೆ ಹುಷಾರ್…!

ನನ್ನ ಹಾಗೂ ಪಕ್ಷದ ತಂಟೆಗೆ ಬಂದರೆ ಹುಷಾರ್…!

40
0
Advertisement
bengaluru

ಮುಖ್ಯಮಂತ್ರಿ ಬಿಎಸ್ ವೈಗೆ-ಮಾಜಿ ಮುಖ್ಯಮಂತ್ರಿ ಎಚ್ಚರಿಕೆ

ಬೆಂಗಳೂರು:

‘ಜೆಡಿಎಸ್ ಪಕ್ಷದ ಸುದ್ದಿಗೆ ಬರಬೇಡಿ.ನನ್ನ ಸುದ್ದಿಗೆ ಬಂದರೆ ಸರಿ ಇರುವುದಿಲ್ಲ. ಹೇಗೋ ಸುಭದ್ರವಾಗಿದ್ದೀರಿ. ನಾನು ಕೈ ಹಾಕಿದರೆ ಸರಿ ಇರಲ್ಲ.ನನ ತಂಟೆಗೆ ಬಂದರೆ ಹುಷಾರ್.’ಹೀಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಹಾಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಜೆ.ಪಿ.ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಲಕ್ಷಾಂತರ ಕಾರ್ಯಕರ್ತರ ಶಕ್ತಿ ಇರುವ ಜೆಡಿ ಎಸ್ ಬಗ್ಗೆ ಲಘುವಾಗಿ ಮಾತನಾಡಿದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಕೂಲ ಪರಿಸ್ಥಿತಿ ಎದುರಿಸ ಬೇಕಾಗುತ್ತದೆ.ಜೆಡಿಎಸ್ ಮುಗಿಸಲು ಯಡಿಯೂರಪ್ಪ ಇನ್ನೊಂದು ಜನ್ಮ ಹುಟ್ಟಿಬಂದರೂ ಆಗುವುದಿಲ್ಲ.ಈವ ರೆಗೆ ನನ್ನ ಪಕ್ಷದ ತಂಟೆಗೆ ಬಂದಿಲ್ಲ.ನನ್ನ ತಂಟೆಗೆ ಬಂದರೆ ಹುಷಾರ್.ನಿಮ್ಮ ಬಂಡವಾಳ ನನ್ನ ಕೈಯಲ್ಲಿದೆ ಎಂ ದು ಟೀಕಾಪ್ರಹಾರ ನಡೆಸಿದರು.

೨೦೦೮ರಲ್ಲಿಯೇ ಜೆಡಿಎಸ್ ಮುಗಿಸುತ್ತೇನೆ,ಅಪ್ಪ-ಮಗನನ್ನು ಮುಗಿಸುವುದಾಗಿ ಹೇಳಿದ್ದರು.ಬಳಿಕ ರಾಜ ಕಾರಣ ಏನಾಯಿತು ಗೊತ್ತಿದೆಯಾ? ಮೂವರು ಮುಖ್ಯಮಂತ್ರಿ ಬದಲಾದರು.ಜೆಡಿಎಸ್ ನಿರ್ನಾಮ ಮಾಡುತ್ತೇವೆ ಎಂ ದು ಹೇಳಿದವರು ಎಲ್ಲೆಲ್ಲೋ ಹೋಗಿದ್ದಾರೆ.ನನ್ನ ಪಕ್ಷದ ಲಘುವಾಗಿ ಮಾತನಾಡಬೇಡಿ.ಅಧಿಕಾರದ ಮದದಿಂದ ಮಾತನಾಡುತ್ತಿದ್ದಾರೆ.ಮುಂದಿನ ಬಾರಿಯೂ ನಾವೇ ಎಂದು ಬೀಗುತ್ತಿದ್ದಾರೆ.ಈ ಹಿಂದೆ ಇದೇ ಯಡಿಯೂರಪ್ಪ ೧೦ ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ ಎಂದಿದ್ದರು.ಆಮೇಲೆ ಅವರು ಎಲ್ಲಿ ಹೋದರು ಎಂದು ವ್ಯಂಗ್ಯವಾ ಡಿದರು. UNI

bengaluru bengaluru

bengaluru

LEAVE A REPLY

Please enter your comment!
Please enter your name here