Home ಬೆಂಗಳೂರು ನಗರ 40 ವರ್ಷಗಳಿಂದ ಅತಿಕ್ರಮಿಸಿದ ಜಮೀನು ಸರ್ಕಾರದ ವಶಕ್ಕೆ: ಜೆ ಮಂಜುನಾಥ್

40 ವರ್ಷಗಳಿಂದ ಅತಿಕ್ರಮಿಸಿದ ಜಮೀನು ಸರ್ಕಾರದ ವಶಕ್ಕೆ: ಜೆ ಮಂಜುನಾಥ್

39
0
Encroached Government land recovered after 40 years in Bengaluru

ಬೆಂಗಳೂರು:

ಸುಮಾರು 40 ವರ್ಷಗಳಿಂದ ಅತಿಕ್ರಮಿಸಿಕೊಂಡು ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ನಡೆಸುತ್ತಿದ್ದ, ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಟ್ಟಡ ಸೇರಿದಂತೆ ಒಟ್ಟು 3.20 ಎಕರೆ ಭೂಮಿಯನ್ನು ಇಂದು ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಜೆ ಮಂಜುನಾಥ್ ಅವರು ತಿಳಿಸಿದರು.

ಸರ್ಕಾದ ಆದೇಶದಂತೆ ತಮ್ಮ ನೇತೃತ್ವದಲ್ಲಿ ಜಾರಿದಳದ ವಿಶೇಷ ಜಿಲ್ಲಾಧಿಕಾರಿ ದುರ್ಗಾಶ್ರೀ, ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಡಾ. ಶಿವಣ್ಣ, ತಹಸೀಲ್ದಾರ್ ರಮಲಕ್ಷ್ಮಯ್ಯ ಅವರ ತಂಡವು ಕಾರ್ಯಾಚರಣೆ ನಡೆಸಿದ್ದು, ಬೆಂಗಳೂರು ದಕ್ಷಿಣ ತಾಲ್ಲೂಕಿನ, ಬೇಗೂರು ಹೋಬಳಿಯಲ್ಲಿರುವ ಹುಳಿಮಾವು ಗ್ರಾಮದ ಸರ್ವೆ ನಂ. 63 ರಲ್ಲಿದ್ದ ಸುಮಾರು ₹. 37.00 ಕೋಟಿ ಬೆಲೆ ಬಾಳುವ ಆಸ್ತಿಯನ್ನು ಸರ್ಕಾರದ ಸಪರ್ದಿಗೆ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಅಕ್ರಮವಾಗಿ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು, ಶಿಕ್ಷಣ ಸಂಸ್ಥೆಯನ್ನು ನಡೆಸಿದ್ದಲ್ಲದೇ, ಸಂಸ್ಥೆಯು ಈ ಹಿಂದೆ ಜಮೀನನ್ನು ಗುತ್ತಿಗೆ ಅಥವಾ ಮಂಜೂರಿ ಮಾಡಿಕೊಡಲು ಕೋರಿ ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸುತ್ತಾ ಬಂದಿತ್ತು. ಸರ್ಕಾರವು ಈ ಮನವಿಗಳನ್ನು 2010 ರಲ್ಲೆ ತಿರಸ್ಕರಿಸಿದ್ದು, ಜಮೀನನ್ನು ಸರ್ಕಾರದ ಸುಪರ್ದಿಗೆ ಪಡೆದುಕೊಳ್ಳಲು ಸೂಚಿಸಿತ್ತು.

ಸಂಸ್ಥೆಯು ವಿವಿಧ ನ್ಯಾಯಾಲಯಗಳಲ್ಲಿ ಈ ಕುರಿತು ಮೇಲ್ಮನವಿ ಸಲ್ಲಿಸಿ ಅವುಗಳನ್ನು ಮಾನ್ಯ ನ್ಯಾಯಾಲಯದಿಂದ ತಿರಸ್ಕರಿಸಲಾಗಿತ್ತು. ನಂತರ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಮೇಲ್ಮನವಿಯನ್ನೂ ಕೂಡ ತಿರಸ್ಕರಿಸಲಾಗಿದೆ ಎಂದು ಅವರು ವಿವರಿಸಿದರು.

LEAVE A REPLY

Please enter your comment!
Please enter your name here