Home ಬೆಂಗಳೂರು ನಗರ ನಾನು ಅದೃಷ್ಟವಂತ ಮುಖ್ಯಮಂತ್ರಿ: ಬೊಮ್ಮಾಯಿ

ನಾನು ಅದೃಷ್ಟವಂತ ಮುಖ್ಯಮಂತ್ರಿ: ಬೊಮ್ಮಾಯಿ

101
0
Chief Minister Basavaraj Bommai listening to public grievances near his RT Nagar residence in Bengaluru on Saturday morning.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಅಹವಾಲು ಸ್ವೀಕರಿಸಿದರು.
bengaluru

ನೂತನ ಸಚಿವರಿಗೆ ಗಂಟೆಯೊಳಗೆ ಖಾತೆ ಹಂಚಿಕೆ: ಸಿಎಂ ಘೋಷಣೆ

ಬೆಂಗಳೂರು:

‘ಯಾರೂ ಯಾವುದೇ ಖಾತೆಗೂ ಪಟ್ಟು ಹಿಡಿದಿಲ್ಲ. ನಾನು ಅದೃಷ್ಟವಂತ ಮುಖ್ಯಮಂತ್ರಿ. ಸಚಿವ ಸಂಪುಟದವರು ಯಾರೂ ಪ್ರಭಾವ ಬೀರಿಲ್ಲ. ಕೆಲವರು ಇಂಥ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಕೇಳಿದ್ದಾರೆಯೇ ಹೊರತು ಯಾರ ಒತ್ತಡವೂ ಇಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

‘ನೂತನ ಸಚಿವರಿಗೆ ಖಾತೆ ಹಂಚಿಕೆ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ. ಬಹುತೇಕ ಇನ್ನು ಒಂದು ಗಂಟೆಯ ಒಳಗೆ ನೂತನ ಸಚಿವರಿಗೆ ಖಾತೆ ಹಂಚಿ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿ ಓದಿ: ಹೊಸ ಸಚಿವರ ಖಾತೆಗಳ ಹಂಚಿಕೆ: ಸಿಎಂಗೆ ಬೆಂಗಳೂರ್ ಅಭಿವೃದ್ಧಿ ಸೇರಿ ಹಣಕಾಸು, ಆರಗ ಜ್ಞಾನೇಂದ್ರಗೆ ಗೃಹ ಖಾತೆ

bengaluru

ಮುಖ್ಯಮಂತ್ರಿ ಆರ್.ಟಿ. ನಗರದಲ್ಲಿರುವ ತರಳುಬಾಳು ಮಠಕ್ಕೆ ಶನಿವಾರ ತೆರಳಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ದಾವಣಗೆರೆ ಸಂಸದರಾದ ಜಿ.ಎಂ. ಸಿದ್ದೇಶ್ವರ್ ಅವರು ಉಪಸ್ಥಿತರಿದ್ದರು.

‘ಕೋವಿಡ್‌ ಸಭೆಯ ಬಳಿಕ ವಚನಾನಂದ ಸ್ವಾಮೀಜಿ ಭೇಟಿ ಮತ್ತು ಸಿದ್ದಗಂಗಾ ಮಠಕ್ಕೆ ತೆರಳಿ ರಾತ್ರಿ ತಡವಾಗಿ ಬಂದೆ. ಹೀಗಾಗಿ, ಖಾತೆ ಹಂಚಿಕೆ ಸಾಧ್ಯ ಆಗಿಲ್ಲ. ರಾತ್ರಿ ತಡವಾಗಿ ಖಾತೆ ಹಂಚಿಕೆ ಮಾಡಬೇಡಿ ಎಂದು ಕೆಲವು ಸಲಹೆ ನೀಡಿದರು. ಹೀಗಾಗಿ ಮಾಡಿಲ್ಲ’ ಎಂದು ಸಮರ್ಥನೆ ನೀಡಿದರು.

bengaluru

LEAVE A REPLY

Please enter your comment!
Please enter your name here