Home ರಾಜಕೀಯ ಸಚಿವ ಈಶ್ವರಪ್ಪ ಉಚ್ಚಾಟಿಸಿ ಇಲ್ಲ ಸಿಎಂ ರಾಜಿನಾಮೆ ಕೊಡಲಿ: ಡಿಕೆಶಿ ಪಟ್ಟು

ಸಚಿವ ಈಶ್ವರಪ್ಪ ಉಚ್ಚಾಟಿಸಿ ಇಲ್ಲ ಸಿಎಂ ರಾಜಿನಾಮೆ ಕೊಡಲಿ: ಡಿಕೆಶಿ ಪಟ್ಟು

26
0
bengaluru

ಮಂಗಳೂರು:

ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿ ವಿರುದ್ಧವೇ ರಾಜ್ಯಪಾಲರು, ರಾಜ್ಯ ಬಿಜೆಪಿ ಉಸ್ತುವಾರಿಗೆ ಪತ್ರ ಬರೆದಿರುವುದನ್ನು ಸಮರ್ಥಿಸಿಕೊಂಡಿದ್ದಾರೆ. ಇಂತಹ ಸಚಿವರನ್ನು ಕೂಡಲೇ ಸಚಿವ ಸ್ಥಾನದಿಂದ ಉಚ್ಛಾಟಿಸಿ, ಇಲ್ಲವಾದರೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈವರೆಗೆ ಯಾವುದೇ ಒಬ್ಬರೇ ಒಬ್ಬ ಸಚಿವರು ಸಿಎಂ ಆಡಳಿತದ ಬಗ್ಗೆ ಚರ್ಚೆ ಮಾಡಿಲ್ಲ. ಆದರೆ ಸಚಿವ ಈಶ್ವರಪ್ಪನವರು ಮಾಡಿದ್ದಾರೆ. ಈ ಮೂಲಕ ದೇಶಕ್ಕೆ ಪಾಠ ಹೇಳುತ್ತಿದ್ದವರು ಆಡಳಿತ ಪಾಠವನ್ನು ದೇಶಕ್ಕೆ ಮಾಡಿದ್ದಾರೆ ಎಂದರು.

ಇನ್ನೂ ಮುಂದುವರೆದು ಮಾತನಾಡಿದಂತ ಅವರು, ಸಚಿವ ಈಶ್ವರಪ್ಪ ಬರೆದಿರುವಂತ ಪತ್ರ ಕೇವಲ ಪತ್ರವಲ್ಲ. ರಾಜ್ಯ ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ.

bengaluru

. ರಾಜ್ಯಪಾಲರಿಗೆ ಪತ್ರ ಬರೆದು ಸಿಎಂ ಮೇಲೆ ವಿಶ್ವಾಸ ಇಲ್ಲ ಎಂದಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿದಿದೆ. ಸಚಿವರಿಗೆ ಸಿಎಂ ಮೇಲೆ ವಿಶ್ವಾಸ ಇಲ್ಲ ಎಂಬುದು ಸಾಬೀತಾಗಿದೆ ಎಂದು ಹೇಳಿದರು. ಸಿಡಿ ಪ್ರಕರಣ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ ಅವರು ನನಗೆ ಗೊತ್ತು, ಯಾವ್ಯಾವ ದಿಕ್ಕಿನಲ್ಲಿ ಏನೇನು ನಡೆಯುತ್ತಿದೆ. ಸದ್ಯ ಎಲ್ಲವನ್ನು ಕಾದು ನೋಡುವೆ ಎಂದು ಹೇಳಿದರು.

bengaluru

LEAVE A REPLY

Please enter your comment!
Please enter your name here