ಬೆಂಗಳೂರು:
ಕರ್ನಾಟಕ ಲೋಕಸೇವಾ ಆಯೋಗದ ಎಫ್ಡಿಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನ ಬೆಳಗಾವಿಯಿಂದ ಬಂಧಿಸಲಾಗಿದೆ.
ಬೆಳಗಾವಿ ಮೂಲದ ಶಿವಲಿಂಗ ಪಾಟೀಲ್ ಬಂಧಿತ ಆರೋಪಿ.
Continuing the investigation into the FDA question paper leak case, yday CCB arrests one of the main accused from Belgavi.. so far 25 accused arrested in this case.. @CPBlr @BlrCityPolice https://t.co/4dtt3lqqzG
— Sandeep Patil IPS (@ips_patil) February 17, 2021
ಸಿಸಿಬಿ ಪೊಲೀಸರು ಬೆಳಗಾವಿಯಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ. ಈತ ದಾರಿದೀಪ ಹೆಸರಿನ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್ ನಡೆಸುತ್ತಿದ್ದ. 1 ವರ್ಷದ ಹಿಂದೆ ಕೋಚಿಂಗ್ ಸೆಂಟರ್ ಮುಚ್ಚಲಾಗಿತ್ತು. ಪರೀಕ್ಷೆ ಎದುರಿಸುವವರನ್ನ ಶಿವಲಿಂಗ ಪಾಟೀಲ್ ಸಂಪರ್ಕಿಸುತ್ತಿದ್ದ. ಮತ್ತೋರ್ವ ಆರೋಪಿ ರಾಚಪ್ಪನಿಂದ ಪಡೆದ ಪ್ರಶ್ನೆಪತ್ರಿಕೆಯನ್ನ ಅವರಿಗೆ ಒದಗಿಸುತ್ತಿದ್ದ ಎನ್ನಲಾಗಿದೆ. ಶಿವಲಿಂಗ ಪಾಟೀಲ್ನನ್ನ ಬಂಧಿಸಿರೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.