Five accused arrested who beat with machete and robbed 60 lakhs | ಮಚ್ಚಿನಿಂದ ಹೊಡೆದು 60 ಲಕ್ಷ ದೋಚಿದ್ದ ಐವರು ಆರೋಪಿಗಳು ಅಂದರ್
ಬೆಂಗಳೂರು:
ಮಚ್ಚಿನಿಂದ ಹೊಡೆದು 60 ಲಕ್ಷ ದೋಚಿದ್ದ ಐವರು ಆರೋಪಿಗಳನ್ನ ಬಸವೇಶ್ವರ ನಗರ ಪೊಲೀಸರಿಂದ ಬಂಧಿಸಿದ್ದಾರೆ. ಸೈಯದ್ ಇರ್ಫಾನ್ , ರಿಜ್ವಾನ್ , ದಿವಾಕರ, ಸತೀಶ್ ,ಅಶ್ರಫ್ ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ 53 ಲಕ್ಷ ನಗದು ವಶಕ್ಕೆ ಪಡೆಯಲಾಗಿದೆ.
ಬಸವೇಶ್ವರ ನಗರದ ಆದರ್ಶ್ ಲೇಔಟ್ ನಲ್ಲಿ ಡಿಸೆಂಬರ್ 11 ನಡೆದಿದ್ದ ಘಟನೆಯಾಗಿದ್ದು ಪಾನ್ ಬ್ರೋಕರ್ ಕೆಲಸ ಮಾಡುವ ಸಂಕೇತ್ ಎಂಬಾತನಿಂದ 60 ಲಕ್ಷ ಹಣವನ್ನ ದರೋಡೆ ಮಾಡಲಾಗಿತ್ತು.
ಸಂಕೇತ್ ಗೆ ಸಂಪರ್ಕ ಮಾಡಿ ಆದರ್ಶ ನಗರಕ್ಕೆ ಕರೆಸಿಕೊಂಡಿದ್ದ ಆರೋಪಿಗಳು ಕಡಿಮೆ ಬೆಲೆಗೆ ದುಬೈ ನಿಂದ ಚಿನ್ನ ತರಿಸಿದ್ದೆವೇ ಎಂದು ಹೇಳಿದ್ರು ಹಣ ತೆಗೆದುಕೊಂಡು ಬನ್ನಿ ದುಬೈ ರೇಟ್ ಗೆ ಚಿನ್ನವನ್ನು ಕೊಡ್ತಿನಿ ಎಂದು ಹೇಳಿದ್ರು ಏರಿಯಾಗೆ ಬಂದ ಬಳಿಕ ಹಣಕೊಡುವಂತೆ ಬೆದರಿಕೆ ನೀಡಿದರು.
ಚಿನ್ನ ಇಲ್ಲದೇ ಸುಳ್ಳು ಹೇಳಿ ಹಣ ದೋಚುವ ಪ್ಲಾನ್ ಮಾಡಿದ್ದ ಗ್ಯಾಂಗ್ ಹಣ ಕೊಡಲು ಒಪ್ಪದೇ ಇದ್ದಾಗ ಮಚ್ಚಿನಿಂದ ಹಲ್ಲೆ ಮಾಡಿದ್ದ ಗ್ಯಾಂಗ್ ಬಳಿಕ ಹಣದ ಸಹಿತ ಎಸ್ಕೇಪ್ ಆಗಿದ್ರ ದೋಚಿದ್ದ ಹಣವನ್ನು ಐವರು ಹಂಚಿಕೊಂಡಿದ್ದರು.
ಅಶ್ರಫ್ ಬಳಿ 25 ಸಾವಿರ. ,ಸತೀಶ್ ಬಳಿ 25 ಸಾವಿರ ,ದಿವಾಕರ್ ಬಳಿ 50 ಸಾವಿರ , ಮಹದಮ್ ಇರ್ಫಾನ್ ಬಳಿ 2 ಲಕ್ಷ , ಮಹಮ್ಮದ್ ರಿಜ್ವಾನ್ ಬಳಿ 50 ಲಕ್ಷ ಹಣ ಮತ್ತು ಒಂದು ಕಾರು ವಶಕ್ಕೆ ಪಡೆಯಲಾಗಿದೆ.