Home ಬೆಂಗಳೂರು ನಗರ ಆರ್ ಎಫ್ ಎ ಘಟಕಕ್ಕ ಕೇಂದ್ರ ಗೃಹ ಸಚಿವರ ಚಾಲನೆ, ಕನ್ನಡ ಕಡೆಗಣನೆಗೆ ಮಾಜಿ ಸಿಎಂ...

ಆರ್ ಎಫ್ ಎ ಘಟಕಕ್ಕ ಕೇಂದ್ರ ಗೃಹ ಸಚಿವರ ಚಾಲನೆ, ಕನ್ನಡ ಕಡೆಗಣನೆಗೆ ಮಾಜಿ ಸಿಎಂ ಆಕ್ಷೇಪ

55
0

ಬೆಂಗಳೂರು:

ಶಿವಮೊಗ್ಗದ ಭದ್ರಾವತಿಯಲ್ಲಿ ಶನಿವಾರ ಆರ್ ಎಪ್ ಎ ಘಟಕಕ್ಕೆ ಗೃಹ ಸಚಿವ ರಾದ ಅಮಿತ್ ಷಾ ಅವರು ಶಂಕುಸ್ಥಾಪನೆ ನೆರವೇರಿಸಿದ್ದು,ಅಡಿಗಲ್ಲು ಫಲಕ ಅನಾವರಣಗೊಳಿಸಿದ್ದಾರೆ.ಅಡಿಗ ಲ್ಲು ಫಲಕಗಳು ಹಿಂದಿ ಮತ್ತು ಆಂಗ್ಲಭಾಷೆಯಲ್ಲಿವೆ.ಇಲ್ಲಿ ಕನ್ನಡದ ಅವಗಣನೆ ನಿಚ್ಚಳವಾಗಿ ಕಾಣುತ್ತದೆ ಎಂ ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

Screenshot 1
ಫೈಲ್ ಪಿಕ್ಸ್

ಈ ಬಗ್ಗೆ ಟ್ವೀಟ್ ಮಾಡಿರುವ ಅವರು,ವೈವಿಧ್ಯಮಯ ಭಾರತ ತ್ರಿಭಾಷಾ ಸೂತ್ರ ಅಳವಡಿಸಿಕೊಂಡಿದ್ದು,ಆಯಾ ರಾಜ್ಯ ಭಾಷೆ ಗೌರವಿಸುವುದು ಕೇಂದ್ರ ಸರ್ಕಾರದ ಕರ್ತವ್ಯ.ಗೃಹ ಸಚಿವರೆ ತ್ರಿಭಾಷಾ ಸೂತ್ರವನ್ನು ಧಿಕ್ಕರಿಸಿರುವು ದು ಕನ್ನಡಕ್ಕೆ,ಕನ್ನಡಿ ಗರಿಗೆ ಮಾಡಿದ ಅಗೌರವ.ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು,ಉಪಮುಖ್ಯ ಮಂತ್ರಿಗಳು ನಾಡು-ನುಡಿಯ ಘನತೆಯನ್ನು ಮರೆತದ್ದು ಅತ್ಯಂತ ಖಂಡನೀಯ ಎಂದು ಖೇದ ವ್ಯಕ್ತಪಡಿಸಿ ದ್ದಾರೆ.

LEAVE A REPLY

Please enter your comment!
Please enter your name here