Home ಆರೋಗ್ಯ ಕೋವಿಡ್ 19: ಮಾಜಿ ಐಎಂಎ ಮುಖ್ಯಸ್ಥ ಡಾ.ಕೆ.ಕೆ. ಅಗರ್‌ವಾಲ್ ನಿಧನ

ಕೋವಿಡ್ 19: ಮಾಜಿ ಐಎಂಎ ಮುಖ್ಯಸ್ಥ ಡಾ.ಕೆ.ಕೆ. ಅಗರ್‌ವಾಲ್ ನಿಧನ

44
0

ನವದೆಹಲಿ:

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಭಾರತೀಯ ವೈದ್ಯಕೀಯ ಸಂಘದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಕೆ. ಅಗರ್‌ವಾಲ್ ಅವರು ಕೊರೋನಾ ವೈರಸ್‌ನಿಂದ ನಿಧನರಾಗಿದ್ದಾರೆ. ಅವರಿಗೆ 62 ವರ್ಷ ವಯಸ್ಸಾಗಿತ್ತು.

“ನಮ್ಮ ಪ್ರಿಯ ಡಾ.ಕೆ.ಕೆ. ಅಗರ್‌ವಾಲ್ ಅವರು ಮೇ 17 ರಂದು ರಾತ್ರಿ 11.30 ಕ್ಕೆ ನವದೆಹಲಿಯಲ್ಲಿ ಕೋವಿಡ್ ನೊಂದಿಗಿನ ಸುದೀರ್ಘ ಯುದ್ಧದ ನಂತರ ನಿಧನರಾದರು ಎಂದು ನಿಮಗೆ ತಿಳಿಸಲು ಇದು ನಮಗೆ ತುಂಬಾ ನೋವನ್ನುಂಟುಮಾಡುತ್ತದೆ” ಎಂದು ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.

ಏಮ್ಸ್ ಗೆ ದಾಖಲಾಗಿದ್ದ, ಕಳೆದ ಕೆಲವು ದಿನಗಳಿಂದ ವೆಂಟಿಲೇಟರ್ ಬೆಂಬಲದಲ್ಲಿದ್ದರು. ಹೃದ್ರೋಗ ತಜ್ಞರಾಗಿದ್ದ ಪದ್ಮಶ್ರೀ ಡಾ.ಕೆ.ಕೆ. ಅಗರ್‌ವಾಲ್ ಅವರು ತಮ್ಮ ಜೀವನವನ್ನು ಸಾರ್ವಜನಿಕರ ಹಿತಕ್ಕಾಗಿ ಮೀಸಲಿಟ್ಟಿದ್ದರು, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 2005 ರಲ್ಲಿ ಡಾ ಬಿ.ಸಿ ರಾಯ್ ಪ್ರಶಸ್ತಿಯನ್ನು ಪಡೆದ ಅಗರವಾಲ್ ಅವರೊಗೆ 2010 ರಲ್ಲಿ ಪದ್ಮಶ್ರೀ ಪ್ರದಾನ ಮಾಡಲಾಯಿತು.

LEAVE A REPLY

Please enter your comment!
Please enter your name here